Thursday, September 26, 2013

Wildlife Messages 2013


SILENT ACHIEVEMENTS

E¼É¬ÄAzÀ ªÉƼÀPÉAiÉÆUɪÀAzÀÄ vÀªÀÄmÉUÀ½®è |
¥sÀ® ªÀiÁUÀĪÀAzÀÄ vÀÄvÀÆÛj zÀ¤¬Ä®è ||
¨É¼ÀQêÀ ¸ÀÆAiÀÄðZÀAzÀægÀzÉÆAzÀÄ ¸À¢Ý®è |
ºÉÆ° ¤£Àß vÀÄnUÀ¼À£ÀÄ ªÀÄAPÀÄwªÀÄä ||
(There are no drum-beats when a seed sprouts; No trumpets heard when a fruit ripens;
The light rays of Sun and Moon are silent. Do not ostentatiously bluster. Stitch your lips shut!)
-- Di Vi G’s ‘Mankutimmana Kagga’


 Wednesday, 25 September 2013
Dear friend,

We, the Homo sapiens, are the most evolved life forms on the Earth. In fact, Mother Nature has taken nearly four billion years to make us! With the whole Earth as her laboratory, slowly and laboriously, from a bacterium to an amoeba, from a cheetah to a chimpanzee, she has taken those chemicals that are essential, those qualities that are indispensable for the existence of humans and unified them into our genes!

Now we indeed are the most intelligent of all and at the same time we owe them to nature and all the living organisms that inhabit or those that inhabited this world. I have scores of examples to prove that humans are no match to Nature.

We have accomplished considerable progress in the field of science and have tried to convert electrical energy into light energy. To begin with we have had Edison’s incandescent bulbs for more than a century. Passing an electric current through a tungsten wire makes it to heat up and glow. Here the heat generated is about 93 percent and only 7 percent light! In fact much electricity is wasted. Nearly 40% energy was saved when light from fluorescent tubes filled our rooms. Then came the CFLs where the conversion factor between electricity and light was still very small. Now the LED lights are the latest inclusion.

I just told you the story of light sources to compare them with the light emitted by a firefly. With a chemical pigment Luciferin that reacts with atmospheric Oxygen, a firefly produces cold light. In a firefly the energy efficiency is to the extent of 97%! The technology coming from an insignificant creature, as low as an insect, that evolved on this Earth about 250 million years ago is unbelievable.

Now tell me: we create pomp and vaunt even when we invent trivial things. Nature is ever soundless in its achievements. Don’t you think we have much to learn from Nature?

Let us join hands to make our only Earth, a place where all elements of life can live in health, happiness and harmony.
Thank you.

Special Wildlife Messenger of This Year


Malabar Trogon (Harpactes fasciatus) With its jet-black head and neck; bright red belly and a contrasting white garland, the male Malabar Trogon is a very delightful bird of the evergreen forests of India’s Western Ghats. And with a light blue ring around its eyes; long, square-cut, black-edged tail makes it more attractive! It has the habit of sitting motionless for long periods. Food includes insects and berries. The pair make nest in tree holes and both incubate.   

Total of hand-painted cards made: this year 2050; in 29 years 58,640. Total recipients: this year 1190; in 29 years 8860.

The Wildlife Message Cards are individually hand-painted and                                                                                                    sent free to individuals throughout the world to mark the Wildlife Week.

ಸದ್ದಿಲ್ಲದ ಸಾಧನೆಗಳು

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ |
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ||
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ || 
- ಡಿ. ವಿ. ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’

                                                                                                   ಬುಧವಾರ, ೨೫ ಸೆಪ್ಟೆಂಬರ್ ೨೦೧೩
ಮಿತ್ರರೆ,

ಭೂಮಿಯ ಮೇಲೆ ಮಾನವನದ್ದು ಎಲ್ಲರಿಗಿಂತ ವಿಕಾಸ ಹೊಂದಿದ ಜೀವ. ನಿಜಕ್ಕೂ ಇದು ಪ್ರಕೃತಿಯ ನಲವತ್ತು ಕೋಟಿ ವರ್ಷಗಳ ಫಲವೆಂದೇ ಹೇಳಬೇಕು. ಇಡೀ ಭೂಮಿಯನ್ನೇ ತನ್ನ ಪ್ರಯೋಗಾಲಯವನ್ನಾಗಿಸಿಕೊಂಡು ಬ್ಯಾಕ್ಟೀರಿಯಾ-ಅಮೀಬಾ ಮುಂತಾದ ಏಕಾಣು ಜೀವಿಗಳಿಂದ ಹಿಡಿದು ಚಿರತೆ-ಚಿಂಪಾಂಜಿಯವರೆಗೆ, ಮನುಷ್ಯನ ದೇಹಕ್ಕೆ ಏನೆಲ್ಲ ರಾಸಾಯನಿಕ ದ್ರವ್ಯಗಳು ಅವಶ್ಯವೋ, ಅವನ ಅಂಗಾಗಗಳಿಗೆ ಏನೆಲ್ಲ ಗುಣವಿಶೇಷಗಳು ಮುಖ್ಯವೋ ಅವುಗಳನ್ನೆಲ್ಲ ನಮ್ಮ ಜೀವತಂತುಗಳಲ್ಲಿ ಕ್ರೋಢೀಕರಿಸಿ ತಯಾರಿಸಲ್ಪಟ್ಟ ಒಟ್ಟಾರೆ ಸ್ವರೂಪವೇ ನಾವು. ಇಂದು ಪ್ರಪಂಚದಲ್ಲಿ ವಾಸವಾಗಿರುವ ಎಲ್ಲ ಜೀವಿಗಳಿಗಿಂತ ನಾವೇ ಪ್ರಜ್ಞಾವಂತರು-ಮೇಧಾವಿಗಳು ಎಂದು ಬೀಗುತ್ತೇವೆ. ಆದರೆ ನಿಸರ್ಗದ ಮುಂದೆ ಸರಿಗಟ್ಟಲು ನಾವು ಎಳ್ಳಷ್ಟೂ ಅರ್ಹರಲ್ಲ ಎಂದು ಸಾಬೀತುಪಡಿಸಲು ನನ್ನಲ್ಲಿ ಹಲವಾರು ಉದಾಹರಣೆಗಳಿವೆ.

ವಿಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ನಾವು ವಿದ್ಯುಚ್ಛಕ್ತಿಯಿಂದ ಬೆಳಕನ್ನು ಪಡೆಯಲು ಸಾಕಷ್ಟು ಶ್ರಮಿಸಿದ್ದೇವೆ. ಮೊದಲಿಗೆ ಒಂದು ಟಂಗ್‌ಸ್ಟನ್ ತಂತಿಯ ಮೂಲಕ ವಿದ್ಯುತ್ತನ್ನು ಹಾಯಿಸಿ ಅದನ್ನು ಕಾಸಿದಾಗ ಹೊಮ್ಮುವ ಬೆಳಕು -ಎಡಿಸನ್ನನ ವಿದ್ಯುತ್ ಬಲ್ಬ-ನ್ನು ನೂರಕ್ಕೂ ಹೆಚ್ಚು ವರ್ಷ ಬಳಸಿದ್ದೇವೆ. ಇಲ್ಲಿ ನಾವು ವ್ಯಯಿಸುವ ವಿದ್ಯುತ್ತಿನಿಂದ ದೊರಕುವುದು ನೂರಕ್ಕೆ ೯೩ ಭಾಗ ಶಾಖ, ಬರೇ ೭ ಭಾಗದಷ್ಟು ಬೆಳಕು: ಬೆಳಕಿಗಿಂತ ಶಾಖವೇ ಹೆಚ್ಚು! ಶಕ್ತಿಯ ಅಪಾರ ಅಪವ್ಯಯ! ಹಾಗಾಗಿ ವಿದ್ಯುಚ್ಛಕ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಮುಂದೆ ಟ್ಯೂಬ್‌ಲೈಟ್‌ಗಳು ಬಂದವು: ಇಲ್ಲಿಯೂ ೬೦% ಶಾಖ, ೪೦% ಬೆಳಕು. ಇನ್ನೂ ಮುಂದುವರಿದು ಸಿಎಫ್ಎಲ್ ದೀಪಗಳು ಬಂದಿವೆ. ಆದರೂ ಸಂಪೂರ್ಣವಾಗಿ ವಿದ್ಯುತ್ತನ್ನು ಬೆಳಕನ್ನಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಎಲ್‌ಇಡಿ ದೀಪಗಳು ಎಲ್ಲೆಡೆ ಪ್ರಚಲಿತಗೊಂಡಿವೆ. ಅತಿ ಕಡಿಮೆ ವಿದ್ಯುತ್ತಿನಿಂದ ಹೆಚ್ಚು ಬೆಳಕನ್ನು ಪಡೆಯುವಲ್ಲಿ ಇದು ಮತ್ತೊಂದು ಹೆಜ್ಜೆ.

ಇದನ್ನೆಲ್ಲ ನಾನು ಏಕೆ ಹೇಳಿದೆನೆಂದರೆ, ಜಗತ್ತಿನಲ್ಲಿಯೇ ಅತಿ ಜಾಣರಾದ ನಾವು ನಮ್ಮ ಎಲ್ಲಾ ಬುದ್ಧಿವಂತಿಕೆಯನ್ನೂ ಉಪಯೋಗಿಸಿ, ವಿದ್ಯುಚ್ಛಕ್ತಿಯನ್ನು ಒಂದಿಷ್ಟೂ ಪೋಲು ಮಾಡದೆ ಬೆಳಕನ್ನು ಪಡೆಯುವಲ್ಲಿ ಸಫಲತೆಯನ್ನು ಪಡೆದಿದ್ದೇವೆಯೇ?

ನೀವು ಮಿಣುಕು ಹುಳವನ್ನು ಗಮನಿಸಿರಬಹುದು. ತನ್ನ ದೇಹದಲ್ಲಿ ಉತ್ಪತ್ತಿಯಾಗುವ ಲೂಸಿಫೆರಿನ್ ಎಂಬ ರಸಾಯನಿಕ ವರ್ಣದ್ರವ್ಯ ಮತ್ತು ಗಾಳಿಯಲ್ಲಿರುವ ಆಮ್ಲಜನಕವನ್ನು ಬಳಸಿಕೊಂಡು ತಂಪಾದ ಬೆಳಕನ್ನು ಉತ್ಪಾದಿಸುತ್ತದೆ. ವ್ಯಯಿಸುವ ಶಕ್ತಿಯಲ್ಲಿ ನೂರಕ್ಕೆ ೯೭ರಷ್ಟು ಬೆಳಕು! ಅಷ್ಟಕ್ಕೂ ಮಿಣುಕು ಹುಳ ಯಃಕಶ್ಚಿತ್ ಒಂದು ಕೀಟ - ಮನುಷ್ಯನಿಗಿಂತ ಸುಮಾರು ಇಪ್ಪತ್ತೈದು ಕೋಟಿ ವರ್ಷಗಳಷ್ಟು ಹಿಂದೆ ಭೂಮಿಯ ಮೇಲೆ ವಿಕಾಸ ಹೊಂದಿದ ಒಂದು ಜೀವ. ನಾವು ಸಾಧಿಸಲಾಗದ್ದನ್ನು ಅವು ಆ ಕಾಲದಲ್ಲಿಯೇ ಸಾಧಿಸಿ ತೋರಿಸಿವೆ.

ಈಗ ಹೇಳಿ. ನಮ್ಮ ಆವಿಷ್ಕಾರಗಳು ಎಷ್ಟೇ ಸಣ್ಣದಿದ್ದರೂ ಅದನ್ನೇ ಅಬ್ಬರದಿಂದ ಯಾರೂ ಮಾಡಲಾರದ ಸಾಧನೆ ಎಂಬಂತೆ ಗರ್ವದಿಂದ ಬೀಗುತ್ತೇವಲ್ಲ, ನಿಸರ್ಗದ ಕೂಸುಗಳಾಗಿರುವ ನಾವು ಪ್ರಕೃತಿಯಿಂದ ಕಲಿಯಲು ಬೇಕಾದಷ್ಟಿದೆ ಅನ್ನಿಸುವುದಿಲ್ಲವೆ?

ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.

ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ

ಕಾಕರಣೆ : ಗಾಢವಾದ ಕಪ್ಪು ತಲೆ, ಕತ್ತು;  ಉಜ್ವಲ ಕೆಂಪು ಬಣ್ಣದ ಹೊಟ್ಟೆ; ಇವೆರಡರ ನಡುವೆ ಎದ್ದು ಕಾಣುವ ಬಿಳಿ ಹಾರ! ಇದರೊಂದಿಗೆ ಕಂದು ಬೆನ್ನು; ಉದ್ದವಾದ, ನೀಟಾಗಿ ಕತ್ತರಿಸಿರುವ ಕಪ್ಪು ಅಂಚಿನ ಬಾಲ, ಜೊತೆಗೆ ಕಣ್ಣಿನ ಸುತ್ತ ತಿಳಿನೀಲಿ ಉಂಗುರ. ಗಂಡು ಕಾಕರಣೆ ಹಕ್ಕಿಯನ್ನು ಅತ್ಯಂತ ಆಕರ್ಷಕಗೊಳಿಸಲು ಇವಿಷ್ಟು ಸಾಕು.  ಭಾರತದ ಪಶ್ಚಿಮಘಟ್ಟಗಳ ಸದಾಹಸಿರು ಕಾಡುಗಳಲ್ಲಿ ವಾಸ ಮಾಡುವ ಈ ಹಕ್ಕಿಗಳಿಗೆ ಕೀಟ ಮತ್ತು ಹಣ್ಣುಗಳೇ ಆಹಾರ. ಮರದ ಪೊಟರೆಯೊಳಗೆ ಗೂಡು. ಮರಿ ಹಕ್ಕಿಗಳು ದುರ್ಬಲವಾದ್ದರಿಂದ ಹೆಚ್ಚು ಕಾಲ ಪೋಷಣೆ ಅಗತ್ಯ. 

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೨೦೫೦; ಕಳೆದ ೨೯ ವರ್ಷಗಳಲ್ಲಿ ೫೮,೬೪೦.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೧೯೦; ಕಳೆದ ೨೯ ವರ್ಷಗಳಲ್ಲಿ ೮,೮೬೦.



6 comments:

Anisha said...

Lovely illustrations!
Just yesterday, I had met Krishnaraj sir, who showed me your book on the birds of Coorg. It's wonderful!

Sowmya Chakravarthy said...

I was delighted to know you have entered the Limca Book of world records.
You must head for the Guiness now...

So proud of you :)

shivaprakash said...

ವರುಷಕ್ಕೊಮ್ಮೆ ವನ್ಯಜೀವಿ ಸಂದೇಶವನ್ನು ಕರಾರುವಕ್ಕಾಗಿ ಒಂದೂವರೆ ದಶಕದಿಂದ ನೆನೆಪಿಸಿಕೊಡುತ್ತಿರುವ ನಿಮಗೆ, ನನ್ನ ಅನಂತ ಧನ್ಯವಾದಗಳು

Ravi Hanj said...

Kudos to your wonderful efforts! I wish you inspire as many youngsters as possible. Thanks for my friend Mr.Pejathaya for introducing your blog to me.

Best,
Ravi Hanj.

Biplab said...

it is simply superb ,

Unknown said...

Great effort!!Congratulations!!!I still keep some of your cards received through my colleague Ramesha ( 10 years back)