Sunday, February 22, 2026

ವಿರಾಜಪೇಟೆ ತಾಲ್ಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ- ಸಮ್ಮೇಳನಾಧ್ಯಕ್ಷರ ಭಾಷಣ

ವಿರಾಜಪೇಟೆ ತಾಲ್ಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ

ಶನಿವಾರ, ೨೧ ಜನವರಿ ೨೦೨೩

ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆರ್ಜಿ ಗ್ರಾಮ, ದ. ಕೊಡಗು.

ಸಮ್ಮೇಳನಾಧ್ಯಕ್ಷರ ಭಾಷಣ

ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ

ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ||

ಅಲೆಯ ಮಲೆಯ ಗಾಳಿಯೊ ಖಗಮೃಗೋರಗಾಳಿಯೊ

ನದಿನಗರನಗಾಳಿಯೊ ಇಲ್ಲಿಲ್ಲದುಳಿದುದೆ||

ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?

_ ಮಂಜೇಶ್ವರರ ಽಕನ್ನಡಿಗರ ತಾಯಿ'ಯಿಂದ

ಕೊಡಗಿನ ಸಾರಸ್ವತ ಲೋಕದ, ಕನ್ನಡ ಸಾಹಿತ್ಯ ಸಮ್ಮೇಳನವೆಂಬ ಅನರ್ಘ್ಯ ಅಕ್ಷರ ಪೂಜೆಯ ಇಂತಹ ಶುಭ ಸಂದರ್ಭದಲ್ಲಿ, ಈ ಗೌರವಯುತ ಸ್ಥಾನ ನೀಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳಿಗೂ ಮತ್ತು ಇದಕ್ಕೆ ಸರ್ವಾನುಮತದ ಮುದ್ರೆಯೊತ್ತಿದ ಸರ್ವ ಸಹೃದಯ ಮನಸ್ಸುಗಳಿಗೆ, ಮತ್ತು ನನ್ನೆಲ್ಲ ಪ್ರೀತಿಯ ಕೊಡಗಿನ ಅಕ್ಷರ ಪ್ರೇಮಿಗಳಿಗೆ, ನನ್ನ ಹೃದಯಾಂತರಾಳದ ನಮನಗಳು.

ಕನ್ನಡ ಭಾಷಾ ಸಾಹಿತ್ಯವು ವಿಶ್ವದ ಇನ್ನಾವುದೇ ಸಾಹಿತ್ಯಕ್ಕಿಂತ ಹೆಚ್ಚು ಶ್ರೀಮಂತವಾಗಿದೆ ಎಂದು ಭಾಷಾತಜ್ಞರು ಅಭಿಪ್ರಾಯ ಪಡುತ್ತಾರೆ. ಕನ್ನಡÀಕ್ಕೆ ಸುಮಾರು ಎರಡೂವರೆ ಸಾವಿರ ವರ್ಷಗಳ ಶಾಸನಾಧಾರಿತ ಮತ್ತು ಅಕ್ಷರರೂಪದ ಇತಿಹಾಸವಿದೆ. ಕನ್ನಡ ಭಾಷೆಯು ಬೆಳೆದು ಬಂದ ಹಾದಿಯ ಒಂದು ಪಕ್ಷಿನೋಟವನ್ನು ಬೀರೋಣ. ಕ್ರಿ.ಶ. ೨ನೇ ಶತಮಾನದಲ್ಲಿ ಈಜಿಪ್ಟ್ ದೇಶದಲ್ಲಿ ದೊರೆತ ಒಂದು ಗ್ರೀಕ್ ನಾಟಕದಲ್ಲಿ, ಕನ್ನಡ ಪದಗಳು ಲಭಿಸಿವೆ. ತಾಳಗುಂದ (ಕ್ರಿ.ಶ.೩೭೦) ಮತ್ತು ಹಲ್ಮಿಡಿ (ಕ್ರಿ.ಶ.೪೫೦) ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾರುತ್ತವೆ. ಕನ್ನಡಿಗರು "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್' ಎಂದು ಕವಿರಾಜಮಾರ್ಗ (ಕ್ರಿ.ಶ.೮೫೦) ಜಂಭದಿAದ ಹೇಳುತ್ತದೆ! ಅಂದರೆ, ಅದಕ್ಕಿಂತ ಏನಿಲ್ಲವೆಂದರೂ ಎರಡು ಸಾವಿರ ವರ್ಷ ಹಿಂದೆಯೇ ಕನ್ನಡ ಭಾಷೆ ಮನೆಮಾತಾಗಿತ್ತೆಂದು ನಾವು ಊಹಿಸಬಹುದು.

ಶಾತವಾಹನ, ಕದಂಬ, ಗಂಗ, ಬಾದಾಮಿ ಚಾಲುಕ್ಯ, ರಾಷ್ಟçಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ಯಾದವ, ಕುಮ್ಮಟದುರ್ಗ, ಕಾಕತೀಯ, ವಿಜಯನಗರ, ಕೆಳದಿ, ಮೈಸೂರು ಮೊದಲಾದ ಕರ್ನಾಟಕ ಸಾಮ್ರಾಜ್ಯದ ದೊರೆಗಳು ಕನ್ನಡ ಕವಿಗಳಿಗೆ ರಾಜಾಶ್ರಯವನ್ನು ನೀಡಿ, ಪ್ರೋತ್ಸಾಹಿಸಿ, ಕನ್ನಡದ ಬೆಳವಣಿಗೆಗೆ ಕೈಜೋಡಿಸಿದರು. ಇಡೀ ಭಾರತ ದೇಶ ಕಂಡ ಅತ್ಯಂತ ಶ್ರೇಷ್ಠ ಕವಿಗಳು ಈ ಕನ್ನಡನಾಡಿನಲ್ಲಿ ಜನಿಸಿದ್ದಾರೆ ಎನ್ನುವುದೇ ಹೆಮ್ಮೆಯ ವಿಷಯ!

ಣುಣುಪಾದ ದುಂಡಾದ ಲಿಪಿಯ ಕರ್ಮಾಟಕ|

ದನುಪಮ ರಳಕುಳವೆರಸಿ||

ಮನುಜರ ದೇವರಜೀವರಾಶಿಯ ಶಬ್ದ|

ದನುಪಮ ಪ್ರಾಕೃತ ದ್ರವಿಡ||

_ ಕುಮುದೇಂದು ಮುನಿ

ಶ್ರೀವಿಜಯ, ಪಂಪ, ಪೊನ್ನ, ರನ್ನ, ಹರಿಹರ, ರಾಘವಾಂಕ, ಜನ್ನ, ಕೇಶಿರಾಜ, ಕುಮಾರವ್ಯಾಸ ಮುಂತಾದವರು ಕನ್ನಡವನ್ನು ತಮ್ಮ ಅದ್ಭುತ ಕೃತಿಗಳಿಂದ ಶ್ರೀಮಂತಗೊಳಿಸಿದರು. ರಾಮಾಯಣ, ಭಾಗವತ, ಮಹಾಭಾರತ, ವೇದ-ಉಪನಿಷತ್ತುಗಳು, ಬೌದ್ಧ, ಜೈನ, ಮುಂತಾದ ವಿವಿಧ ಮತಗಳ ಸಾಹಿತ್ಯ ವಿಫುಲವಾಗಿ ರಚಿತಗೊಂಡವು. ಕ್ರಿ.ಶ. ಹನ್ನೊಂದನೆಯ ಶತಮಾನದ ದೇವರ ದಾಸಿಮಯ್ಯ, ಹನ್ನೆರಡನೆಯ ಶತಮಾನದ ಶಿವಶರಣರು, ಅದರಲ್ಲೂ ಬಸವಣ್ಣನವರ ಶಿವಾನುಭವ ಮಂಟಪದಲ್ಲಿ ಬೆಳೆದ ಅಲ್ಲಮ, ಅಕ್ಕಮಹಾದೇವಿ, ಮುಪ್ಪಿನ ಷಡಕ್ಷರಿ, ಚೆನ್ನಬಸವಣ್ಣ, ಸಿದ್ದರಾಮ, ಅಂಬಿಗರ ಚೌಡಯ್ಯ, ಮುಂತಾದವರು, ಅಲ್ಲದೆ ನಿಜಗುಣ ಶಿವಯೋಗಿ, ತ್ರಿಪದಿUಳ ಮೂಲಕ ಸರ್ವಜ್ಞ , ವಚನ ವಾಙ್ಮಯವನ್ನು ವಿಫುಲಗೊಳಿಸಿದರು. ಆ ನಂತರ ಶ್ರೀಪಾದರಾಯರು, ವ್ಯಾಸರಾಜರು, ಪುರಂದರದಾಸ, ಕನಕದಾಸ, ಜಗನ್ನಾಥದಾಸರಿಂದ ಬೆಳೆದ ದಾಸ ಸಾಹಿತ್ಯವಂತೂ ಶಾಸ್ತಿçÃಯ ಸಂಗೀತಕ್ಕೆ ತಳಹದಿಯನ್ನು ಹಾಕಿಕೊಟ್ಟಿತು. ಎಂಟನೆಯ ಶತಮಾನದ ಜೈನ ಮುನಿ, ಕುಮುದೇಂದು, ಕನ್ನಡ ಅಂಕೆಗಳನ್ನು ಬಳಸಿ, ವಿಜ್ಞಾನದ ಚಕ್ರಬಂಧಗಳಲ್ಲಿ ರಚಿಸಿದ "ಸಿರಿ ಭೂವಲಯ‟ ಎಂಬ ಗ್ರಂಥ, ವಿಶ್ವದಲ್ಲಿಯೇ ಅತ್ಯಂತ ಅಪರೂಪದ ಅಂಕಾಕ್ಷರ ಗ್ರಂಥವಾಗಿದೆ!

ಇಪ್ಪತ್ತನೆಯ ಶತಮಾನದ ನವೋದಯ ಕಾಲದಲ್ಲಿ ಮುದ್ದಣ, ಬಿ.ಎಂ.ಶ್ರೀ, ದೇವುಡು, ಕೈಲಾಸಂ, ಅನಕೃ, ಕುವೆಂಪು, ಬೇಂದ್ರೆ, ಗೋವಿಂದ ಪೈ, ಡಿ.ವಿ.ಗುಂಡಪ್ಪ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ತರಾಸು, ಆಲೂರು ವೆಂಕಟರಾವ್, ವಿ.ಸೀತಾರಾಮಯ್ಯ, ವೆಂಕಟರಾಮಯ್ಯ, ಪು.ತಿ.ನ., ಕಟ್ಟೀಮನಿ, ಚೆನ್ನಪ್ಪ ಉತ್ತಂಗಿ, ರಾಜರತ್ನಂ, ರಾಶಿ, ಕಸ್ತೂರಿ, ಕೆ.ಎಸ್À.ನರಸಿಂಹಸ್ವಾಮಿ, ತ್ರಿವೇಣಿ, ಮುಳಿಯ, ಜಿ.ಎಸ್.ಶಿವರುದ್ರಪ್ಪ, ಗೋಕಾಕ್, ಕಂಬಾರ, ಹೀಗೆ ಅಸಂಖ್ಯ ಕವಿಗಳು, ಬರಹಗಾರರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ರೆವರೆಂಡ್ ಕಿಟ್ಟೆಲ್‌ರವರ ಕನ್ನಡ-ಇಂಗ್ಲಿಷ್ ನಿಘಂಟು ಶಬ್ದಕೋಶಗಳಿಗೆ ಮಾದರಿಯಾಯಿತು. ಇವುಗಳೊಂದಿಗೇ ಬೆಳೆದು ಬಂದಿರುವ ಜಾನಪದ ಸಾಹಿತ್ಯವಂತೂ ಇಡೀ ಕನ್ನಡ ಸಾಹಿತ್ಯನಿಧಿಗೆ ಗ್ರಾಮ್ಯ ಸೊಗಡನ್ನು ನೀಡಿದೆ! ಹೊಸಗನ್ನಡ ಕಾವ್ಯ, ಕಥಾಸಾಹಿತ್ಯ, ಶಿಶುಸಾಹಿತ್ಯ, ಕನ್ನಡ ನಾಟಕ, ಪ್ರವಾಸ, ಆಧ್ಯಾತ್ಮಿಕ ಸಾಹಿತ್ಯ, ಮಹಿಳಾ ಸಾಹಿತ್ಯ, ವೈಜ್ಞಾನಿಕ ಸಾಹಿತ್ಯ, ಪತ್ತೇದಾರಿ ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಲಲಿತ ಸಾಹಿತ್ಯ, ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕನ್ನಡದ ಸೃಜನಶೀಲ ಬರಹಗಳಿಂದÀ ನಮ್ಮ ಕನ್ನಡ ನುಡಿ ಭಂಡಾರ ಇಂದು ತುಂಬಿ ತುಳುಕುತ್ತಿದೆ. ಇವೆಲ್ಲವೂ ಸೇರಿ, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನೂ, ಎರಡು ಸರಸ್ವತಿ ಸಮ್ಮಾನಗಳನ್ನೂ ಮತ್ತು ಶಾಸ್ತಿçÃಯ ಭಾಷೆಯೆಂಬ ಹೆಗ್ಗಳಿಕೆಯನ್ನೂ ಗಳಿಸಿಕೊಟ್ಟಿವೆ!

ಕೊಡಗಿನ ಮಟ್ಟಿಗೆ ಹೇಳುವುದಾದರೆ, ನಾಡನ್ನಾಳಿದ ಲಿಂಗಾಯತ ಅರಸರು, ಕೊರವಂಡ ಅಪ್ಪಯ್ಯ, ನಡಿಕೇರಿಯಂಡ ಚಿನ್ನಪ್ಪ, ಹರದಾಸ ಅಪ್ಪಚ್ಚಕವಿ, ಕೊಡಗಿನ ಗೌರಮ್ಮ, ಭಾರತೀಸುತ, ಕಾಕೆಮಾನಿ, ಬಿ.ಡಿ.ಗಣಪತಿ, ಪಂಜೆ ಮಂಗೇಶರಾಯರು, ಡಿ.ಎನ್.ಕೃಷ್ಣಯ್ಯ, ಐ.ಮಾ.ಮುತ್ತಣ್ಣ, ಜಿ.ಟಿ.ನಾರಾಯಣರಾವ್, ಇನ್ನಿತರರು ಕೊಡಗಿನ ಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆ ಸಲ್ಲಿಸಿದ್ದಾರೆ.

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು

ಹೊಸ ಯುಕ್ತಿ ಹಳೆ ತತ್ತ÷್ವ ದೊಡಗೂಡೆ ಧರ್ಮ |

ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳಯಿಸೆ

ಜಸವು ಜೀವನಕೆ ಮಂಕುತಿಮ್ಮ ||

_ ಡಿ. ವಿ. ಗುಂಡಪ್ಪ

ಹದಿನೈದಿಪ್ಪತ್ತು ವರ್ಷಗಳ ಹಿಂದಿನವರೆಗೂ ಮುದ್ರಣಾಲಯದಲ್ಲಿ, ಅಲ್ಲಿಯ ಸಿಬ್ಬಂದಿಗಳು ಪ್ರತಿಯೊಂದು ಅಕ್ಷರದ ಮೊಳೆಯನ್ನೂ ಹೆಕ್ಕಿ ಹೆಕ್ಕಿ ಜೋಡಿಸಿ ಪುಟಗಳನ್ನು ಮುದ್ರಿಸಬೇಕಿತ್ತು. ಎರಡು-ಮೂರು ಬಾರಿ ತಪ್ಪೊಪ್ಪುಗಳ ತಪಾಸಣೆ, ಮರು ಹೊಂದಾಣಿಕೆ, ಇವುಗಳ ಜಂಜಾಟದಲ್ಲಿ ಸಾಕಷ್ಟು ಶ್ರಮ ಮತ್ತು ಸಮಯ ವ್ಯರ್ಥವಾಗುತ್ತಿತ್ತು. ಆ ಸಾಹಿತ್ಯ ರಚನೆಗಳಲ್ಲಿ ಅಲ್ಲಲ್ಲಿ ಮುದ್ರಾರಾಕ್ಷಸನ ಹಾವಳಿಯನ್ನು ನಾವು ಕಾಣಬಹುದಾಗಿತ್ತು. ಇವೆಲ್ಲ ಅಸೌಕರ್ಯಗಳ ನಡುವೆಯೂ ಸುಂದರವಾದ, ತಪ್ಪಿಲ್ಲದ ಲಕ್ಷಾಂತರ ಕನ್ನಡ ಪುಸ್ತಕÀಗಳು ಪ್ರಕಟಗೊಂಡಿವೆ.

ಇದು ಡಿಜಿಟಲ್ ಯುಗ! ಬರಹಗಾರರು ಮೆದುಳಿಗೆ ಹೊಳೆದದ್ದನ್ನು ನೇರವಾಗಿ ಕೀಲಿಮಣೆಯ ಸಹಾಯದಿಂದ ಬರೆಯಬಹುದು. ಲೇಖನಿ ಹಿಡಿದ ಕೈ ಇಂದು ಕೀಲಿಮಣೆಯೊಂದಿಗೆ ಆಡುತ್ತಿವೆ. ಇಂದು ಬರಹ, ನುಡಿ, ಆಕೃತಿ, ಕುವೆಂಪು ಮುಂತಾದ ತಂತ್ರಾAಶಗಳು ಲಭ್ಯವಿವೆ. ಈ ತಂತ್ರಾAಶಗಳನ್ನು ಬಳಸಿಕೊಂಡು, ಗಣಕ ಯಂತ್ರಗಳ ಸಹಾಯದಿಂದ ಸುಂದರವಾದÀ ಪುಟಗಳ ರಚನೆ, ವಿವಿಧ ಕನ್ನಡ ಅಕ್ಷರ ವಿನ್ಯಾಸ, ಪಂಕ್ತಿಗಳನ್ನು ಎಲ್ಲಿ ಬೇಕೆಂದರಲ್ಲಿ ಮರುಜೋಡಿಸುವ, ತಪ್ಪೊಪ್ಪುಗಳನ್ನು ಪರದೆಯ ಮೇಲೆಯೇ ನೋಡಿ, ಅಲ್ಲಿಗಲ್ಲಿಯೇ ಸರಿಪಡಿಸುವ ಸೌಕರ್ಯವಿದೆ. ಲೇಖಕನೇ ಇರಲಿ, ಕವಿಯೇ ಇರಲಿ, ತಾನು ಬರೆದ ಲೇಖನ, ಕವನ ಸಂಕಲನ, ಕಾದಂಬರಿ, ಮತ್ತಾವುದೇ ವಸ್ತುವನ್ನು ನೇರವಾಗಿ ಮುದ್ರಣಾಲಯಕ್ಕೆ ಕಳುಹಿಸುವ ಸೌಲಭ್ಯವಿದೆ.

ವಿದ್ಯುನ್ಮಾನ ಮಾಧ್ಯಮಗಳು ಬಂದ ಮೇಲಂತೂ ಕನ್ನಡ ಸಾಹಿತ್ಯ ರಚನೆಯು ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಉದಯೋನ್ಮುಖ ಕವಿಗಳು, ಬರಹಗಾರರು, ಮತ್ತು ಆರ್ಥಿಕ ಸಂಕಷ್ಟದಿAದ ಪುಸ್ತಕರೂಪದಲ್ಲಿ ತಮ್ಮ ಕೃತಿಯನ್ನು ಹೊರತರಲಾಗದವರು, ಇ-ಮೇಯ್ಲ್, ಬ್ಲಾಗ್, ಫೇಸ್ ಬುಕ್, ವಾಟ್ಸ್ ಆಪ್, ಇನ್ಸಾ÷್ಟಗ್ರಾಮ್ ಮುಂತಾದ ಮಾಧ್ಯಮಗಳ ಮೂಲಕ ಪ್ರಕಟಿಸಿ, ಸಾಹಿತ್ಯಕೃಷಿಯನ್ನು ಮಾಡುತ್ತಿದ್ದಾರೆ.

ಇಂದು ಅಂಗೈಯಲ್ಲಿಯೇ ಅರಮನೆಯನ್ನು ತೋರುವ ಸ್ಮರ‍್ಟ್ ಫೋನ್ ಎಂಬ ಅದ್ಭುತ ಯಂತ್ರದಲ್ಲಿ ಉತ್ತಮ ನಿಘಂಟುಗಳನ್ನಿರಿಸಿಕೊAಡು, ಕನ್ನಡದ ಕ್ಲಿಷ್ಟ ಪದಗಳಿಗೆ ಅರ್ಥವನ್ನೂ, ರ‍್ಯಾಯ ಪದಗಳನ್ನೂ ಸುಲಭದಲ್ಲಿ ಹುಡುಕಬಹುದಾಗಿದೆ. ಹೀಗೆ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಅಂತರ್ಜಾಲ ಮಾಧ್ಯಮಗಳೂ ಉತ್ತಮ ಪ್ರಯತ್ನವನ್ನು ಮಾಡುತ್ತಿವೆ. ಅಲ್ಲದೆ ಹಲವಾರು ಕನ್ನಡದ ಕೃತಿಗಳನ್ನು ಅಂತರ್ಜಾಲದ ಮೂಲಕ ವರ್ಗಾಯಿಸಿಕೊಂಡು ಅಧ್ಯಯನ ಮಾಡುವ ಸೌರ‍್ಯವೂ ಲಭ್ಯವಿದೆ. ಕನ್ನಡಿಗರಿಗೆ ಕನ್ನಡ ಸಾಹಿತ್ಯಾಸ್ವಾದನೆಗೆ ಇಷ್ಟೆಲ್ಲ ವ್ಯವಸ್ಥೆಗಳಿದ್ದರೂ ಕರ್ನಾಟಕದಲ್ಲಿ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ಕಂಡುಬರುತ್ತಿಲ್ಲ ಎಂಬುದೇ ವಿಷಾದಕರ ಸಂಗತಿ. ಕನ್ನಡ ಸಾರಸ್ವತ ಜಗತ್ತನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು, ಅದು ಸತತವಾಗಿ ಶ್ರೀಮಂತಗೊಳ್ಳುತ್ತಿರಬೇಕು ಎನ್ನುವುದು ಎಲ್ಲ ಕನ್ನಡಾಭಿಮಾನಿಗಳ ಕನಸಾಗಬೇಕು. ಕನ್ನಡ ಸಾಂಸ್ಕೃತಿಕ ಹಬ್ಬವೇ ಆಗಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಈ ದಿನ, ಈ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸುವುದು ಅತ್ಯಂತ ಉಚಿತವಾಗಿದೆ.

ನಾವಿಂದು ಹಲವಾರು ಕನ್ನಡದ ತಂತ್ರಾAಶಗಳು ಉಚಿತವಾಗಿಯೇ ಪಡೆಯಬಹುದಾಗಿದೆ. ಜಸ್ಟ್ಕನ್ನಡ, ಇಂಡಿಕ್, ನುಡಿ, ಬರಹ, ಮತ್ತು ಹತ್ತಾರು ಕನ್ನಡ ಕೀಲಿಮಣೆ ತಂತ್ರಾAಶಗಳು ಲಭ್ಯವಿವೆ. ಆದ್ದರಿಂದ ಈವತ್ತು “ನಡೆ ಕನ್ನಡ, ನುಡಿ ಕನ್ನಡ ಮಾತ್ರವಷ್ಟೇ ಅಲ್ಲ, ಬೆರಳ್ ಕನ್ನಡ”ವೂ ಆಗಬೇಕಾಗಿದೆ! ಕನ್ನಡಿಗರಿಗೆ ಕನ್ನಡವೇ ಸಹಜ. ಕನ್ನಡವು ಇಂಗ್ಲೀಷ್ ಭಾಷೆಯ ವ್ಯಾಪಕತೆಯನ್ನು ಸಂಪಾದಿಸುವವರೆಗೆ ಸಂಸ್ಕೃತಿ ವರ್ಧನೆಗಾಗಿ ಇಂಗ್ಲಿಷ್ ವ್ಯಾಮೋಹ ತಪ್ಪಿದ್ದಲ್ಲ. ಕನ್ನಡಕ್ಕೆ ಈ ಕೀರ್ತಿಯನ್ನು ತರಬೇಕಾದರೆ, ಕನ್ನಡಿಗರೇ ಕಂಕಣಬದ್ಧರಾಗಬೇಕು. _ ವಿ. ಕೃ. ಗೋಕಾಕ್

ಭಾರತದ ಎಲ್ಲಾ ಭಾಷೆಗಳ ಅಕ್ಷರಮಾಲೆಗಳಿಗೂ ಸಂಸ್ಕೃತವೇ ಆಧಾರ. ಈ ಭಾಷೆಗಳನ್ನು ನಾವು ಹೇಗೆ ಉಚ್ಛರಿಸುತ್ತೇವೆಯೋ, ಅದನ್ನು ಹಾಗೆಯೇ ಬರೆಯುತ್ತೇವೆ. ಆದರೆ, ಕನ್ನಡ ಭಾಷೆಗೆ ಮತ್ತೂ ಹೆಚ್ಚಿನ ಮಹತ್ವವಿದೆ. ಕನ್ನಡ ಭಾಷೆ ಸಂಸ್ಕೃತವನ್ನೂ ಮೀರಿದೆ ಎಂದರೂ ತಪ್ಪಾಗಲಾರದು! ಸಂಸ್ಕೃತದÀಲ್ಲಿಲ್ಲದ ಎ-ಏ, ಒ-ಓ, ಲ-ಳ ಹಾಗೂ ಹಳೆಗನ್ನಡದ ¾ ಮತ್ತು ¿ ಅಕ್ಷರಗಳು ಕನ್ನಡದ್ದೇ! ಇದರೊಂದಿಗೆ ನಾಲ್ಕಾರು ಅರ್ಧಾಕ್ಷರಗಳನ್ನು ಹೊಂದಿಸಿಕೊAಡುಬಿಟ್ಟರೆ, ಮಾನವನ ಕೊರಳಿನಿಂದ ಹೊರಡುವ ಎಲ್ಲ ಧ್ವನಿಗಳನ್ನೂ ಕನ್ನಡದಲ್ಲಿ ಅಕ್ಷರರೂಪದಲ್ಲಿ ಬರೆಯಬಹುದು! ಹಾಗಾಗಿ ಕನ್ನಡದ ಧ್ವನಿಭಂಡಾರವನ್ನು ಬಳಸಿಕೊಂಡು ಪ್ರಪಂಚದ ಎಲ್ಲಾ ಭಾಷೆಗಳನ್ನೂ ಅಕ್ಷರಗಳಲ್ಲಿ ಬರೆಯುವ ಸಾಮರ್ಥ್ಯ ಕನ್ನಡಕ್ಕಿದೆ!

"ಇಂದು ಪ್ರಪಂಚದಲ್ಲಿ ಪ್ರಚಲಿತವಿರುವ ಭಾಷೆಗಳಲ್ಲೆಲ್ಲ ಅತ್ಯಂತ ವೈಜ್ಞಾನಿಕ ತಳಹದಿಯ ಮೇಲೆ ರಚನೆಯಾದ, ಗಣಕ ತಾಂತ್ರಿಕತೆಗೆ ಅತ್ಯಂತ ಸರಳವೂ, ಪೂರಕವೂ ಆದ ಮತ್ತು ಎಲ್ಲಕ್ಕಿಂತಲೂ ಅತಿಶಯವಾಗಿ, ಪರಿಪೂರ್ಣವಾದ ಭಾಷೆ ನಮ್ಮ ಕನ್ನಡ!"

ಗಣಕಯಂತ್ರದ ಈ ಕಾಲಘಟ್ಟದಲ್ಲಿ ಸದ್ದಿಲ್ಲದೆ ಮತ್ತೊಂದು ಬೆಳವಣಿಗೆಯಾಗಿದೆ. ಕಂಪ್ಯೂಟರ್ ವಿಜ್ಞಾನಿಗಳು ಈಗ ಒಂದು ಹೊಸ ತಂತ್ರಾAಶವನ್ನು ಸಿದ್ಧಪಡಿಸಿದ್ದಾರೆ. ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಈ ತಂತ್ರಾAಶವನ್ನು ಅಳವಡಿಸಿಕೊಂಡು ಬಿಟ್ಟರೆ, ನೀವು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದೆಲ್ಲವನ್ನೂ ಕನ್ನಡದಲ್ಲಿ ಬರೆಯುತ್ತದೆ! ಇದಕ್ಕೆ ಖಿಡಿಚಿಟಿs Phoಟಿeಣiಛಿ ಐiಣeಡಿಚಿಣioಟಿ ಅಥವಾ ಸ್ಪೀಚ್ ಟು ಟೆಕ್ಸ್÷್ಟ ಅಂದರೆ, ಽಧ್ವನಿಯಿಂದ ಪಠ್ಯ‟ ತಂತ್ರಜ್ಞಾನ ಎನ್ನುತ್ತಾರೆ. ಕನ್ನಡಕ್ಕಿರುವ ಈ ಅನರ್ಘ್ಯ ಸಾಮರ್ಥ್ಯವನ್ನು ಮನಗಂಡು ೯೦ರ ದಶಕದಲ್ಲಿಯೇ ಇದಕ್ಕೊಂದು ಂಟgoಡಿiಣhm ಅಂದರೆ, ಽಶಿಷ್ಟಾಚಾರದ ನೀತಿಸಂಹಿತೆ‟ಯನ್ನು ಬರೆದು ಹಲವು ಕಂಪ್ಯೂಟರ್ ವಿಜ್ಞಾನಿಗಳಿಗೆ ಕಳುಹಿಸಿದ್ದೆ. ಅದು ಇಂದು ಫಲ ನೀಡಿದೆ. ಇಷ್ಟಾಗಿಯೂ ಇಂದಿನ ದಿನಪತ್ರಿಕೆಗಳು, ನಿಯತಕಾಲಿಕಗಳು, ಕಥೆ-ಕಾದಂಬರಿಗಳು ವ್ಯಾಕರಣ, ಕಾಗುಣಿತ, ಚಿಹ್ನೆ, ಅಕ್ಷರವಿನ್ಯಾಸ, ಏಕರೂಪದ ಪಠ್ಯ, ಮೊದಲಾದುವುಗಳಿಂದ ದೂರವಾಗಿವೆ. ಕನ್ನಡ ಬರಹಗಾರರು, ಕನ್ನಡ ಕೀಲಿಮಣೆ ಬಳಸುವ ಸಿಬ್ಬಂದಿಗಳು, ಮುದ್ರಣಾಲಯದ ನೌಕರವರ್ಗದವರು, ಮುಂತಾದವರಿಗೆ ಕನ್ನಡದ ಬಗ್ಗೆ ಅವಜ್ಞೆ, ತಾತ್ಸಾರ-ಉಪೇಕ್ಷೆಯೇ ಇದಕ್ಕೆ ಕಾರಣ. ಕನ್ನಡ ತಂತ್ರಜ್ಞಾನದಲ್ಲಿ ಇಷ್ಟೆಲ್ಲ ಅನುಕೂಲತೆಗಳಿದ್ದೂ ಮುದ್ರಣಗಳಲ್ಲಿ ತಪ್ಪುಗಳು ಕಾಣಿಸಿಕೊಂಡರೆ, ಅದು ಅಕ್ಷಮ್ಯ ಎಂದೇ ನಾವು ಭಾವಿಸಬೇಕು.

ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ

ಸತಿಯೇ ಸರ್ವಕೆ ಸಾಧನಂ ವರ್ಣಮಾತ್ರಂ ಕಲಿಸಿದಾತಂ ಗುರು|

ಶೃತಿಮಾರ್ಗಂ ಬಿಡದಾತ ಸುವೃತಿ ಮಹಾಸದ್ವಿದ್ಯೆಯೇ ಪುಣ್ಯದಂ

ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ||

- ಸೋಮೇಶ್ವರ ಶತಕ

ಇಂದು ಇಡೀ ಕರ್ನಾಟಕದಲ್ಲಿ ಒಂದು ರೀತಿಯ ಬೇಸರದ ಪರಿಸ್ಥಿತಿ ಕಂಡುಬರುತ್ತಿದೆ. ಎಲ್ಲೆಡೆ ಇಂಗ್ಲೀಷ್ ವ್ಯಾಮೋಹವನ್ನು ನೋಡುತ್ತಿದ್ದೇವೆ. ಹೆತ್ತವರಿಗೆ, ಪೋಷಕರಿಗೆ ತಮ್ಮ ಮಕ್ಕಳು ಕನ್ನಡದ ಽಅ‟ ಕಲಿಯುವುದಕ್ಕೆ ಮುಂಚೆ ಇಂಗ್ಲೀಷಿನ ಽಎ‟ ಕಲಿಯುವುದೇ ದೊಡ್ಡಸ್ತಿಕೆಯ ವಿಷÀಯವಾಗಿದೆ! ಸಾರ್ವಜನಿಕ ವ್ಯವಹಾರಗಳಲ್ಲಿ, ಆಂಗ್ಲ ಭಾಷೆೆಯಲ್ಲಿ ಮಾತನಾಡುವುದು ಪ್ರತಿಷ್ಠೆಯ ಸಂಕೇತವಾಗಿದೆ. ಇಷ್ಟೇ ಅಲ್ಲದೆ, ಕನ್ನಡಿಗರು ಇತರ ಭಾಷಿಗರೊಂದಿಗೆ ಕನ್ನಡವನ್ನು ಬಿಟ್ಟು, ಅವರದ್ದೇ ಭಾಷೆಯಲ್ಲಿ ಮಾತನಾಡುವುದು ಹೆಚ್ಚುಗಾರಿಕೆಯೆಂದು ಭಾವಿಸುತ್ತಾರೆ. ಇದಕ್ಕಿಂತ ನಾಚಿಕೆಗೇಡಿನ, ಹುಂಬತನದ ವಿಷಯ ಮತ್ತೊಂದಿಲ್ಲ. ಇವೆÀಲ್ಲವೂ ನಮ್ಮ ಭಾಷೆಯ ಬಗ್ಗೆ ನಮಗಿರುವ ಅವಿಶ್ವಾಸ, ಉದಾಸೀನವೇ ಕಾರಣ.

ಕೊಡಗು ಹೇಗೆ ಒಂದು ಗಡಿ ಪ್ರದೇಶದ ಜಿಲ್ಲೆಯೋ, ಹಾಗೆಯೇ ಕೇರಳ, ತಮಿಳುನಾಡು, ಮಹಾರಾಷ್ಟç ಮುಂತಾದ ಕರ್ನಾಟಕ ರಾಜ್ಯದ ಗಡಿಗಳಲ್ಲಿ ಆಯಾ ರಾಜ್ಯಗಳ ಜಿಲ್ಲೆಗಳಿಲ್ಲವೆ? ಆ ಸ್ಥಳಗಳಲ್ಲಿ ಕನ್ನಡ ಮಾತನಾಡುವ ಜನ ಎಷ್ಟಿದ್ದಾರೆ? ಅವರಿಗಿರುವ ಭಾಷಾಭಿಮಾನ, ನುಡಿಯೊಲವು-ಅಕ್ಕರೆ ನಮಗೇಕಿಲ್ಲ? ಕನ್ನಡಿಗರು, ನಾವು, ಕನ್ನಡಕ್ಕಾಗಿ ಡಿಂಡಿಮ ಬಾರಿಸುತ್ತೇವೆ ಅವರು ಬೊಂಬಡ ಬಾರಿಸುತ್ತಾರೆ! ಅವರ ಕಾರ್ಯ ಸಾಧನೆಯಾಗುತ್ತದೆ.

ಮತ್ತೊಂದು ಗಹನವಾದ ಸಮಸ್ಯೆಯನ್ನು ನಾವು ಗಮನಿಸಬೇಕು. ಕೊಡಗಿನ ಪ್ರಸ್ತುತ ಕನ್ನಡದ ಪರಿಸ್ಥಿತಿಯನ್ನು ಗಮನಿಸೋಣ. ಸರ್ಕಾರದ ನಿಯಮದಂತೆ ಒಂಬತ್ತನೆಯ ತರಗತಿಯವರೆಗೆ ಯಾರೂ ಫೇಲಾಗುವಂತೆಯೇ ಇಲ್ಲ! ಸರ್ಕಾರಿ ಶಾಲೆಗಳನ್ನು ಹೊರತುಪಡಿಸಿದರೆ, ಎಲ್ಲೆಲ್ಲಿಯೂ ನಮಗೆ ಆಂಗ್ಲ ಮಾಧ್ಯಮ ಶಾಲೆಗಳೇ ಕಂಡು ಬರುತ್ತಿವೆ. ಈ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕನ್ನಡ ಒಂದು ಪಠ್ಯವಷ್ಟೆ. ಒಂದು ಬಾರಿ ಹತ್ತನೆ ತರಗತಿಯನ್ನು ದಾಟಿಬಿಟ್ಟರೆ ಅವರಿಂದ ಕನ್ನಡವೂ ದೂರವಾಗಿ ಬಿಡುತ್ತದೆ. ಈ ವಿದ್ಯಾರ್ಥಿಗಳು ಕನ್ನಡವನ್ನು ಓದಲೂ ಬರೆಯಲೂ ಮರೆತೇ ಬಿಡುತ್ತಾರೆ. ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದು, ಕಾವೇರಿಯ ನೀರನ್ನು ಕುಡಿದವರಾಗಿ, ಕನ್ನಡದವರಾಗಿ, ಕನಿಷ್ಠ ಕನ್ನಡವನ್ನು ಮಾತನಾಡಲೂ ಹಿಂಜರಿಯುವ ಇವರಿಗೆ ಕನ್ನಡದ ಬಗ್ಗೆ ಕೀಳರಿಮೆ ಏಕೆಂದು ನಾವು ಆಲೋಚಿಸಬೇಕು. ದಕ್ಷಿಣ ಕೊಡಗಿನಲ್ಲಿ ಮತ್ತೊಂದು ವಿಚಿತ್ರವಾದ-ವಿಶಿಷ್ಟವಾದ ಸನ್ನಿವೇಶವನ್ನು ಕಾಣುತ್ತೇವೆ. ಇಲ್ಲಿ ಮಲೆಯಾಳವನ್ನು ಮಾತನಾಡುವ ಜನ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಕನ್ನಡ ಮಾಧ್ಯಮದ ಶಾಲೆಗಳಲ್ಲಿಯೇ ಓದಿದರೂ, ಈ ಮಕ್ಕಳು ಮನೆಯಲ್ಲಿ, ಓರಗೆಯ ಮಿತ್ರರೊಂದಿಗೆ, ಸಹಪಾಠಿಗಳೊಂದಿಗೆ, ಮಲೆಯಾಳ ಭಾಷೆÉಯಲ್ಲಿಯೇ ಮಾತನಾಡುವುದರಿಂದ ಇವರಿಗೆಲ್ಲ ಸಹಜವಾಗಿಯೇ ಕನ್ನಡ ಭಾಷೆ, ತರಗತಿಗೆ ಮಾತ್ರ ಸೀಮಿತವಾಗಿರುತ್ತದೆ. ಹತ್ತನೆಯ ತರಗತಿ ದಾಟಿದರೆಂದರೆ, ಯಥಾಪ್ರಕಾರ ಇವರೆಲ್ಲ ಕನ್ನಡದಿಂದ ದೂರವಾಗುತ್ತಾರೆ. ಅದಕ್ಕಿಂತ ದುರಂತವೇನೆAದರೆ, ಜೀವನ ಪರ್ಯಂತ ಮಲೆಯಾಳ ಮಾತನಾಡುವ ಇವರು ಒಂದಕ್ಷರ ಮಲೆಯಾಳವನ್ನೂ ಓದಲು-ಬರೆಯಲು ಕಲಿತಿರುವುದಿಲ್ಲವಾದ ಕಾರಣ, ಒಂದು ರೀತಿಯಲ್ಲಿ ಅನಕ್ಷರಸ್ಥರಾಗಿಯೇ ಉಳಿದುಬಿಡುತ್ತಾರೆ! ಈ ನಿಟ್ಟಿನಲ್ಲಿ ನಾನು ಒಂದು ವಿಚಾರವನ್ನು ಒತ್ತಿ ಹೇಳಬೇಕಾಗಿದೆ. ವರ್ಣಮಾತ್ರಂ ಕಲಿಸಿದಾತಂ ಗುರು ಎಂಬ ಮಾತಿನಂತೆ, ಸಣ್ಣ ವಯಸ್ಸಿನಿಂದಲೇ ವಿದ್ಯಾರ್ಥಿಗಳಲ್ಲಿ ಕನ್ನಡದ ಬಗೆಗೆ ಪ್ರೀತಿ, ಅಭಿಮಾನ, ಅಭಿರುಚಿಗಳನ್ನು ಮೂಡಿಸುವಲ್ಲಿ ಪ್ರಾಥಮಿಕ ಶಿಕ್ಷಕರ ಜವಾಬ್ದಾರಿ ಬಹಳ ಗುರುತರವಾದದ್ದು. ಕನ್ನಡ ನಾಡು, ಭಾಷೆ, ಪರಂಪರೆ, ಹಿರಿಮೆ ಮುಂತಾದುವುಗಳನ್ನು ಹೇಳಿಕೊಡಲು ಆ ಶಿಕ್ಷಕರಿಗೆ ಇದರ ಸಲುವಾಗಿ, ವಿಶೇಷವಾದ ತರಬೇತಿಯೂ ಬೇಕಾಗಬಹುದು. ಮಕ್ಕಳ ಮೆದುಳಿನಲ್ಲಿ ಆ ಹಂತದಲ್ಲಿ ಕನ್ನಡ ಭದ್ರವಾಗಿ ನೆಲೆ ನಿಂತರೆ, ಅವರು ಕನ್ನಡವನ್ನು ಎಂದಿಗೂ ಮರೆಯುವುದಿಲ್ಲ. ಹಿಂದೆ ಪ್ರತಿಯೊಂದು ನಗರದಲ್ಲಿಯೂ ಕನ್ನಡ- ಕರ್ನಾಟಕ ಸಂಘಗಳಿದ್ದವು. ಯಾವುದೇ ಕನ್ನಡಪರ ಕಾರ್ಯಕ್ರಮವಾಗಲಿ, ಹೋರಾಟವಾಗಲಿ, ಚಳವಳಿಯಾಗಲಿ, ಕನ್ನಡದ ಕಟ್ಟಾಳುಗಳು ಮುಂದೆ ನಿಂತು ಕೈ ಜೋಡಿಸುತ್ತಿದ್ದರು. ಅಂತಹ ಕರ್ನಾಟಕ ಸಂಘಗಳು ಈವತ್ತು ಎಲ್ಲಿವೆ? ವಿರಾಜಪೇಟೆಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಡಿ.ಜೆ.ಪದ್ಮನಾಭ, ಡಾ. ಆಸ್ರಣ್ಣ, ಟೈಲರ್ ದಾಸ್, ಯತಿರಾಜು, ಮುಕುಂದ ಸಿಂಗ್, ಅರಮೇರಿ ಕಳಂಚೇರಿ ಮಠ, ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀ ಕೇಶವ ಭಟ್ ಇವರೆಲ್ಲರನ್ನೂ ಇಂದು ನಾವು ನೆನೆಸಿಕೊಳ್ಳಬೇಕು. ಕನ್ನಡ ಸಾಹಿತ್ಯವನ್ನು ಬೆಳೆಸಲು ಕನ್ನಡಿಗರೆಲ್ಲ ಮೊದಲು ಕನ್ನಡವನ್ನು ಮನಸಾರೆ ಪ್ರೀತಿಸಬೇಕು. ಕನ್ನಡ ಪುಸ್ತಕಗಳನ್ನು ಕೊಂಡು ಓದಬೇಕು. ಊರಿಗೊಂದಾದರೂ ಕನ್ನಡ ವಾಚನಾಲಯ ಹಾಗೂ ಕನ್ನಡ ಪುಸ್ತಕಗಳನ್ನು ಮಾರುವ ಅಂಗಡಿಯಿರಬೇಕು. ಕನ್ನಡ ಸಮ್ಮೇಳನಗಳಲ್ಲಿ ಅತ್ಯಂತ ಹೆಚ್ಚು ಪುಸ್ತಕ ವ್ಯಾಪಾರದ ಮಳಿಗೆಗಳ ವ್ಯವಸ್ಥೆಯಾಗಬೇಕು. ಪುಸ್ತಕ ಮಾರಾಟವೆಂಬುದು ಎಲ್ಲೆಡೆ ಒಂದು ವ್ಯಾಪಕ ಚಳವಳಿಯೇ ಆಗಬೇಕು! ಈ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಪ್ರಾಧಿಕಾರ, ವಿವಿಧ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು, ಪ್ರಕಾಶಕರು ಮುಂದಾಳತ್ವ ವಹಿಸಿ, ಮಾರ್ಗದರ್ಶಕರಾಗಬೇಕು. ಹಬ್ಬಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ, ಹುಟ್ಟುಹಬ್ಬದ ಆಚರಣೆಗಳ ಸಂದರ್ಭಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ, ಹಾಗೂ ಶಾಲಾಕಾಲೇಜುಗಳ ಸ್ಪರ್ಧೆಗಳಲ್ಲಿ ಪುಸ್ತಕಗಳನ್ನು ಬಹುಮಾನಗಳ ರೂಪದಲ್ಲಿ, ಕೊಡುವ ಸಂಪ್ರದಾಯ ಬೆಳೆಯಬೇಕು. ಕನ್ನಡದಲ್ಲಿಯೇ ಬರೆಯೋಣ; ಕನ್ನಡ ಬಾರದಿರುವವರಿಗೆ ಕನ್ನಡ ಕಲಿಸೋಣ; ವ್ಯಾಪಾರಿಗಳೊಂದಿಗೆ, ಕೆಲಸದವರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸೋಣ. “ಜಮ್ಮ ಕೊಡಗಿದು ನಮ್ಮದು” ಎಂಬ ಕವಿಯ ನುಡಿಯಂತೆ, ದಕ್ಷಿಣ ಕೊಡಗಿನ ನೆಲದ ಮೇಲೆ ನಡೆಯುತ್ತಿರುವ ೯ನೇ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕೊಡಗು ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಕೇಶವ ಕಾಮತ್‌ರವರಿಗೆ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ಶ್ರೀ ಡಿ.ಪಿ.ರಾಜೇಶ್Àರವರಿಗೆ, ಕಾರ್ಯದರ್ಶಿಗಳಾದ ಟೋಮಿ ಥಾಮಸ್ ಮತ್ತು ಶ್ರೀಮತಿ ಸಾವಿತ್ರಿ ಮತ್ತು ಇತರ ಎಲ್ಲ ಪದಾಧಿಕಾರಿಗಳಿಗೂ, ಪರಿಷತ್ತಿನ ಸರ್ವ ಸದಸ್ಯರಿಗೂ, ಕೊಡಗಿನ ಮಹಾಜನತೆಗೂ, ಇಲ್ಲಿ ನೆರೆದಿರುವ ಸಮಸ್ತ ಸಭಾಸದರಿಗೂ, ನಾಡಿನ ಎಲ್ಲೆಡೆಯಿಂದ ಬಂದಿರುವ ಬಂಧುಮಿತ್ರರಿಗೂ, ಎದೆತುಂಬಿ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಕೊನೆಯಲ್ಲಿ ಡಿ.ವಿ.ಜಿ.ಯವರ ಅಮರವಾಣಿಗೆ ದನಿಗೂಡಿಸುತ್ತ ಮಂಗಳ ಹಾಡುತ್ತೇನೆ.

ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜಸೌರಭವ ಸೂಸಿ ನಲವಿಂ ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ || ವನಸುಮದೊಲೆನ್ನ ಜೀ ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ || ಸಿರಿಗನ್ನಡಂ ಗೆಲ್ಗೆ!! ಜೈ ಭುವನೇಶ್ವರಿ!!

                                                                                                 _ ಡಾ| ಎಸ್. ವಿ. ನರಸಿಂಹನ್ ವಿರಾಜಪೇಟೆ, ದ. ಕೊಡಗು. ೯೪೮೦೭೩೦೮೮೪

No comments: