Tuesday, December 16, 2008

Wildlife messages 2005







Dear friend,

I am overwhelmed by the personal replies and responses with regards to my wildlife messages. Here is the passage of article that followed the wildlife messge cards of 2005.
परॊपकाराय फलंति वृक्षाः परॊपकाराय दुहंति गावाः ।
परॊपकाराय वहंति नद्यः परॊपकारार्थमिदं शरीरम् ॥

ಮರ-ಗಿಡಗಳು ಫಲವನ್ನೀಯುವುದು, ಹಸು-ಗೋವುಗಳು ಹಾಲನ್ನು ನೀಡುವುದು ಮತ್ತು ನದಿಗಳು ಹರಿಯುವುದು ಇವೆಲ್ಲವೂ ಪರೋಪಕಾರಕ್ಕಾಗಿಯೇ. ಈ ನಮ್ಮ ಶರೀರ ಪರೋಪಕಾರಕ್ಕೆ ಮೀಸಲಿರಲಿ.

- ಭರ್ತೃಹರಿಯ ನೀತಿಶತಕ

ಭಾನುವಾರ, ೨೫ ಸೆಪ್ಟೆಂಬರ್ ೨೦೦೫
ಮಿತ್ರರೆ,
ನಿಸರ್ಗದ ಕೆಲವು ವಿದ್ಯಮಾನಗಳನ್ನು ನಾವು ಒಳಹೊಕ್ಕು ಗಮನಿಸಿದಾಗ ನಮಗೆ ಅದು ಬರೇ ವಿಸ್ಮಯಗಳ ಖಜಾನೆಯಷ್ಟೇ ಅಲ್ಲದೆ, ಕೌತುಕಮಯ ನೀತಿಪಾಠಗಳ ಆಗರವೂ ಆಗಿದೆಯೆಂದು ಮನವರಿಕೆಯಾಗುತ್ತದೆ. ಮಾವಿನ ಮರವನ್ನೇ ತೆಗೆದುಕೊಳ್ಳೋಣ. ಪ್ರತಿವರ್ಷ ಆ ಮರದಲ್ಲಿ ಸಾವಿರಾರು ಹಣ್ಣುಗಳು ಬಿಡುವುದೇಕೆ? ಹಣ್ಣನ್ನು ಒಂದು ಪ್ರಾಣಿ ತಿಂದು ಅದರ ಬೀಜವನ್ನು ದೂರದಲ್ಲಿ ಹಾಕಲಿ, ಅಲ್ಲಿ ಒಂದು ಹೊಸ ಮಾವಿನ ಸಸಿ ಬೆಳೆಯಲಿ ಎಂಬುದೇ ಆ ಮರದ ಉದ್ದೇಶವಲ್ಲವೆ?
ಆ ಹಣ್ಣಿನ ಬಣ್ಣ, ರುಚಿ ಮತ್ತು ಸಿಹಿಯೇ ಪ್ರಾಣಿಗೆ ಆಕರ್ಷಣೆ. ಆದರೆ ನಾವು ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಯಾವುದೇ ಒಂದು ಹಣ್ಣು ಬರೇ ಸಿಹಿಯುಳ್ಳ ಪದಾರ್ಥವಲ್ಲ. ಅದರಲ್ಲಿ ಒಂದು ಪ್ರಾಣಿಯ ಜೀವನಕ್ಕೆ ಬೇಕಾದ ಎಲ್ಲಾ ಆಹಾರಾಂಶಗಳೂ ಇರುತ್ತವೆ. ಅದು ಶರ್ಕರ, ಪಿಷ್ಟ, ಕೊಬ್ಬು, ವಿಟಮಿನ್‌ಗಳು, ಖನಿಜ-ಲವಣಗಳು, ನಾರು ಇವೆಲ್ಲವನ್ನೂ ಒಳಗೊಂಡ ಸಂಪೂರ್ಣ ಆಹಾರ ! ಇವೆಲ್ಲವನ್ನೂ ಆ ಮಾವಿನ ಮರ ಸಂಗ್ರಹಿಸಿ ಹಣ್ಣಿನಲ್ಲಿ ಶೇಖರಿಸುತ್ತದೆ.
ಒಂದು ಗೊರಟನ್ನು ಹತ್ತು ಮಾರು ದೂರ ಬಿಸಾಡಿಸುವುದೇ ಆ ಮರದ ಉದ್ದೇಶವಾಗಿದ್ದರೆ, ಅದರ ಸುತ್ತ ಒಂದಷ್ಟು ಸಕ್ಕರೆ-ಬಣ್ಣ ಲೇಪಿಸಿ ಆಕರ್ಷಿಸಬಹುದಿತ್ತು. ಈಗ ಹೇಳಿ: ಕೂಲಿಗೆ ತಕ್ಕ ಕಾಳನ್ನು ತೂಕ ಹಾಕಿ ಕೊಡುವವರು ನಾವು. ಪ್ರಕೃತಿಯ ಮಡಿಲಲ್ಲಿ ಬಾಳಾಟ ನಡೆಸುತ್ತಿರುವ ಜೀವಿಗಳಲ್ಲಿ ಎಂತಹ ವಿಶಾಲ ಮನೋಭಾವ, ಅದೆಂತಹ ಔದಾರ್ಯ!
ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.

Sunday, September 25, 2005

Dear friend,
When we observe nature, we get an insight into the amazing way it works. Plants and animals are interdependent and they know each other’s needs, limitations and responsibilities. In this process they give us an excellent opportunity to know their virtues and rich sense of selflessness.
Take the example of a mango tree. We know that the purpose of producing a fruit in a tree is seed dispersal. The sweetness, flavour and colour of the fruit attract an animal. Please note that a fruit is not just a sweetmeat. It contains proteins, carbohydrates, fats, vitamins, minerals, fibre, micronutrients and anti-oxidants. It is nutritious, wholesome and life giving and makes a complete food for the animal.
The tree concentrates all these essential nutrients into a fruit and gifts them to the animal. If the sole purpose of the tree were to get its seed dropped at a distance, it would suffice to paint the seed with some sugar and colour and offered it to the animals.
We speak of hourly remunerations and scoffing wages. But here, we have a mango tree that generously presents its fruit to its recipient and thereby passes on a moral message to us. The broadmindedness and the magnanimity of the different forms of life in nature is indeed awe-inspiring!
Let us join hands to make our only Earth, a place where all elements of life can live in health, happiness and harmony.
Thank you.
Dr. S V Narasimhan VIRAJPET 571 218 Karnataka India drnsimhan@yahoo.com
The Wildlife Message Cards are individually hand-painted and sent free to individuals throughout the world to mark the Wildlife Week . Please write to the above address to be a proud recipient of these cards every year.
Total of individually hand-painted cards made: this year 1850; in 21 years 43,100. Total recipients: this year 980; in 21 years 6120.
Please send more stamps to reduce my burden on postage.



ದಿನಕರ: ನಮ್ಮ ಆಪದ್ರಕ್ಷಕ

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್

-ಗಾಯತ್ರೀ

ಭಾನುವಾರ, ೨೬ ಸೆಪ್ಟೆಂಬರ್ ೨೦೦೪

ಮಿತ್ರರೆ,

ಪ್ರತಿದಿನ ಮುಂಜಾನೆ ಎದ್ದು ಆ ಬಾಲಸೂರ್ಯ ನನ್ನನ್ನು ಎಡೆಬಿಡದೆ ಆಕರ್ಷಿಸುತ್ತಾನೆ. ಮತ್ತೆ ಮತ್ತೆ ಅದೇ ಆಲೋಚನೆ ಬರುತ್ತದೆ: ಯಾರೀ ಸೂರ್ಯ?
ಅಗಾಧ ವಿಶ್ವದ ದಶಸಹಸ್ರಕೋಟಿ ಬ್ರಹ್ಮಾಂಡಗಳಲ್ಲೊಂದಾದ ನಮ್ಮ ಅಕಾಶಗಂಗೆಯ ಒಂದು ಮೂಲೆಯಲ್ಲಿ ಉಳಿದ ಕೋಟಿ-ಕೋಟಿ ತಾರೆಗಳಂತೆ, ಕಂಡೂ ಕಾಣದಂತೆ ಹೊಳೆಯುತ್ತಿರುವ ಸಾಧಾರಣ ನಕ್ಷತ್ರ ಇವನೇ ಏನು?

ಅಥವಾ ನಾನ್ನೂರ ಅರವತ್ತು ಕೋಟಿ ವರ್ಷಗಳಿಂದ, ಸೆಕೆಂಡಿಗೆ ಐವತ್ತು ಲಕ್ಷ ಟನ್ ಬೈಜಿಕ ಶಕ್ತಿಯನ್ನು ಉತ್ಪಾದಿಸುತ್ತಿರುವ ಅಸ್ಖಲಿತ ಬೆಂಕಿಯುಂಡೆ ಇವನೇ?
ಆದರೆ ನನ್ನ-ಸೂರ್ಯನ ಅವಿನಾ ಸಂಬಂಧ ಈ ಎಲ್ಲ ವೈಜ್ಞಾನಿಕ ವಿವರಗಳನ್ನೂ ಹಿನ್ನೆಲೆಗೆ ಸರಿಸುತ್ತವೆ. ನಮ್ಮ ಈ ಭೂಮಿಯ ಮೇಲಿರುವ ಸಕಲ ಜೀವರಾಶಿಗಳ ಸೃಷ್ಟಿ-ಸ್ಥಿತಿ-ಲಯಗಳಿಗೂ ಕಾರಣಕರ್ತನಾಗಿ, ದಿನಂಪ್ರತಿ ತನ್ನ ರಶ್ಮಿಗಳಿಂದ ಎಲ್ಲ ಜೀವಿಗಳ ಜಡತ್ವವನ್ನು ತೊಡೆದು ಚೈತನ್ಯ ತುಂಬುವ, ಬೆಳಕಿನ ಗಣಿಯಲ್ಲವೇ ಇವನು? ಸಕಲ ಚರಾಚರ ವಸ್ತುಗಳ ನಿಯಂತ್ರಕನೂ ಅವನೇ, ಪ್ರತ್ಯಕ್ಷವಾಗಿಯೋ-ಪರೋಕ್ಷವಾಗಿಯೋ ನಮ್ಮೆಲ್ಲರ ಶಕ್ತಿಯ ಇಂಧನದ ಮೂಲವೂ ಅವನೇ!
ಆ ದಿನಮಣಿಯ ಕಿರಣಗಳಿಂದಲೇ ಈ ಭೂಮಿಯ ಮೇಲಿನ ಎಲ್ಲ ಋತುಗಳೂ ಮತ್ತು ಎಲ್ಲ ಆಗುಹೋಗುಗಳು. ಮುಂದೊಂದು ದಿನ ಎಲ್ಲ ರೀತಿಯ ಇಂಧನಗಳಿಗೂ ಅವನೇ ಪರ್ಯಾಯ ಸಂಪನ್ಮೂಲ ಶಕ್ತಿಯಾಗುತ್ತಾನೆಂಬುದೂ ನಿಸ್ಸಂಶಯ. ಆತನ ಆಶ್ರಯದಲ್ಲಿರುವ ಸಕಲ ಜೀವಿಗಳೂ ನೆಮ್ಮದಿಯ ಬಾಳು ಸಾಗಿಸುತ್ತ ಬಂದಿವೆ. ಆದರೆ ಇಂದು ಮಾನವನ ಹಸ್ತಕ್ಷೇಪದಿಂದ ಈ ವ್ಯವಸ್ಥೆಯೇ ಏರುಪೇರಾಗುವ ಚಿನ್ಹೆಗಳು ಕಂಡುಬರುತ್ತಿವೆ. ಇದು ಕೈಮೀರುವ ಮುಂಚೆ ನಾವು ಎಚ್ಚೆತ್ತುಕೊಳ್ಳಬೇಕಾಗಿರುವುದು ಅಪೇಕ್ಷಣೀಯವೂ ಅನಿವಾರ್ಯವೂ ಆಗಿದೆ.

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು.

ಗುರುವಾರ, ೨೫, ಸೆಪ್ಟೆಂಬರ್ ೨೦೦೩

ಮಿತ್ರರೆ,

ಇಡೀ ವಿಶ್ವವೇ ಒಂದು ವಿಸ್ಮಯಗಳ ಕಣಜ. ಏನು, ಏಕೆ, ಹೇಗೆ, ಎಂದೆಲ್ಲ ನಾವು ಕೇಳುತ್ತ ಹೋದಂತೆ ಅದು ತನ್ನ ವಿಶಾಲವಾದ ಅದ್ಭುತಲೋಕವನ್ನು ತೆರೆಯುತ್ತ ಹೋಗುತ್ತದೆ.

ಭೂಮಿಯ ಮೇಲೆ ವಾಸಮಾಡುವ ಜೀವಿಗಳ ಸ್ವಭಾವವನ್ನೇ ತೆಗೆದುಕೊಳ್ಳೋಣ. ಪ್ರತಿಯೊಂದು ಪ್ರಾಣಿಗೂ ತನ್ನದೇ ಆದ ಆವಾಸಸ್ಥಾನವಿದೆ. ಅಂದರೆ, ಎಲ್ಲ ಪ್ರಾಣಿಗಳೂ ಎಲ್ಲ ಸ್ಥಳಗಳಲ್ಲಿಯೂ ವಾಸಿಸಲು ಸಾಧ್ಯವಿಲ್ಲ. ಒಂಟೆಯನ್ನು ತಂದು ನಮ್ಮ ಮಲೆನಾಡಿನ ಕಾಡಿನಲ್ಲಿ ಬಿಟ್ಟರೆ, ಅದು ಬದುಕಬಲ್ಲದೆ? ಆನೆಯನ್ನು ಕೊಂಡೊಯ್ದು ಹಿಮಾಲಯದಲ್ಲಿ ಬಿಟ್ಟರೆ ಬಾಳಬಲ್ಲದೆ? ಆದ್ದರಿಂದ ಒಂದೊಂದು ಜೀವಿಗೂ ಬದುಕಿಬಾಳಲು ತಕ್ಕ ಜೀವ ಪರಿಸರ ಇರಲೇಬೇಕು. ಆದರೆ ಎಲ್ಲ ನಿಯಮಕ್ಕೂ ಅಪವಾದವಿದ್ದೇ ಇದೆ. ಉದಾಹರಣೆಗೆ ಜಿರಳೆಯನ್ನೇ ನೋಡಿ. ಅದು ಮರುಭೂಮಿಯ ರಣಬಿಸಿಲೇ ಆಗಲಿ, ನಿಮ್ಮ ಮನೆಯ ಫ್ರಿಜ್ ಆಗಲಿ, ನೆಮ್ಮದಿಯಿಂದ ಜೀವಿಸುವುದು. ಅಂತೆಯೆ ಮಾನವನೂ ಕೂಡ ಪ್ರಪಂಚದ ಎಲ್ಲಾ ಸ್ಥಳಗಳಲ್ಲಿಯೂ ವಾಸಿಸಲು ಶಕ್ಯನಾಗಿದ್ದಾನೆ.

ಇನ್ನು ಆಹಾರದ ವಿಷಯವನ್ನು ತೆಗೆದುಕೊಂಡರೆ, ಪ್ರತಿಯೊಂದು ಪ್ರಾಣಿಗೂ ತನ್ನದೇ ವಿಶಿಷ್ಟ ಆಹಾರಕ್ರಮವಿದೆ. ಕೆಲವು ಸಸ್ಯಾಹಾರಿಗಳು, ಹಲವು ಮಾಂಸಾಹಾರಿಗಳು. ಒಂದು ಜಾತಿಯ ಪಾಂಡಾಗೆ ನೀಲಗಿರಿ ಮರದ ಎಲೆಗಳೇ ಅವಶ್ಯವಾದರೆ, ಕೋಲಾ ಕರಡಿಗೆ ಬಿದಿರಿನ ಎಲೆಗಳೇ ಬೇಕು. ರೇಷ್ಮೆಹುಳು-ಹಿಪ್ಪುನೇರಿಳೆ ಸಂಬಂಧ ನಿಮಗೆಲ್ಲ ಗೊತ್ತೇ ಇದೆ. ಪುನಃ ಅಪವಾದವಿದ್ದೇ ಇದೆ. ಕಾಗೆ, ಹೆಗ್ಗಣ ಮುಂತಾದ ಪ್ರಾಣಿಗಳು ವೆಜ್-ನಾನ್‌ವೆಜ್ ಎರಡನ್ನೂ ಜೀರ್ಣಿಸಿಕೊಳ್ಳಬಲ್ಲವು. ನಾವಿಲ್ಲವೆ? ತಿನ್ನಲು ಯೋಗ್ಯವಾದ ಯಾವ ವಸ್ತುವನ್ನು ನಾವು ಬಿಟ್ಟಿದ್ದೇವೆ?

ನನಗೆ ಬೇಸರವಿಷ್ಟೆ. ಜಿರಳೆ, ಕಾಗೆ, ಹೆಗ್ಗಣಗಳನ್ನು ಹೀಗಳೆಯುವುದು ಬೇಡ. ಆದರೆ ನಾವೂ ಜಿರಳೆಯ ಹಾಗೆ ಎಲ್ಲೆಂದರಲ್ಲಿ ಮನೆ ಮಾಡಿಕೊಳ್ಳುತ್ತೇವೆ; ನಾವೂ ಕಾಗೆ-ಹೆಗ್ಗಣಗಳಂತೆ ಏನು ಬೇಕಾದರೂ ತಿಂದು ಜೀರ್ಣಿಸಿಕೊಳ್ಳುತ್ತೇವೆ ಎಂದು ಹೇಳಿಕೊಳ್ಳುವುದರಲ್ಲಿ ಹೆಗ್ಗಳಿಕೆಯಿದೆಯೆ? ನಮ್ಮನ್ನು ನಾವು ಹೋಲಿಸಿಕೊಳ್ಳಲು ಇವಕ್ಕಿಂತ ಗೌರವಯುತ ಪ್ರಾಣಿಗಳೇ ಇಲ್ಲವೆ?
ಸಿಂಹದ ಗಾಂಭೀರ್ಯ, ಹುಲಿಯ ಶೌರ್ಯ, ನವಿಲಿನ ಸೌಂದರ್ಯ, ಆನೆಯ ಶಕ್ತಿ, ತೋಳದ ಯುಕ್ತಿ, ಜೇನ್ನೊಣಗಳ ಸಂಘಜೀವನ, ಈ ಎಲ್ಲ ಗುಣಗಳ ಗಣಿ ನಾವಾದರೆ!

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು.

ನಾವು ಸಾಧಿಸಬಲ್ಲೆವು

ಬುಧವಾರ, ೨೫ ಸೆಪ್ಟೆಂಬರ್ ೨೦೦೨

ಸಹೃದಯರೇ,

ಸುಮಾರು ಇಪ್ಪತ್ತು ಕೋಟಿ ವರ್ಷಗಳ ಹಿಂದೆ ವಿಕಾಸ ಹೊಂದಿದ ಡೈನಾಸಾರ್‌ಗಳು, ನಿರಂತರವಾಗಿ ೧೪ ಕೋಟಿ ವರ್ಷ ಈ ಭೂಮಿಯನ್ನಾಳಿ, ೬.೬ ಕೋಟಿ ವರ್ಷಗಳ ಹಿಂದೆ ಸಂಪೂರ್ಣವಾಗಿ ನಶಿಸಿ ಹೋದವು. ನಂತರ ಹುಟ್ಟಿದ ಹಕ್ಕಿಗಳ ಬಳಗ, ಇಂದು ಇಡೀ ಆಕಾಶವನ್ನು ಯಾವುದೇ ಗಡಿರೇಖೆಗಳಿಲ್ಲದ ಒಂದು ವಿಶಾಲ ಸಾಮ್ರಾಜ್ಯವನ್ನಾಗಿಸಿಕೊಂಡಿವೆ. ಚಿಟ್ಟೆ ಮತ್ತು ಇತರ ಕೀಟಗಳು, ಡೈನಾಸಾರ್ ಮತ್ತು ಪಕ್ಷಿಗಳಿಗಿಂತ ಮುಂಚೆ ಅಂದರೆ, ಸುಮಾರು ೩೨ ಕೋಟಿ ವರ್ಷಗಳ ಹಿಂದೆ ಪ್ರಪಂಚಕ್ಕೆ ಕಾಲಿಟ್ಟ ಜೀವಿಗಳು. ಕೀಟಗಳು ಈ ಹಿಂದೆ ಘಟಿಸಿದ ಐದು ಜೀವಸಂಕುಲ ವಿನಾಶಗಳ ನಡುವೆಯೂ ಬದುಕುಳಿದು, ಸಂಖ್ಯಾಬಾಹುಳ್ಯದಲ್ಲಿ ಇತರೆಲ್ಲ ಜೀವಿಗಳನ್ನೂ ಹಿಂದೂಡಿವೆ.

ಮತ್ತೊಂದೆಡೆ, ತಾವರೆಯಿಂದ ಆರ್ಕಿಡ್‌ಗಳವರೆಗಿನ ಹೂತಳೆವ ಸಸ್ಯಗಳು ನಮ್ಮ ಪ್ರಕೃತಿಯನ್ನು ಸುಂದರಗೊಳಿಸುವುದಲ್ಲದೆ, ಜೀವಿಗಳಿಗೆ ಅತ್ಯವಶ್ಯಕವಾದ ಆಮ್ಲಜನಕವನ್ನು ವಾತಾವರಣಕ್ಕೆ ತುಂಬುವ ಮಹತ್ಕಾರ್ಯವನ್ನು ನಿರ್ವಹಿಸುತ್ತಿವೆ.

ಕೇವಲ ಒಂದು ಲಕ್ಷಕ್ಕೂ ಕಡಿಮೆ ವರ್ಷಗಳ ಹಿಂದೆ ಭೂಮಿಗೆ ಬಂದ ಆಧುನಿಕ ಮಾನವ, ಜೀವಿಗಳಲ್ಲೇ ಹೆಚ್ಚು ವಿಕಾಸಹೊಂದಿದವನೆಂದೂ, ಅತಿ ಬುದ್ಧಿವಂತನೆಂದೂ ತೀರ್ಮಾನಿಸಲ್ಪಟ್ಟಿದ್ದಾನೆ. ಪೃಥ್ವಿಯ ಮೇಲೆ ನಡೆದ ೪೨೦ ಕೋಟಿ ವರ್ಷಗಳ ಜೀವವಿಕಾಸದ ಇತಿಹಾಸದಲ್ಲಿ, ಮೊಟ್ಟಮೊದಲನೇ ಬಾರಿಗೆ ಪ್ರಕೃತಿಯ ಗರ್ಭದಲ್ಲಿ, ನಿಸರ್ಗದ ಸೌಂದರ್ಯವನ್ನು ಮೆಚ್ಚಬಲ್ಲ; ವಿವಿಧ ಸಸ್ಯ ಮತ್ತು ಪ್ರಾಣಿಗಳ ನಡುವಿನ ಅವಿನಾ ಸಂಬಂಧದ ವಿವೇಚನೆಯುಳ್ಳ; ಮುಂಬರುವ ಅತಿದೊಡ್ಡ ಜೀವ-ವಿನಾಶವನ್ನು ತಾನು ತಡೆಗಟ್ಟಬಲ್ಲನೆಂದು ಅರಿತ ಒಂದು ಜೀವ ಜನ್ಮತಳೆದಿದೆ.

ಭೂಮಿಯ ಮೇಲೆ ಒಂದಲ್ಲ ಒಂದು ಕಾರಣದಿಂದ ಜರುಗಿದ ಜೀವವಿನಾಶದಲ್ಲಿ, ಕೋಟಿಕೋಟಿ ವರ್ಷ ವಿಕಾಸಹೊಂದಿ ಜನಿಸಿದ ಜೀವರಾಶಿಗಳಲ್ಲಿ ಶೇಕಡ ೯೯ರಷ್ಟು ಜೀವಜಾತಿಗಳು ನಿರ್ನಾಮವಾಗಿ ಹೋಗಿವೆ. ಆರನೆಯ ವಿನಾಶ ಈಗ ನಡೆಯುತ್ತಿದ್ದು, ಅದಕ್ಕೆ ಮನುಷ್ಯನ ಹಸ್ತಕ್ಷೇಪವೇ ಕಾರಣವೆಂದು ದೂರಲಾಗುತ್ತಿದೆ. ಮಾನವ, ಇಡೀ ವಾತಾವರಣವನ್ನು ಕಲುಷಿತಗೊಳಿಸಿದ್ದಾನೆ; ಕುಡಿಯುವ ನೀರನ್ನು ವಿಷಮಯಗೊಳಿಸಿದ್ದಾನೆ; ಹಸಿರು ವನಸಿರಿಯನ್ನು ಲೂಟಿಮಾಡಿದ್ದಾನೆ; ಪ್ರಾಣಿ ಮತ್ತು ಪರಸ್ಪರ ತನ್ನಲ್ಲಿಯೇ ಯುದ್ಧ ಸಾರಿದ್ದಾನೆ: ಎಲ್ಲವೂ ಸ್ವಾರ್ಥಕ್ಕಾಗಿ ಮತ್ತು ಆಧುನೀಕರಣದ ನೆಪದಲ್ಲಿ.

ಆತ, ಭೂಮಿಯನ್ನು ಸಂರಕ್ಷಿಸುವ ಪರಿ ಇದೇ ಆದಲ್ಲಿ, ಇದೇ ರೀತಿ ಬುಲೆಟ್ ಮತ್ತು ಬಾಂಬ್‌ಗಳೊಂದಿಗೆ ಯುದ್ಧ ಮುಂದುವರಿಸಿದಲ್ಲಿ, ಯಾರನ್ನು ಅತಿ ವಿಕಾಸಹೊಂದಿದ ಜೀವಿಯೆಂದು ಪರಿಗಣಿಸಿದ್ದೆವೋ ಅವನೇ, ಭೂಮಿಯ ಮೇಲೆ ಅತಿ ಕಡಿಮೆ ಅವಧಿ ಜೀವಿಸಿದ ಪ್ರಾಣಿಯೆನಿಸಿಕೊಳ್ಳುವನು. ಎಂಥ ವಿಪರ್ಯಾಸ!

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು.


ವಂದೇ ಮಾತರಂ ಸುಜಲಾಂ ಸುಫಲಾಂ ಮಲಯಜಶೀತಲಾಂ
ಸಸ್ಯಶ್ಯಾಮಲಾಂ ಮಾತರಂ ವಂದೇ ಮಾತರಂ
ಶುಭ್ರಜ್ಯೋತ್ಸ್ನಾಂ ಪುಲಕಿತಯಾಮಿನೀಂ
ಫುಲ್ಲಕುಸುಮಿತ ದ್ರುಮದಲಶೋಭಿನೀಂ
ಸುಹಾಸಿನೀಂ ಸುಮಧುರಭಾಷಿನೀಂ
ಸುಖದಾಂ ವರದಾಂ ಮಾತರಂ ವಂದೇ ಮಾತರಂ

ಶುಕ್ರವಾರ ೨೪ ಸೆಪ್ಟೆಂಬರ್ ೧೯೯೯

ಮಿತ್ರರೆ,

ಪ್ರಕೃತಿಮಾತೆ ದಯಾಮಯಿ, ಕ್ಷಮಾಶೀಲೆ. ತನಗೇನೇ ಕಷ್ಟ ಬಂದರೂ ಸಹಿಸಿಕೊಂಡು, ತನ್ನ ಮಕ್ಕಳ ಶುಭವನ್ನೇ, ಅಭ್ಯುದಯವನ್ನೇ ಬಯಸುತ್ತಾಳೆ. ಅಮೃತಪ್ರಾಯವಾದ ನಿರ್ಮಲ ನದಿಜಲದಿಂದ ನಮ್ಮ ಮೈಮನಸ್ಸನ್ನು ಕಾಪಾಡುತ್ತಾಳೆ. ಸಮೃದ್ಧ ಬೆಳೆ ಬೆಳೆಯಲು ನೆಲ, ಮಧುರವಾದ ಹಣ್ಣು-ಹಂಪಲುಗಳಿಂದ ಕೂಡಿದ ಗಿಡ-ಮರ-ಬಳ್ಳಿಗಳನ್ನೊಳಗೊಂಡ ನಿಸರ್ಗದೇವಿ ನಮ್ಮ ಎಲ್ಲ ಬೇಕು-ಬೇಡಗಳನ್ನು ಪೂರೈಸುತ್ತಾಳೆ.

ಪಕ್ಷಿಗಳ ಚಿಲಿಪಿಲಿ ಇಂಚರ, ಸುಂಯ್ ಎಂದು ಬೀಸುವ ತಂಗಾಳಿ, ಎಲೆಗಳ ಇನಿದನಿ, ಹರಿಯುವ ಝರಿ-ನದಿಗಳ ಕಲರವ, ಹೂವಿನಿಂದ ಹೂವಿಗೆ ಹಾರುವ ಭ್ರಮರಗಳ ಝೇಂಕಾರ ಇವೆಲ್ಲ ಸೇರಿ ಅವಳ ಮಧುರ ಮಾತುಗಳಾಗಿವೆ. ಪ್ರಕೃತಿಯ ಸೌಂದರ್ಯ ವರ್ಣಿಸಲಸಾಧ್ಯ. ಅವಳು ಹಿಮಾಚ್ಛಾದಿತ ಗಿರಿಕಂದರಗಳಿಂದಲೂ, ಹಚ್ಚಹಸಿರು ವನರಾಶಿಯಿಂದಲೂ ಕೂಡಿದ್ದಾಳೆ. ಶುಭ್ರವಾದ ಬೆಳದಿಂಗಳ ರಾತ್ರಿ, ಈಕೆ ಮುಗುಳ್ನಗುತ್ತಿರುವಳೋ ಎನ್ನಿಸುತ್ತದೆ!

ಇಂತಹ ತಾಯಿಯ ಆಶ್ರಯದಲ್ಲಿ ಸಕಲ ಜೀವರಾಶಿಗಳೂ ನೆಮ್ಮದಿಯಿಂದ ಬಾಳುತ್ತಿವೆ. ಎಲ್ಲ ತಾಯಂದಿರಂತೆ, ತನ್ನೆಲ್ಲ ಮಕ್ಕಳನ್ನೂ ಸರಿಸಮಾನರಾಗಿ, ಎಲ್ಲರೂ ಸುಖದಿಂದ, ಸಂತೋಷದಿಂದ ಬಾಳಬೇಕೆಂಬ ಆಸೆ ಅವಳದ್ದು! ಇಂತಹ ಪ್ರಕೃತಿಮಾತೆ ಸರ್ವಕಾಲದಲ್ಲಿಯೂ ಪೂಜನೀಯಳು.
ಈ ಎಲ್ಲ ಭಾವನೆಗಳನ್ನೂ ನಾವು ವಂದೇ ಮಾತರಂನಲ್ಲಿ ಕಾಣಬಹುದು. ಈಗ ನನಗೆ ಅನ್ನಿಸುತ್ತದೆ: ಶ್ರೀ ಬಂಕಿಮಚಂದ್ರ ಚಟರ್ಜಿಯವರು ಈ ಗೀತೆಯನ್ನು ಬರೆಯುವಾಗ ಅವರ ಮನಸ್ಸಿನಲ್ಲಿದ್ದುದು ಭಾರತಮಾತೆಯಲ್ಲ, ಪ್ರಕೃತಿಮಾತೆಯೇ!

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು.
" We do no great things
Only small things with great love''

- Mother Teresa
26 September 1997

Dear friend,

This year, I thought that I would tell you something about my cards.

The commitment: Every year, during the Wildlife Week, observed during the first week: of October, people rededicate themselves to preserve and protect the wildlife. My humble contribution to this global cause is through my wildlife message cards.
What started as a hobby, thirteen years ago, has come to stay as a commitment. These wildlife cards are drawn and coloured individually, throughout the year, and sent free to recipients all over the world with a request to spread the Wildlife Conservation Message, during the WildlifeWeek.

The Number: The cards which numbered 120 to 150 in the beginning, acquired popularity and the demand forced me to make more and more cards. Since six years, I have set a target of making 3000 cards a year. Though I have not succeeded in this attempt, the number of cards, each year have increased to 2700 to 2900. Put together, in 13 years, the total number of cards has exceeded 25,000!

This has been only possible, only with your continued encouragement and support. Because of the increasing number of recipients year after year, I have restricted this number to 1250, so that each gets at least two cards.

Please remember that I am not an artist. But I have put a small part of my heart into each of these cards. And do not need publicity. The cards do.

Recycled-content Paper: Years ago, the then minister for Environment thought otherwise. She wrote saying "Why can't you plant trees instead of wasting paper?" So, I tried to get the cards made of recycled paper. I was greatly relieved, when I came to know that today, most of the writing material that we use are made out of recycled content paper.

Request: My postal burden has doubled from this year. Please help me by sending extra stamps. Also, please do not forget to write the change of address, or as far as possible, give me your permanent address.

Let us join hands to make our only earth, a place where all elements of life can live in health, happiness and harmony.
Thank you.


Sunday, October 19, 2008

Wildlife Messages 2006

Dear friend,

I am using my blogspot to showcase my annual Wildlife Messages and the hand-painted Wildlife Message cards. These cards, depicting the picture of an animal, bird or butterfly, are individually hand-drawn and painted along with an apt 'message'. They are posted to individuals throughout the world to reach them during the wildlife week observed in India (Oct 1-7). I have been doing this to show my love and concern towards nature since 25 years. Please view them and feel free to express your sincere opinion on them.

Thank you.

Narasimhan.

अश्वथ्तमॆकम् पिचुमंदमॆकम् न्यग्रॊधमॆकम् दश चिंचिणीकाः ।

कपिथ्त बिल्वाम्लक त्रयम् च पंचाम्रवापी नरकम् न पश्यॆत्

- बृहत् पराशर संहिता


ಒಂದೊಂದು ಅರಳಿ, ಬೇವು, ಆಲ; ಹತ್ತು ಹುಣಿಸೆ; ಮೂರು-ಮೂರು ಬೇಲ, ಬಿಲ್ವ, ನೆಲ್ಲಿ ಹಾಗೂ ಐದು ಮಾವಿನ ಗಿಡಗಳನ್ನು
ಯಾವಾತ ನೆಟ್ಟು ಪೋಷಿಸುತ್ತಾನೋ ಅವನು ನರಕವನ್ನು ಕಾಣುವುದಿಲ್ಲ.

- ಬೃಹತ್ ಪರಾಶರ ಸಂಹಿತಾ



ಸೋಮವಾರ, ೨೫ ಸೆಪ್ಟೆಂಬರ್ ೨೦೦೬


ಮಿತ್ರರೆ,


ಪ್ರಪಂಚದ ಎಲ್ಲಾ ಧರ್ಮಗಳಲ್ಲೂ ಸ್ವರ್ಗ-ನರಕದ ಕಲ್ಪನೆಯಿದೆ. ಮನುಷ್ಯ ಸತ್ತ ನಂತರ ಸ್ವರ್ಗಕ್ಕೆ ಹೋಗಲು ಈ ಭೂಮಿಯ ಮೇಲೆ ಯಾವ ಯಾವ ಕಾರ್ಯಗಳನ್ನು ಮಾಡಬೇಕು ಅಥವಾ ಏನೇನು ಮಾಡಬಾರದು ಎಂದು ಈ ಧರ್ಮಗಳು ಸಾರುತ್ತವೆ. ಆದರೆ ನಿಜಕ್ಕೂ ಈ ಸ್ವರ್ಗ-ನರಕಗಳನ್ನು ಕಂಡವರು ಯಾರೂ ಇಲ್ಲ.


ಒಂದು ಕ್ಷಣ ಹೀಗೆ ಆಲೋಚಿಸಿ: ಒಂದು ಮುಂಜಾನೆ ನೀವು ಎದ್ದು ದೂರದ ಬೆಟ್ಟದ ತುದಿಗೆ ನಡೆದು ತಲುಪಿದ್ದೀರಿ. ಅಲ್ಲಿಯ ಆ ಸುಂದರ ವಾತಾವರಣ, ತಂಪನೆ ಬೀಸುವ ಕುಳಿರ್ಗಾಳಿ, ಮರ-ಗಿಡಗಳ ಕಲರವ, ಹಕ್ಕಿಗಳ ಇಂಚರ, ಎಲ್ಲವೂ ಅನುಭವಕ್ಕೆ ಬಂದಾಗ ವಾಃ! ಎಂಥ ಸ್ವರ್ಗ! ಎಂದುಕೊಳ್ಳುತ್ತೀರಿ. ಅಲ್ಲಿಂದ ಹಿಂದಿರುಗಿ ಊರಿಗೆ ಬಂದಾಗ ನಿಮಗೆ ಕಾಣುವುದು ಅದೇ ಕಾಂಕ್ರೀಟು ಕಾಡು, ಅದೇ ಧೂಳು, ಅದೇ ವಾಹನಗಳ ಆರ್ಭಟ, ಅದೇ ಕೊಳೆತ ವಾಸನೆ ....ಛೀ! ಇದೆಂಥ ನರಕ! ಎಂದು ಮೂಗು ಮುರಿಯುವವರೂ ನೀವೇ. ಆದರೆ, ಇಂತಹ ನರಕವನ್ನು ಸೃಷ್ಟಿಸಿದವರು ಯಾರು? ನಾವೇ ಅಲ್ಲವೆ?


ಒಂದು ಸಸ್ಯವನ್ನು ನೆಟ್ಟು ಪೋಷಿಸಿದರೆ, ಅದು ಬೆಳೆದು, ಅಸಂಖ್ಯಾತ ಜೀವಿಗಳಿಗೆ ಆಶ್ರಯವನ್ನೂ, ಆಹಾರವನ್ನೂ ನೀಡುತ್ತದೆ. ಇಂತಹ ಮರಗಳ ಗುಂಪನ್ನು ನೀವು ಬೆಳೆಸಿದರೆ ಸ್ವರ್ಗದ ಒಂದು ತುಣುಕೇ ನಿಮ್ಮ ಕಣ್ಣ ಮುಂದೆ ಬೆಳೆಯುವುದನ್ನು ಕಾಣಬಹುದು! ಮಾನವನ ಯಾವ ಕೈಗಳು ನಾಡನ್ನು ನರಕವಾನ್ನಾಗಿಸುವವೋ ಅದೇ ಕೈಗಳಿಂದ ಸ್ವರ್ಗಸದೃಶವಾದ ವಾತಾವರಣವನ್ನೂ ನಿರ್ಮಿಸಬಹುದು!


ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.


ವಂದನೆಗಳು.

Friday, 25 September 2006

Dear friend,

The concept of Heaven and Hell are nothing new to humankind. Heaven is a place of eternal bliss and peace and in hell there is total chaos and ceaseless hostility. All religions prescribe the dos and don’ts to us that have an ultimate aim to reach heaven after death. None of us really has ever seen the heaven or hell.

For a moment, please imagine: It is an early morning and you have walked to the top of the hill that is outside your township. The serene atmosphere, cool breeze and the sound of the wind from the rustling leaves… Involuntarily you exclaim, “Oh! What a Heaven!” Later, you return to your town. There you find the same concrete jungle, the same dust, smoke, and noise of the vehicles, rotten smell… I am sure, you would utter, “What a hell!” Who is responsible for creating this hell? Aren’t we?

When you plant a tree, it grows and gives shelter and nourishment to innumerable life forms. If you grow a grove of such trees, you will indeed see a small piece of paradise growing in front of you ! The same human hands that created the hell can also make it a heavenly place to live in !

Let us join hands to make our only Earth, a place where all elements of life can live in health, happiness and harmony.

Thank you.

Please write to the above address to be a proud recipient of these cards every year.
Total of hand-painted cards made: this year 2150; in 22 years 45,250.
Total recipients: this year 1190; in 22 years 6450.
Please send more stamps to reduce my burden on postage.


Tuesday, October 14, 2008

Wildlife Messages 2007




नास्ति मात्रासमम् तीर्थम् नास्ति मात्रा समागतिः ।
नास्ति मात्रासमम् त्राणम् नास्ति मात्रा समःप्रपा ॥

ತಾಯಿಗೆ ಸಮನಾದ ತೀರ್ಥವಿಲ್ಲ, ತಾಯಿಗೆ ಸಮನಾದ ಆಶ್ರಯ ಬೇರಿಲ್ಲ
ತಾಯಿಗೆ ಸಮನಾದ ರಕ್ಷಕರಿಲ್ಲ ತಾಯಿಗೆ ಸಮನಾದ ಅರವಟ್ಟಿಗೆ ಬೇರಿಲ್ಲ.

ಬುಧವಾರ, ೨೬ ಸೆಪ್ಟೆಂಬರ್ ೨೦೦೭

ಮಿತ್ರರೆ,

ತಾಯಿಯೇ ದೇವರು. ಅವಳು ಜ್ಞಾನದಾಯಿ, ಕರುಣಾಮಯಿ, ಕ್ಷಮಾಶೀಲೆ, ತ್ಯಾಗಶೀಲೆ ಮತ್ತು ಅವಳ ತಾಳ್ಮೆ ಅಪರಿಮಿತ. ಈ ಮಾತೃವಾತ್ಸಲ್ಯವನ್ನು ನಾವು ನಿಕೃಷ್ಟ ಜೀವಿಗಳಲ್ಲಿಯೂ ಕಾಣುತ್ತೇವೆ. ಅವುಗಳ ಜೀವನವೇ ವಿಚಿತ್ರ; ಎಷ್ಟೋ ಕಷ್ಟ-ಕೋಟಲೆಗಳ, ಅನಿಶ್ಚಿತತೆಗಳ ಹಾದಿ.
ಉದಾಹರಣೆಗೆ, ನಮ್ಮ ಕರುಳಿನ ಒಳಗೋಡೆಗೆ ಅಂಟಿಕೊಂಡು, ರಕ್ತವನ್ನು ಹೀರುತ್ತಾ ಜೀವನ ನಡೆಸುವ ಕೊಕ್ಕೆಹುಳದ ಬಗ್ಗೆ ನಾನು ನಿಮಗೆ ಹೇಳುತ್ತೇನೆ. ಆ ಹುಳದ ಮೊಟ್ಟೆಗಳು ಮಲದಲ್ಲಿ ಹೊರಬಿದ್ದು, ನೆಲದ ಮೇಲೆ ಮರಿಹುಳವಾಗಿ ಮೊಳೆಯುತ್ತವೆ. ಯಾರಾದರೂ ಅದರ ಮೇಲೆ ಕಾಲಿಟ್ಟಾಗ, ಅವು ಪಾದಕ್ಕೆ ಅಂಟಿಕೊಂಡು, ಚರ್ಮವನ್ನು ಭೇದಿಸಿ ರಕ್ತವನ್ನು ಹೊಕ್ಕು, ಅಲ್ಲಿಂದ ರಕ್ತನಾಳಗಳ ಮೂಲಕ ಹೃದಯ ಮತ್ತು ಶ್ವಾಸಕೋಶವನ್ನು ತಲುಪಿ, ಗಂಟಲಿಗೇರಿ, ನಾವು ಎಂಜಲು ನುಂಗಿದಾಗ ಅನ್ನನಾಳದ ಮೂಲಕ ಪುನಃ ಕರುಳನ್ನು ಸೇರಿ ಜೀವನಚಕ್ರವನ್ನು ಮುಂದುವರೆಸುತ್ತವೆ. ಕೊಕ್ಕೆಹುಳಗಳಿಗೆ ಸ್ವಂತ ಜೀರ್ಣಾಂಗಗಳಿಲ್ಲ; ಸಂಪೂರ್ಣ ಕತ್ತಲಲ್ಲಿ ಜೀವಿಸುವುದರಿಂದ ಕಣ್ಣುಗಳಿಲ್ಲ; ಇನ್ನು ಮಾತನಾಡಲು ಯಾರೂ ಇಲ್ಲದಿರುವುದರಿಂದ ಸ್ವರವೂ ಇಲ್ಲ; ನಡೆದು ಓಡಾಡುವುದೆಲ್ಲಿಗೆ, ಹಾಗಾಗಿ ಕೈ-ಕಾಲುಗಳೂ ಇಲ್ಲ. ಹೀಗೆ ಮೂಗು, ಕಣ್ಣು, ಧ್ವನಿ, ಕಿವಿ, ಕೈಕಾಲು ಯಾವುದೂ ಇಲ್ಲದ ಜೀವವೂ ಒಂದು ಜೀವವೇ? ಅದರದ್ದೂ ಒಂದು ಬದುಕೇ? ಎಂದು ನಿಮಗನ್ನಿಸಬಹುದು. ಆದರೆ, ಆ ಕೊಕ್ಕೆಹುಳದ ತಾಯಿಗೆ ಹಾಗೆ ಅನ್ನಿಸುವುದಿಲ್ಲ. ಎಲ್ಲ ತಾಯಂದಿರಂತೆ ಅವಳಿಗೂ ಆಸೆ_ ತನ್ನ ಮಕ್ಕಳು ತನಗಿಂತ ನೆಮ್ಮದಿಯ, ಸುಖಜೀವನವನ್ನು ಕಾಣಲಿ ಅಂತ. ಆದ್ದರಿಂದ ಅವಳು ಪ್ರತಿದಿನ ೧೨೦೦-೧೫೦೦ ಮೊಟ್ಟೆಗಳನ್ನಿಟ್ಟು ಹರಸುತ್ತಾಳೆ!

ಭೂಮಿಯ ಮೇಲಿರುವ ಸಕಲ ಜೀವಕೋಟಿಗಳಿಗೂ ಆಶ್ರಯವನ್ನು ನೀಡುತ್ತಿರುವ ಭೂಮಾತೆಯಲ್ಲೂ ನಾವು ತಾಯಿಯ ಎಲ್ಲ ಗುಣಗಳನ್ನೂ ಕಾಣುತ್ತೇವೆ. ಪ್ರತಿದಿನವೂ ಅವಳನ್ನು ತುಳಿಯುತ್ತೇವೆ, ಅಗೆಯುತ್ತೇವೆ, ಗಾಯ ಮಾಡುತ್ತೇವೆ, ಕಡಿಯುತ್ತೇವೆ ಮತ್ತು ಒಡಹುಟ್ಟಿದ ಇತರ ಜೀವಿಗಳನ್ನು ನಿಷ್ಕಾರಣವಾಗಿ ಕೊಲ್ಲುತ್ತೇವೆ. ಆದರೂ ಭೂತಾಯಿ ನಮ್ಮ ಎಲ್ಲ ದುಷ್ಕೃತ್ಯಗಳನ್ನೂ ತಾಳ್ಮೆಯಿಂದ ಸಹಿಸಿಕೊಂಡು ನಮ್ಮನ್ನು ಉದಾರ ಮನಸ್ಸಿನಿಂದ ಕ್ಷಮಿಸುತ್ತಾಳೆ. ಇದು ಎಲ್ಲಿಯವರೆಗೆ ಎಂದು ನಾವು ಯೋಚಿಸಬೇಕಾದ ಸಮಯ ಬಂದಿದೆ.

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.

None could love more than our mother,
None could console, foster or feed more than our mother.


Tuesday, 25 September 2007

Dear friend,

Mother is the living god. She gives us knowledge; she is ever-loving, selfless, patient, sacrificing and pardons all our misdeeds. These virtues of a mother are seen in even lowly creatures. Their lifecycle is an arduous journey of innumerable obstacles and unexpected events. I will give the example of a hookworm that lives in our intestines. A hookworm lives by holding on to the inner surface of the small intestine and absorbing blood from us. Its eggs come out in the faeces and they hatch into larvae on the ground. When anybody steps on them, they immediately attach themselves, pierce through the skin of the sole and enter the blood stream. Then they go to the heart, thence to the lungs and crawl up the throat. When we swallow, they find their way into the food pipe and reach the intestines, again to start a new life. They lack a digestive system of their own; as they live in the complete darkness of the gut, they do not have eyes; they have no friends, so are deaf and dumb; they do not have to move around, so are devoid of hands and legs. Now, tell me: here is an animal without eyes, nose, ears, voice and both the limbs. Do you think that with all these deficiencies anyone can lead a life? Is there is any purpose in their life? But, the mother of a hookworm like any mother has ambitions: She wishes all her children to live a more happy and contented life than her. So she lays more than 1200 eggs daily and blesses them!

We see the same motherly virtuousness in the Mother Nature. She too has given birth to millions of lives on this Earth and nurtures them all with equal love and affection. Everyday we torture, humiliate and dig wounds on her body and kill the other lifeforms unscrupulously and without purpose. Mother Earth bears with all our mischief with endurance and forgives us. But for how long?

Let us join hands to make our only Earth, a place where all elements of life can live in health, happiness and harmony.

Thank you.

Dr. S V Narasimhan VIRAJPET 571 218 India. drnsimhan@yahoo.com

The Wildlife Message Cards are individually hand-painted and sent free to individuals throughout the world to mark the Wildlife Week.
Please write to the above address to be a proud recipient of these cards every year.
Total of hand-painted cards made: this year 2300; in 23 years 47,550.
Total recipients: this year 1170; in 23 years 6660.

Please send more stamps to reduce my burden on postage.

Monday, September 29, 2008

Wildlife Message 2008






Richness


Friday, 26 September 2008

Dear friend,


Many times I have wondered as to what is richness, who is a rich man? Is it only the money that makes a man rich? All of us tend to believe that a person who lives in a city earns a lot of money, builds large mansions, attends posh parties, shops a lot and leads a glamourous life. So he is a rich man. And a farmer who lives in a village is naturally poor.


When you happen to visit a friend in a city, there is a palpable change in the attitude of your host. Apart from looking into your daily needs, his daily routine and programmes change. Your host will be eagerly waiting for you to quit! In addition, you have to go to city with a heavy purse too!


On the other hand, have you visited your friend living in a village? Wow! How happy his whole family is! He does not have to bother about water, grains, vegetables, milk or poultry. They are aplenty. You do not have to open your purse. You can spend all your time amid nature, forget your botherations entirely. And when you depart, your host invariably laments: friend, it is as if you came yesterday, you could have stayed for a few more days!


What a contrast! A farmer has to look into the daily needs of not only his kith and kin but also the labourers who work with him, the cattle, poultry and other domestic animals. More over the trees that he has planted in his farmland shelter and nurture innumerable lifeforms. In a sense he has a large extended family. Every one leads a happy, secure and contented life under one village farmer!


Now tell me: who is really rich? I feel that the simplicity and generosity of a true farmer are the virtues for us to follow.


Let us join hands to make our only Earth, a place where all elements of life can live in health, happiness and harmony.


Thank you.


Dr. S V narasinhan

VIRAJPET 571 218 India.

drnsimhan@yahoo.com,

90087 38258


Dear friend, more than 7000 individuals have received these Wildlife Message cards during the past 24 years and spread the wildlife messages thoughout the world. Our collective effort surely has brought a perceptible change in the mindset of people around us. The total number of cards has crossed the 50,000 mark. Please tell me your sincere opinion on this moment of great achievement.


The Wildlife Message Cards are individually hand-painted and sent free to individuals throughout the world to mark the Wildlife Week. Please write to the above address to be a proud recipient of these cards every year.


Total of hand-painted cards made: this year 2490; in 24 years 50,040.

Total recipients: this year 1230; in 24 years 7110.

Please send more stamps to reduce my burden on postage.