THE PLASTIC MENACE
uÉeÉëÉSÌmÉ MüPûÉãUÉÍhÉ MÑüxÉÑqÉÉSÌmÉ qÉ×SÕÌlÉ |
sÉÉãMüÉã¨ÉUÉhÉÉÇ cÉãiÉÉÇÍxÉ MüÉã ÌWû ÌuÉ¥ÉÉÇiÉqÉWïûÍxÉ ||
(It is indeed difficult to comprehend the
mind of virtuous men.
As hard as diamond
and at the same time as soft as delicate petals)
-
Bhavabhooti’s Uttara Ramacharita, 1,14
Thursday, 26 September 2024
Dear
friend,
SPECIAL WILDLIFE MESSENGER OF THIS YEAR
Hand-painted cards, Acrylic on Paper. Total: this year 2180; in 40 years 81,595. Total recipients: this year 1236; in 40 years 16,220.
ಪ್ಲಾಸ್ಟಿಕ್ ಪಿಡುಗು
ವಜ್ರಾದಪಿ ಕಠೋರಾಣಿ ಕುಸುಮಾದಪಿ ಮೃದೂನಿ|
ಲೋಕೋತ್ತರಾಣಾಂ ಚೇತಾಂಸಿ ಕೋ ಹಿ ವಿಜ್ಞಾಂತುಮರ್ಹತಿ||
(ಲೋಕದಲ್ಲಿ ಮಹಾತ್ಮರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ.
ಅದು ವಜ್ರದಂತೆ ಕಠೋರವೂ, ಹೂವಿನಂತೆ ಮೃದುವೂ ಅಗಿರುತ್ತದೆ.)
-ಭವಭೂತಿಯ ಉತ್ತರರಾಮಚರಿತೆ ೧, ೧೪
ಗುರುವಾರ, ೨೬ ಸೆಪ್ಟೆಂಬರ್ ೨೦೨೪ ಮಿತ್ರರೆ,
ಇಂದು ಪ್ಲಾಸ್ಟಿಕ್ ಎಂಬ ಗಂಡಾAತರ ಇಡೀ ವಿಶ್ವವನ್ನೇ ಕಾಡುತ್ತಿದೆ. ಎತ್ತ ನೋಡಿದರÀತ್ತ ವಿವಿಧ ನಿರುಪಯುಕ್ತ ಪ್ಲಾಸ್ಟಿಕ್ ವಸ್ತುಗಳು ಗುಡ್ಡೆಗುಡ್ಡೆಯಾಗಿ ಬಿದ್ದಿವೆ. ಯಾವ ಕಾರಣಕ್ಕಾಗಿ ಪ್ಲಾಸ್ಟಿಕ್ ಪದಾರ್ಥಗಳನ್ನು ಹೀಗೆ ಪ್ರಪಂಚದಾದ್ಯAತ ಬಳಸುತ್ತಿದ್ದೇವೆ? ಈ ಪ್ಲಾಸ್ಟಿಕ್ ಕಾರ್ಖಾನೆಗಳು ಎಲ್ಲಿವೆ? ಅವುಗಳನ್ನು ಸಾರಾಸಗಟಾಗಿ ಮುಚ್ಚಿಬಿಡಬಹುದಲ್ಲ? ಎಂಬ ಸಂದೇಹಗಳು ನಿಮಗೆ ಬರಬಹುದು.
ಪ್ಲಾಸ್ಟಿಕ್ ಎಂದರೇನು, ಅದು ಎಲ್ಲಿಂದ ಬರುತ್ತದೆೆ ಎಂಬುದನ್ನು ಮೊದಲು ಹೇಳಿಬಿಡುತ್ತೇನೆ. ನಾವು ದಿನನಿತ್ಯ ಬಳಸುವ ತೆಂಗು, ಸೂರ್ಯಕಾಂತಿ, ಕಡಲೆಕಾಯಿ, ಸಾಸಿವೆ ಮುಂತಾದ ಎಣ್ಣೆಗಳು ಕೊಬ್ಬರಿ, ಹಾಗೂ ವಿವಿಧ ಎಣ್ಣೆ ಬೀಜಗಳನ್ನು ಅರೆದು ಅವುಗಳಿಂದ ಪಡೆಯುತ್ತೇವಷ್ಟೆÉ. ಎಣ್ಣೆ ಬೀಜಗಳಿಂದ ಎಣ್ಣೆಯನ್ನು ಹೊರತೆಗೆದ ನಂತರ ಉಳಿಯುವ ಚರಟವನ್ನು ನಾವು ಹಿಂಡಿ ಎನ್ನುತ್ತೇವೆ. ಈ ಹಿಂಡಿಗಳನ್ನು ನಾನಾ ರೀತಿ ಮರುಬಳಕೆ ಮಾಡುತ್ತೇವೆ.
ಅದೇ ರೀತಿ ಭೂಮಿಯಲ್ಲಿ ನೈಸರ್ಗಿಕವಾಗಿ ದೊರಕುವ ಪೆಟ್ರೋಲಿಯಂ ಖನಿಜವನ್ನು ಅರೆದು ಪೆಟ್ರೋಲ್, ಡೀಸೆಲ್, ಸಿಎನ್‌ಜಿ, ಎಲ್‌ಪಿಜಿ, ಸೀಮೆಣ್ಣೆ, ಮುಂತಾದ ತೈಲಗಳನ್ನು ಉತ್ಪಾದಿಸಿದ ನಂತರ ಉಳಿಯುವ ‘ಹಿಂಡಿ’ಯೇ ಎಲ್ಲ ಪ್ಲಾಸ್ಟಿಕ್‌ಗಳ ಮೂಲ ದ್ರವ್ಯ! ಪೆಟ್ರೋಲಿಯಂನ ವಿವಿಧ ತೈಲಗಳನ್ನು ೧೯೫೦ರ ದಶಕಗಳಿಂದಲೂ ಬಳಸುತ್ತ ಬಂದಿದ್ದೇವೆ. ಎಲ್ಲಿಯವರೆಗೆ ಪ್ರಪಂಚದಲ್ಲಿ ಪೆಟ್ರೋಲ್ ಉತ್ಪನ್ನಗಳನ್ನು ಬಳಸುತ್ತೇವೆಯೋ ಅಲ್ಲಿಯವರೆಗೆ ಈ ಪ್ಲಾಸ್ಟಿಕ್ ಪಿಡುಗನ್ನು ನಿಲ್ಲಿಸಲಾಗುವುದಿಲ್ಲ ಎಂದು ನಿಮಗೆ ಮನವರಿಕೆಯಾಗಿರಬಹುದು.
ಈ ಪ್ಲಾಸ್ಟಿಕ್‌ನ ವಿಶಿಷ್ಟ ಮತ್ತು ಮಹತ್ತರ ಗುಣವೇನೆಂದರೆ, ನಾವು ಅದರಿಂದ ಉಕ್ಕಿನಷ್ಟು ಗಟ್ಟಿಮುಟ್ಟಾದ ವಸ್ತುಗಳನ್ನೂ, ರೇಷ್ಮೆಗಿಂತ ಮೃದುವಾದ ವಸ್ತುಗಳನ್ನೂ ತಯಾರು ಮಾಡಬಹುದಾಗಿದೆ. ಗಾಳಿ-ನೀರು ನಿರೋಧಕ ಗುಣವಿರುವುದರಿಂದ ಮುಖ್ಯವಾಗಿ ಪ್ಲಾಸ್ಟಿಕ್‌ನಿಂದ ಚೀಲಗಳನ್ನು, ಹೊದಿಕೆ-ಕವಚಗಳನ್ನು ಅಲ್ಲದೆ ಬಟ್ಟೆ, ಪೇಂಟ್ಸ್, ಬಾಟಲ್-ಡಬ್ಬಿಗಳನ್ನು ತಯಾರಿಸುತ್ತಾರೆ. ವಿಶ್ವÀದಲ್ಲಿಂದು ಅತ್ಯಂತ ವ್ಯಾಪಕವಾಗಿ ಪ್ಲಾಸ್ಟಿಕ್‌ನ್ನು ಉಪಯೋಗಿಸುತ್ತಿದ್ದೇವೆ. ಸಕಲ ನಿತ್ಯೋಪಯೋಗಿ ವಸ್ತುಗಳಲ್ಲಿಯೂ ಪ್ಲಾಸ್ಟಿಕ್ ಬಳಕೆ ಕಂಡುಬರುತ್ತಿದೆ. ಕಡಿಮೆ ವೆಚ್ಚದಲ್ಲಿ ತಯಾರಿಕೆ ಮತ್ತು ಕೈಗೆಟುಕುವ ದರದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳು ದೊರಕುವುದರಿಂದ ಮಾನವನು ಎಲ್ಲದಕ್ಕೂ ಪ್ಲಾಸ್ಟಿಕ್ ಅವಲಂಬಿತನಾಗಿದ್ದಾನೆ. ಪ್ಲಾಸ್ಟಿಕ್ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ.
ಆದರೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಬಿಸಾಡಿದ ನಂತರ, ಅವು ಮಣ್ಣಿನಲ್ಲಾಗಲೀ, ಗಾಳಿಯಲ್ಲಾಗಲೀ, ನೀರಿನಲ್ಲಾಗಲೀ ಕರಗಲು ನೂರಾರು ವರ್ಷಗಳೇ ಬೇಕು. ಹಾಗಾಗಿ, ಎಲ್ಲ ದೇಶಗಳಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇವು ಭೂಮಿಯ ಮೇಲೆ ಮತ್ತು ಸಮುದ್ರದಲ್ಲಿ ವಾಸಿಸುವ ಪ್ರಾಣಿಗಳು, ಸಸ್ಯಗಳು ಮತ್ತು ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿವೆ. ಪ್ಲಾಸ್ಟಿಕ್‌ನಲ್ಲಿರುವ ಅನೇಕ ವಿಷಕಾರಿ ರಾಸಾಯನಿಕಗಳು ವiನುಷ್ಯನ ಎಲುಬು, ನರಮಂಡಲ, ಚರ್ಮ, ಕಣ್ಣುಗಳಿಗೆ ಹಾನಿಕಾರಕವಲ್ಲದೆ, ಬಂಜೆತನ ಮತ್ತು ಅನೇಕ ಭೀಕರ ಶ್ವಾಸಕೋಶದ ರೋಗಗಳಿಗೂ, ಕ್ಯಾನ್ಸರ್‌ನಂತಹ ಮಾರಕವಾದÀ ರೋಗಗಳಿಗೂ ಕಾರಣವಾಗಿವೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ದುಸ್ಸಾಧ್ಯ!
ಹಾಗಾದರೆ ಈ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪರಿಹಾರವೇನು? ಈ ಪಿಡುಗಿಗೆ ಅತ್ಯಂತ ಸಮರ್ಪಕ ಪರಿಹಾರ ಪ್ಲಾಸ್ಟಿಕ್‌ನಲ್ಲಿಯೇ ಇದೆ! ಹೇಗಿದ್ದರೂ ಪ್ಲಾಸ್ಟಿಕ್ ಉತ್ಪನ್ನಗಳು ಶೀಘ್ರವಾಗಿ ಪರಿಸರದಲ್ಲಿ ಒಂದಾಗುವುದಿಲ್ಲ; ಹಾಗಾಗಿ ಯಾವ ವಸ್ತುಗಳನ್ನು ನಾವು ನೂರಾರು ವರ್ಷಗಳ ಕಾಲ ಬಾಳಬೇಕೆಂದು ಬಯಸುತ್ತೇವೋ ಅಲ್ಲೆಲ್ಲ ಪ್ಲಾಸ್ಟಿಕ್ ಉಪಯೋಗಿಸಿದರೆ ಆಯ್ತಲ್ಲ! ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಷ್ಕರಿಸಿ ಕಟ್ಟಡಗಳಿಗೆ ಬೇಕಾದ ಇಟ್ಟಿಗೆಗಳು, ನೆಲಹಾಸು, ಗೋಡೆ, ಕಿಟಕಿ-ಬಾಗಿಲು, ಮುಂತಾದುವುಗಳನ್ನು ತಯಾರು ಮಾಡಬಹುದಲ್ಲವೆ? ಪರಿಷ್ಕೃತ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆಗಳಿಗೆ ಹಾಸೋಣ!
ಆದ್ದರಿಂದ ಪ್ಲಾಸ್ಟಿಕ್ಕನ್ನು ವಿನಾಕಾರಣ ದೂರುವುದು ಬೇಡ. ಅವುಗಳಿಂದ ತಯಾರಾಗುವ ಎಲ್ಲ ವಸ್ತುಗಳನ್ನೂ ಸೂಕ್ತವಾಗಿ ಉಪಯೋಗಿಸೋಣ. ಆದರೆ, ಬಳಸಿದ ನಂತರ ಖಂಡಿತವಾಗಿಯೂ ಕಂಡಕAಡಲ್ಲಿ ಬಿಸಾಡದೆ ಅವುಗಳನ್ನು ಸಂಗ್ರಹಿಸಿ, ವ್ಯವಸ್ಥಿತವಾಗಿ ಮರುಬಳಕೆ ಮಾಡೋಣ.
ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿAದ, ಸಹಬಾಳ್ವೆ ನಡೆಸುವಂತೆ ಮಾಡೋಣ. ವಂದನೆಗಳು.
ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ
ಕೆAಪು ಕಾಡುಕೋಳಿ : ಪ್ರಪಂಚದ ಅತ್ಯಂತ ಆಕರ್ಷಕವಾದ ನವಿಲಿನ ಕುಟುಂಬಕ್ಕೆ ಸೇರಿದ ಸುಪರಿಚಿತ ಹಕ್ಕಿ. ಗಂಡು ಕೆಂಪು ಕಾಡುಕೋಳಿಗೆ ಕಿತ್ತಳೆ, ಕಂದು, ಕೆಂಪು, ಬಂಗಾರ, ಕಪ್ಪು, ಬೂದು, ಬಿಳಿ, ಗಾಢಹಸಿರು ಮುಂತಾದ ವಿವಿಧ ಬಣ್ಣಗಳ ಗರಿಗಳಿವೆ. ಭಾರತದ ಈಶಾನ್ಯ ಭಾಗದಲ್ಲಿರುವÀ ಹಿಮಾಲಯದ ತಪ್ಪಲು ರಾಜ್ಯಗಳಾದ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್‌ಗಳಲ್ಲಿ ವಾಸಿಸುತ್ತವೆ. ಮಿಶ್ರಾಹಾರಿ: ಮಿಡತೆ, ಎರೆಹುಳ, ಮರಿಹುಳಗಳೊಂದಿಗೆ, ಕೆಳಗೆ ಬಿದ್ದ ಹಣ್ಣುಗಳು, ಬೀಜ, ಗೆಡ್ಡೆಗಳಲ್ಲದೆ, ಗಟ್ಟಿಮುಟ್ಟಾದ ಕಾಲುಗಳು ಮತ್ತು ಕಾಲ್ಬೆರಳುಗಳಿಂದ ನೆಲವನ್ನು ಕೆದಕಿ, ಬೇರುಗಳ ಬುಡದಲ್ಲಿ ಕ್ರಿಮಿಕೀಟಗಳನ್ನು ಹುಡುಕಿ ತಿನ್ನುತ್ತವೆ. ಸುಮಾರು ೭೪೦೦ ವರ್ಷಗಳಿಂದ ಮಾನವ ಇವುಗಳನ್ನು ಸಾಕುತ್ತಿದ್ದಾನೆ. ಇಂದು ಪ್ರಪಂಚದಾದ್ಯAತ ಮೊಟ್ಟೆ ಮತ್ತು ಮಾಂಸಗಳಿಗೆ ಬೆಳೆಸುವ ಕೋಳಿಗಳಿಗೆ ಭಾರತದ ಕೆಂಪು ಕಾಡುಕೋಳಿಯೇ ಮೂಲ!
ಕೈಯಲ್ಲೇ ಚಿತ್ರಿಸಿದ ಒಟ್ಟು ಕಾರ್ಡುಗಳ ಸಂಖ್ಯೆ: ಈ ವರ್ಷ ೨೧೮೦; ೪೦ ವರ್ಷಗಳಲ್ಲಿ ೮೧,೫೯೫. ಪಡೆದವರು: ಈ ವರ್ಷ ೧೨೩೬; ೪೦ ವರ್ಷಗಳಲ್ಲಿ ೧೬,೨೨೦.

No comments:
Post a Comment