Monday, October 6, 2014

Wildlife Messages 2014 ವನ್ಯಜೀವಿ ಸಂದೇಶಗಳು ೨೦೧೪

NATURE’S Incredible TECHNOLOGY AT WORK

 Sunday, 28 September 2014

Dear friend,

The technical marvels that our scientists have invented have indeed made us proud of our mental ability and intelligence that we are empowered with. As I try to understand more and more about the secrets of nature, I’m amazed by the volume of its knowledge treasure! Today most of the scientists speak in terms of Nano- technology.

Nano-technology aims at three things: 1. Miniature size of the machine, 2. Least power consumption, 3. Bio-degradability.

All of us know that the well coordinated movements of our body are due to the electric signals generated from the brain that pass through the nerves to the muscles. This applies to all animals, birds, fish and insects. But what about single celled organisms like bacteria? How do they move? Where is their brain or the nervous system?
The movement of a flagellated bacterium is nature's version of the electric motor. It is found in the membrane of many bacterial species and turns a propeller-like structure called a flagellum, enabling the bacterium to swim. The motor is 45 nanometres in diameter, made out of thousands of proteins and can rotate at speeds in excess of 30,000 rpm with efficiency close to 100%.

Scientists have synthesised the whole device in the lab. And it works! A single celled bacteria that evolved on this earth four billion years ago, has perfected a nano machine!

With all brainpower and machineries we, in fact, cannot compare ourselves with nature’s marvellous work.

Dear friend, it is time to celebrate! The hand-painted Wildlife Message Cards have completed 30 years, crossed sixty thousand mark and found their place in Limca Book of Records. I thank you for encouraging and supporting me by spreading the wildlife conservation messages to every nook and corner of the world, which alone, I could not have accomplished.

Over a period of these three decades, I might have painted more than 480 species of animals, birds and butterflies. For various reasons, I do not have all of them in my assemblage. I am sure that some of you still have them in your collection. I request you to please mail me the scanned copies of those wildlife message cards that you have received.

Let us join hands to make our only Earth, a place where all elements of life can live in health, happiness and harmony.
Thank you.
With warm regards,
Dr. S V Narasimhan                
                                                                                                                      
Special Wildlife Messenger of This Year

Indian Roller  (Coracias benghalensis)  This pigeon sized bird usually seen perched on a dry stump of a tree, has a big head, heavy bill, and a striking light and dark blue on the wings very conspicuous as brilliant bands in flight. It is the State bird of Karnataka and Andhra Pradesh. Lives near cultivations and is highly beneficial to farmers as it voraciously consumes insects. Known for its spectacular courtship display, rolling, twisting and nose-diving in the air!  

Total of hand-painted cards made: this year 1850; in 30 years 60,490. Total recipients: this year 1160; in 30 years 10,046. 
The Wildlife Message Cards are individually hand-painted and sent free to individuals throughout the world to mark the Wildlife Week. For previous years’ messages, please visit me at http://drsvnarasimhan.blogspot.com




ಪ್ರಕೃತಿ ಆವಿಷ್ಕರಿಸಿದ ಅದ್ಭುತ ತಂತ್ರಜ್ಞಾನ

ಭಾನುವಾರ, ೨೮ ಸೆಪ್ಟೆಂಬರ್ ೨೦೧೪

ಮಿತ್ರರೆ,
ನಿಸರ್ಗದಲ್ಲಿ ನಡೆಯುವ ವಿದ್ಯಮಾನಗಳ ಒಳಗುಟ್ಟುಗಳನ್ನು ಅರಿತುಕೊಳ್ಳುತ್ತಾ ಹೋದರೆ ಪ್ರತಿ ಕ್ಷಣ ಹೊಸ ಹೊಸ ವಿಚಾರಗಳು ಮನದಟ್ಟಾಗುತ್ತವೆ. ಈ ವಿಚಾರಗಳು ವರ್ತಮಾನದ ವಿಜ್ಞಾನಿಗಳನ್ನು ದಂಗುಪಡಿಸುತ್ತದೆ. ಪ್ರಕೃತಿಯ ಜ್ಞಾನಭಂಡಾರಕ್ಕೆ ಕೊನೆ ಮೊದಲಿಲ್ಲ. 

ಇತ್ತೀಚಿನ ವಿಜ್ಞಾನಿಗಳು ತಮ್ಮ ಎಲ್ಲಾ ಆವಿಷ್ಕಾರಗಳಲ್ಲೂ ನ್ಯಾನೋ ತಂತ್ರಜ್ಞಾನವನ್ನು ಬಳಸತೊಡಗಿದ್ದಾರೆ. ಒಂದು ಮೀಟರಿನ ೧೦-೯ , ಅಂದರೆ  ನೂರು ಕೋಟಿಯ ಒಂದು ಭಾಗವೇ ಒಂದು ನ್ಯಾನೋಮೀಟರ್. ಇದು ನಮ್ಮ ಅರಿವಿಗೂ ಮೀರಿದ ಸಣ್ಣ ಪ್ರಮಾಣದ ಗಾತ್ರ! ಅಷ್ಟು ಸಣ್ಣ ಸ್ಥಳದಲ್ಲಿ ಯಾವುದಾದರೂ ಯಂತ್ರವನ್ನು ಊಹಿಸಿಕೊಳ್ಳಲು ಸಾಧ್ಯವೆ?

ನ್ಯಾನೊ ವಿಜ್ಞಾನಿಗಳಿಗೆ ಮೂರು ಗುರಿಗಳು ಇವೆ - ೧. ಅತ್ಯಂತ ಸಣ್ಣ ಗಾತ್ರ, ೨. ಕನಿಷ್ಟ ವಿದ್ಯುತ್ ಬಳಕೆ, ೩. ಶೀಘ್ರದಲ್ಲಿ ಮಣ್ಣಾಗುವ ಗುಣ.

ನಾವು ಪ್ರತಿದಿನ ಚಲಿಸುವಾಗ ಮೆದುಳು ವಿದ್ಯುತ್ ಸಂಜ್ಞೆಗಳನ್ನು ನರಗಳ ಮೂಲಕ ಸ್ನಾಯುಗಳಿಗೆ ಕಳುಹಿಸುತ್ತದೆ. ಸ್ನಾಯುಗಳು ಸಂಕುಚಿತಗೊಂಡು ದೇಹದ ಅಂಗಾಂಗಗಳು ವ್ಯವಸ್ಥಿತ ರೀತಿಯಲ್ಲಿ ಚಲಿಸುತ್ತವೆ. ಇದನ್ನು ಪ್ರಾಣಿ, ಪಕ್ಷಿ, ಜಲಚರಗಳು ಮತ್ತು ಕೀಟಗಳಲ್ಲಿಯೂ ಕಾಣುತ್ತೇವೆ. ಆದರೆ ಏಕಾಣುಜೀವಿಯಾದ ಒಂದು ಬ್ಯಾಕ್ಟೀರಿಯಾಗೆ ಮೆದುಳು ಎಲ್ಲಿದೆ? ಅದು ಚಲಿಸುವುದು ಹೇಗೆ? ಈ ಬಗ್ಗೆ ಸಂಶೋಧನೆ ನಡೆದಿದೆ. ಕಶಾಂಗಗಳುಳ್ಳ ಬ್ಯಾಕ್ಟೀರಿಯಾಗೆ ಕಶಾಂಗದ ತುದಿಯಲ್ಲಿ ಒಂದು ಸಂವೇದನಾಶೀಲ ಸೂಕ್ಷ್ಮಗ್ರಾಹಿ ಮತ್ತು ಅದರ ಬುಡದಲ್ಲಿ ಒಂದು ವಿಶೇಷವಾದ ಸಂಕೀರ್ಣ ಪ್ರೋಟೀನ್ ವ್ಯವಸ್ಥೆ ಇದೆ. ಈ ವ್ಯವಸ್ಥೆಯ ಮೂಲಕ ಕನಿಷ್ಟ ವಿದ್ಯುತ್ ಹಾಯಿಸಿದಾಗ ಕಶಾಂಗ ಗಿರ್ರನೆ ತಿರುಗುತ್ತದೆ, ಅದು ಕೂಡ ಸೆಕೆಂಡಿಗೆ ಐನೂರು ಸಲ! ಈ ಕಶಾಂಗಗಳ ಒಟ್ಟಾರೆ ಸುತ್ತುವಿಕೆಯಿಂದ ಬ್ಯಾಕ್ಟೀರಿಯಾ ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುತ್ತದೆ. ಈ ಒಟ್ಟು ವ್ಯವಸ್ಥೆಯ ಗಾತ್ರ ೪೫ ನ್ಯಾನೋಮೀಟರ್‌ಗಳು! ಪ್ರಯೋಗ ಶಾಲೆಯಲ್ಲಿ ಈ ವಿಶಿಷ್ಟ ಪ್ರೋಟೀನ್ ವ್ಯವಸ್ಥೆಯನ್ನು ಪುನರ್ನಿರ್ಮಾಣ ಮಾಡಿದ್ದಾರೆ. ವಿದ್ಯುತ್ ಹಾಯಿಸಿದಾಗ ಈ ಮೋಟರ್ ತಿರುಗುತ್ತದೆ!

ಬ್ಯಾಕ್ಟೀರಿಯಾಗಳು ಭೂಮಿಯ ಮೇಲೆ ವಿಕಾಸ ಹೊಂದಿ ನಾನೂರು ಕೋಟಿ ವರ್ಷಗಳಾಗಿವೆ. ಆ ಕಾಲಘಟ್ಟದಲ್ಲಿಯೇ ಅವು ನ್ಯಾನೋ ತಂತ್ರಜ್ಞಾನವನ್ನು ಬಳಸಿದ್ದವು ಅಂದರೆ ನಂಬಲೂ ಸಾಧ್ಯವಿಲ್ಲ. ಹುಲುಮಾನವರಾದ ನಾವು ನಿಸರ್ಗದ ರಚನಾತ್ಮಕ ಪ್ರತಿಭೆಗೆ ಸರಿಸಾಟಿಯೇ ಅಲ್ಲ ಅನಿಸುವುದಿಲ್ಲವೆ?

ಮಿತ್ರರೆ, ನಿಜಕ್ಕೂ ಇದು ನಾವೆಲ್ಲ ಸಂಭ್ರಮಿಸುವ ಸಮಯ! ಏಕೆಂದರೆ, ವನ್ಯಜೀವಿ ಸಂದೇಶ ಪತ್ರಗಳಿಗೆ ಮೂವತ್ತು ವರ್ಷ ತುಂಬಿದೆ. ಈ ಸುದೀರ್ಘ ಅವಧಿಯಲ್ಲಿ ಅರವತ್ತು ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಪ್ರಪಂಚದ ಎಲ್ಲೆಡೆ ಹರಡುವ ಕಾರ್ಯದಲ್ಲಿ ನೀವೆಲ್ಲ ಕೈ ಜೋಡಿಸಿದ್ದೀರಿ. ಈ ಸಾಧನೆಯನ್ನು ಲಿಮ್ಕಾ ದಾಖಲೆ ಪುಸ್ತಕದಲ್ಲಿ ನಮೂದಿಸಲಾಗಿದೆ. ಖಂಡಿತವಾಗಿ ನನ್ನೊಬ್ಬನಿಂದಲೇ ಅಸಾಧ್ಯವಾದ ಕೆಲಸವಿದು. 

ಕಳೆದ ಮೂರು ದಶಕಗಳಲ್ಲಿ ನಾನು ಸುಮಾರು ೪೮೦ ಪ್ರಾಣಿ-ಕ್ಷಿ-ಪತಂಗಗಳ ಚಿತ್ರ ಬಿಡಿಸಿದ್ದೇನೆ. ಕಾರಣಾಂತರಗಳಿಂದ ಅವೆಲ್ಲವೂ ನನ್ನ ಸಂಗ್ರಹದಲ್ಲಿ ಇಲ್ಲ. ಅವುಗಳಲ್ಲಿ ಕೆಲವು ನಿಮ್ಮಲ್ಲಿರಬಹುದೆಂದು ಭಾವಿಸುತ್ತೇನೆ. ದಯವಿಟ್ಟು ಅವುಗಳ ನೆರಳಚ್ಚನ್ನು ಮಿಂಚಂಚೆಯ ಮೂಲಕ ನನಗೆ ಕಳುಹಿಸಬೇಕೆಂದು ನಿಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ. 

ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು. ವಿಶ್ವಾಸದೊಂದಿಗೆ,                                                                                   
ಡಾ. ಎಸ್. ವಿ. ನರಸಿಂಹನ್
ವಿರಾಜಪೇಟೆ, ದ. ಕೊಡಗು, ಕರ್ನಾಟಕ ೫೭೧ ೨೧೮
೯೪೮೦೭೩೦೮೮೪  

ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ

ನೀಲಕಂಠ: ಇದು ಕರ್ನಾಟಕದ ರಾಜ್ಯ ಹಕ್ಕಿ. ಒಂಟಿಯಾಗಿ ಮರದ ಬೊಡ್ಡೆಯ ಮೇಲೆ ಕುಳಿತಿರುವಾಗ ಅನಾಕರ್ಷಕವಾಗಿ ಕಂಡರೂ ಒಂದು ಸಾರಿ ಹಾರಲು ಎದ್ದರೆ ಫಕ್ಕನೆ ಕಾಣುವ ಉಜ್ವಲವಾದ ತಿಳಿನೀಲಿ-ಕಡುನೀಲಿ ಬಣ್ಣದ ರೆಕ್ಕೆಗಳು ಮನಮೋಹಕ. ಕೀಟ ಭಕ್ಷಕನಾದ್ದರಿಂದ ರೈತನ ಆಪ್ತಮಿತ್ರ. ಸಂಗಾತಿಯನ್ನು ಆಕರ್ಷಿಸಲು ಆಗಸದಲ್ಲಿ ಗಿರಕಿ ಹೊಡೆಯುತ್ತಾ ಧೊಪ್ಪನೆ ಬೀಳುವ ದೃಶ್ಯ ಅತ್ಯಾಕರ್ಷಕ. ಮರದ ಅಥವಾ ಗೋಡೆಯ ರಂಧ್ರಗಳಲ್ಲಿ ಗೂಡು ಕಟ್ಟುತ್ತದೆ,

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೧೮೫೦; ಕಳೆದ ೩೦ ವರ್ಷಗಳಲ್ಲಿ ೬೦,೪೯೦.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೧೬೦; ಕಳೆದ ೩೦ ವರ್ಷಗಳಲ್ಲಿ ೧೦,೦೪೬.

ದಯವಿಟ್ಟು ಹೆಚ್ಚುಹೆಚ್ಚು ಅಂಚೆಚೀಟಿಗಳನ್ನು ಕಳುಹಿಸಿ, ನನ್ನ ಅಂಚೆವೆಚ್ಚವನ್ನು ತಗ್ಗಿಸಲು ಸಹಕರಿಸಿ.