Thursday, 26 September 2019
LEADING A HEALTHY LIFE WITH NATURE
Dear friend,
Our body has a marvelous built-in defense system or immune system where it recognises and fights diseases and keeps the marauding organisms at bay. This process is seen in all the living beings. The human body has acquired this character from millions of years of genetic pool. Naturally grown fruits, vegetables and nuts impart a lot of immunity to our body.
But, in its excitement to recognise any thing that is foreign, the defense system sometimes becomes over-enthusiastic! As such, there are hundreds of things in the air, including street and house dust, pollens and micro-organisms, most of which are either harmless or not a matter of concern. For a trivial reason, when the body is exposed to them, it reacts severely. We generally call this type of stupid reaction as allergies. The body itches, swells, there is sneezing, wheezing and sometimes it may lead to severe illness, shock and even death.
Over the years, I have noticed that this phenomenon is more pronounced in urban dwellers than in village population. The people in villages are inherently tough. From the childhood, their body is thrown open to these allergens and their immune system learns to ignore most of the things when it is exposed to.
I think that there is a complex connection between the immune system and our brain. Many elite, worry unnecessarily or excessively about things that are around them. They fuss about the smell of this or the taste of that… and, in a way, they inadvertently train their system to readily recognise anything foreign, which are otherwise harmless. Their body is put on a 'high-alert' all the time. And because of this attitude, they suffer and make a miserable life for themselves!
Whereas, a village lad, always surrounded by these, is happy and without much suffering. I feel that this is a sort of mental attitude of the body cells! They learn to live compatibly with all the natural things around them, as far as they are not meant to be harmful. This is indeed a sign of perfect health!
The moral of the story is that our body is meant to live along with nature and develop a harmonious relationship with it, so that we can lead a healthy life.
Let us join hands to make our only Earth, a place where all elements of life can live in health, happiness and harmony. Thank you.
Special Wildlife Messenger of This Year
Asian Paradise-Flycatcher (Terpsiphone paradisi) This insectivorous bird belongs to the family of Monarch Flycatchers, and is characterised by the long, stark white trailing tail feathers in breeding males. The agile, fairy like movements of the male bird, as he twists and turns in the air after insects, with his tail-ribbons looping and tracking behind, is a spectacle of exquisite charm! It nests between February and July. Builds a nest made of fine grasses and fibres, plastered with cobweb in the fork of a twig. Breeding male calls with pleasant musical notes.
Total of hand-painted cards made: this year 2280; in 35 years 70,725. Total recipients: this year 1190; in 35 years 12,304.
THE WILDLIFE MESSAGE CARDS are individually hand-painted and sent free to individuals throughout the world to mark the Wildlife Week.
For previous years’ messages, please visit me at http://drsvnarasimhan.blogspot.com
ಪ್ರಕೃತಿಯೊಂದಿಗೆ ಆರೋಗ್ಯಪೂರ್ಣ ಜೀವನ
ಮಿತ್ರರೆ,
ನಮ್ಮ ದೇಹದಲ್ಲಿ ಒಂದು ಅದ್ಭುತವಾದ ರೋಗನಿಯಂತ್ರಣ ವ್ಯವಸ್ಥೆಯಿದೆ. ಅದು ನಮ್ಮ ದೇಹದ ಮೇಲೆ ದಾಳಿ ಮಾಡುವ ಕ್ಷುದ್ರ ಜೀವಿಗಳನ್ನೂ, ಅಪಾಯಕಾರಿ ರಾಸಾಯನಿಕಗಳನ್ನೂ ಆಗಿಂದಾಗಲೇ ಗುರುತಿಸಿ, ಅನಾರೋಗ್ಯಗಳಿಂದ ನಮ್ಮನ್ನು ರಕ್ಷಿಸುವುದಲ್ಲದೆ, ಅವು ಮತ್ತೊಂದು ಬಾರಿ ಹತ್ತಿರ ಬಾರದಂತೆ ದೂರವಿಡುತ್ತದೆ. ಈ ಗುಣವನ್ನು ನಾವು ಎಲ್ಲ ಜೀವಿಗಳಲ್ಲೂ ಕಾಣುತ್ತೇವೆ. ಕೋಟಿ ಕೋಟಿ ವರ್ಷಗಳಿಂದ ವಿಕಾಸ ಹೊಂದಿ, ಈ ವಿಶಿಷ್ಟ ಗುಣವನ್ನು ನಮ್ಮ ದೇಹ ತನ್ನ ವರ್ಣತಂತುಗಳಲ್ಲಿ ಪಡೆದಿದೆ. ಸಹಜವಾಗಿ ಬೆಳೆದ ಹಣ್ಣು-ತರಕಾರಿಗಳು, ಕಾಳು-ಬೀಜಗಳನ್ನು ತಿನ್ನುವುದರಿಂದ ಈ ಶಕ್ತಿಯನ್ನು ನಾವು ವೃದ್ಧಿಗೊಳಿಸಬಹುದು.
ಆದರೆ, ಈ ಅಭ್ಯಾಗತರನ್ನು ಪತ್ತೆ ಹಚ್ಚುವ ಸಂಭ್ರಮದಲ್ಲಿ ಕೆಲವು ಸಾರಿ ನಮ್ಮ ದೇಹ ಅತಿಯಾದ ಬುದ್ಧಿವಂತಿಕೆಯನ್ನು ತೋರಿಸುವುದುಂಟು! ಹೇಳಿ-ಕೇಳಿ, ನಮ್ಮ ಸುತ್ತಲ ವಾತಾವರಣದಲ್ಲಿ ಹಾದಿ-ಬೀದಿಯ ಧೂಳು, ಮನೆಯ ಧೂಳು, ಹೂ-ಪರಾಗಗಳು, ಸೂಕ್ಷ್ಮಜೀವಿಗಳು, ಹೀಗೆ ನೂರಾರು ವಸ್ತುಗಳು ಇರುತ್ತವೆ. ಯಾವುದರಿಂದ ನಮಗೆ ಅಪಾಯ ಎಂಬುದನ್ನು ಗುರುತಿಸುವುದನ್ನು ಬಿಟ್ಟು, ನಿರುಪದ್ರವಿಯಾದ, ನಿರಪಾಯಕಾರಿಯಾದ ವಸ್ತುಗಳಿಗೂ ನಮ್ಮ ದೇಹ ಅತಿ ಉಗ್ರವಾಗಿ ಪ್ರತಿಕ್ರಯಿಸುತ್ತದೆ. ಇದನ್ನೇ ನಾವು ಅಲರ್ಜಿ ಎನ್ನುತ್ತೇವೆ. ಅಂತಹ ಸಂದರ್ಭಗಳಲ್ಲಿ ನಮಗೆ ತುರಿಕೆ, ಊತ, ಉಬ್ಬಸ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಲವು ಸಾರಿ ಇದು ಅಪಾಯಕಾರಿ ಮಟ್ಟಕ್ಕೂ ಹೋಗಿ, ಸಾವು ಕೂಡ ಸಂಭವಿಸಬಹುದು.
ಈ ರೀತಿಯ ತೀಕ್ಷ್ಣ ಪ್ರತಿಕ್ರಿಯೆ, ಹಳ್ಳಿಗರಿಗಿಂತ ನಗರವಾಸಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಹಲವು ವರ್ಷಗಳಿಂದ ನಾನು ಗಮನಿಸಿದ್ದೇನೆ. ಗ್ರಾಮಸ್ಥರು ಕಷ್ಟಜೀವಿಗಳು ಮತ್ತು ಸಹಿಷ್ಣುಗಳು. ಅವರ ದೇಹ ಬಾಲ್ಯದಿಂದಲೇ ಇಂತಹ ಪರಕೀಯ ವಸ್ತುಗಳಿಗೆ ತೆರೆದುಕೊಂಡಿರುತ್ತದೆ. ಯಾವ ಹೊತ್ತೂ ಅವೆಲ್ಲ ತಮ್ಮ ಸುತ್ತುಮುತ್ತಲೇ ಇರುವುದರಿಂದ ಅವುಗಳಿಂದ ತಮಗೆ ಅಪಾಯವಿಲ್ಲ ಎಂಬುದನ್ನು ಮನಗಂಡು ಅವುಗಳ ಇರುವಿಕೆಯನ್ನು ಅಲಕ್ಷಿಸುವುದನ್ನು ಕಲಿತಿರುತ್ತದೆ.
ನಮ್ಮ ರೋಗನಿಯಂತ್ರಣ ಶಕ್ತಿಗೂ, ನಮ್ಮ ಮೆದುಳಿಗೂ ಒಂದು ರೀತಿಯ ಸಂಕೀರ್ಣ ಸಂಬಂಧವಿದೆಯೆಂದು ನನಗನ್ನಿಸುತ್ತದೆ. ನಗರಜೀವಿಗಳು ಸುಖಜೀವಿಗಳು, ಆರೋಗ್ಯದ ಬಗ್ಗೆ ಅರಿವು ಮತ್ತು ಅತೀವ ಕಾಳಜಿ ಇರುವವರು. ತಮ್ಮ ಸುತ್ತಮುತ್ತಲ ವಿಷಯಗಳಿಗೆ ಅನಾವಶ್ಯಕವಾಗಿ ಹಾಗೂ ಅತಿಯಾಗಿ ಸ್ಪಂದಿಸುತ್ತಾರೆ. ತನಗೆ ಆ ವಾಸನೆ ಆಗದು, ಈ ರುಚಿ ವಾಕರಿಕೆ ಬರಿಸುತ್ತದೆ, ಮತ್ತೊಂದನ್ನು ಕಂಡರೆ ಹಿಡಿಸುವುದಿಲ್ಲ.... ಹೀಗೆ ಅವರಿಗರಿವಿಲ್ಲದೆಯೇ ಪ್ರತಿಯೊಂದು ವಸ್ತುವನ್ನೂ ಪರಕೀಯ ಎಂಬ ದೃಷ್ಟಿಯಿಂದ ನೋಡುವಂತೆ, ತಮ್ಮ ದೇಹಪ್ರಕೃತಿಯನ್ನು ಒಂದು ರೀತಿಯಲ್ಲಿ ತರಬೇತಿಗೊಳಿಸುತ್ತಾರೆ. ಅವರ ಇಡೀ ಶರೀರ ಯಾವಾಗಲೂ ಜಾಗರೂಕ ಸ್ಥಿತಿಯಲ್ಲಿರುತ್ತದೆ! ಈ ಮನೋಭಾವದಿಂದಾಗಿ ದಿನನಿತ್ಯ ನರಳುತ್ತಾರೆ, ಅವರ ಜೀವನವೇ ಕ್ಲೇಶಮಯಗೊಳ್ಳುತ್ತದೆ!
ಅದೇ ಸದಾ ನಿಸರ್ಗದ ಮಡಿಲಲ್ಲಿ ವಾಸಮಾಡುವ ಒಬ್ಬ ಹಳ್ಳಿಗ ಇದಾವುದರ ಪರಿವೆಯೇ ಇಲ್ಲದೆ ನಿರಾತಂಕದಿಂದ, ನೆಮ್ಮದಿಯ ಜೀವನ ನಡೆಸುತ್ತಾನೆ. ಇದೊಂದು ರೀತಿಯಲ್ಲಿ, ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮನಸ್ಥಿತಿಯೆಂದು ನಾನು ಭಾವಿಸುತ್ತೇನೆ. ಎಲ್ಲಿಯವರೆಗೆ ತನಗೆ ಈ ಪರಕೀಯ ವಸ್ತುಗಳಿಂದ ಅಪಾಯವಿಲ್ಲವೋ ಅಲ್ಲಿಯವರೆಗೆ ಎಲ್ಲವೂ ತನ್ನದು, ಎಲ್ಲರೂ ತನ್ನವರು ಎಂಬ ದೃಷ್ಟಿಯನ್ನು ಅದು ಬೆಳೆಸಿಕೊಳ್ಳುತ್ತದೆ. ಇದೇ ಅಲ್ಲವೆ ನಿಜವಾದ ಆರೋಗ್ಯದ ಲಕ್ಷಣ!
ಆದ್ದರಿಂದ ನಾವು ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ, ನಾವು ಪ್ರಕೃತಿಯೊಂದಿಗೆ ಬೆರೆತು, ಸಾಮರಸ್ಯದಿಂದ ಬದುಕಲು ಕಲಿತರೆ ಸತತ ಆರೋಗ್ಯದ ಜೀವನ ನಮ್ಮದಾಗುತ್ತದೆ.
ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ. ವಂದನೆಗಳು.
ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ ರಾಜಹಕ್ಕಿ: ಪ್ರಜನನ ಋತುವಿನಲ್ಲಿ ಗಂಡು ಹಕ್ಕಿಗೆ, ದೇಹಕ್ಕಿಂತ ಬಹಳ ಉದ್ದವಾಗಿ ಬೆಳೆಯುವ, ಅಚ್ಚ ಬಿಳಿ ಬಣ್ಣದ ಎರಡು ಬಾಲದ ಗರಿಗಳಿಂದ ಈ ಕೀಟಾಹಾರಿ ಪಕ್ಷಿಯನ್ನು ಗುರುತಿಸಬಹುದು. ಬಹು ಚಾಕಚಕ್ಯತೆಯಿಂದ, ಲೀಲಾಜಾಲವಾಗಿ ಗಿಡಗಂಟಿಗಳ ಮಧ್ಯೆ ಕೀಟಗಳನ್ನು ಅಟ್ಟಿಸಿಕೊಂಡು ಹೋಗುವಾಗ, ಅದರ ಹಿಂದೆಯೇ ಬಗೆಬಗೆಯ ವಿನ್ಯಾಸದ ಚಿತ್ತಾರಗಳನ್ನು ರಚಿಸುತ್ತಾ ಚಲಿಸುವ ಆ ಬಾಲದ ಗರಿಗಳು ನಿಮ್ಮ ಮುಂದೆ ಒಂದು ಗಂಧರ್ವ ಲೋಕವನ್ನೇ ಸೃಷ್ಟಿಸಿಬಿಡುತ್ತದೆ! ದಂಪತಿಗಳು ಗಿಡದ ಕವಲುಗಳಲ್ಲಿ ತೆಳುವಾದ ಒಣಹುಲ್ಲು-ನಾರುಗಳನ್ನು ಜೇಡರ ಬಲೆಯ ಎಳೆಗಳಿಂದ ಅಂಟಿಸಿ ಮಾಡಿದ ಮುದ್ದಾದ ಗೂಡು ಕಟ್ಟುತ್ತವೆ. ಈ ಸಮಯದಲ್ಲಿ ಗಂಡು ಹಕ್ಕಿ ತನ್ನ ಇಂಪಾದ ಸ್ವರಗಳಿಂದ ಸಂಗಾತಿಯನ್ನು ಕರೆಯುತ್ತದೆ.
ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ೨೨೮೦; ಕಳೆದ ೩೫ ವರ್ಷಗಳಲ್ಲಿ ೭೦,೭೨೫
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧೧೯೦; ಕಳೆದ ೩೫ ವರ್ಷಗಳಲ್ಲಿ ೧೨,೩೦೪.