ಅಂಟಾರ್ಟಿಕಾದಲ್ಲಿ ಆಕಾಶ ವೀಕ್ಷಣೆ
ಈ ಲೇಖನದಲ್ಲಿ ನಾನು ಅಂಟಾರ್ಟಿಕಾದ ವಿವಿಧ ಸ್ಥಳಗಳಲ್ಲಿ ರಾತ್ರಿ ವೇಳೆ ನಾನು ಮಾಡಿದ ಆಕಾಶ ವೀಕ್ಷಣೆಯ ಅನುಭವಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.
ಭಾರತ ದೇಶವನ್ನು ಬಿಟ್ಟು ಬೇರೆ ಯಾವುದೇ ರಾಷ್ಟçವನ್ನೂ ನಾನು ಕಂಡವನಲ್ಲ. ಹಾಗೆಂದ ಮಾತ್ರಕ್ಕೆ ನನಗೆ ಹೊರ ದೇಶಗಳನ್ನು ನೋಡುವ ಆಸೆ ಇರಲಿಲ್ಲವೆಂದಲ್ಲ. ಮದುವೆಯಾದ ಹೊಸತರಲ್ಲಿ ಒಂದು ಬಾರಿ ಪುಷ್ಪಾಳೊಡನೆ ಸಿಂಗಾಪುರಕ್ಕೆ ಹೋದದ್ದುಂಟು. ಅದು ಬಿಟ್ಟರೆ, ನನ್ನ ಪಾಸ್‌ಪೋರ್ಟ್ ಪುಟಗಳು ಖಾಲಿ ಖಾಲಿ!
ಹೀಗಿರುವಾಗ ೨೦೧೭ರ ಜುಲೈ ತಿಂಗಳಲ್ಲಿ ಗೋಣಿಕೊಪ್ಪಲಿನಲ್ಲಿ, ನನ್ನಂತೆ ವೈದ್ಯವೃತ್ತಿಯನ್ನು ಮಾಡುತ್ತಿರುವ ನನ್ನ ಮಿತ್ರ ಡಾ| ಕಿರಣ್ ‘ಅಂಟಾರ್ಟಿಕಾಗೆ ಕ್ರೂಸ್‌ನಲ್ಲಿ ಹೋಗುವ ಒಂದು ಅವಕಾಶ ಒದಗಿ ಬಂದಿದೆ, ನನಗೊಬ್ಬ ಜೊತೆಗಾರ ಬೇಕು, ಬರುತ್ತೀಯಾ’ ಎಂದು ಕೇಳಿದ. ತಕ್ಷಣ ಒಪ್ಪಿಬಿಟ್ಟೆ. ಆ ನಂತರದಲ್ಲಿ ಹೊಸ ಪಾಸ್‌ಪೋರ್ಟ್, ವಿಸಾ, ಮುಂತಾದ ತಯಾರಿಗಳು ನಡೆದವು. ಜನವರಿ ೧೯ರಂದು ಇಲ್ಲಿಂದ ಹೊರಟು, ಅರ್ಜೆಂಟೈನಾದ ಬ್ಯೂನಸ್ ಆಯ್ರಿಸ್‌ನಿಂದ ಹಡಗನ್ನು ಹತ್ತಿ ೧೫ ದಿನಗಳ ಕ್ರೂಸ್‌ನಲ್ಲಿ ಐದು ದೇಶಗಳನ್ನು ಮತ್ತು ಒಂದು ಖಂಡವನ್ನೂ ನೋಡಿ ಬಂದೆವು.
ಸಾಧಾರಣವಾಗಿ ಪ್ರಪಂಚದ ಹೆಚ್ಚು ಜನ ಭೂಮಧ್ಯ ರೇಖೆಯ ಉತ್ತರ ಭಾಗದಲ್ಲಿರುವ ದೇಶಗಳಿಗೆ ಅಂದರೆ, ಯೂರೋಪ್, ಅಮೆರಿಕಾ, ರಷ್ಯಾ, ಜಪಾನ್, ಚೈನಾ, ಇಂಡೊನೇಶಿಯಾ ಮತ್ತು ನಮ್ಮ ಸುತ್ತ ಮುತ್ತಲೂ ಇರುವ ನೇಪಾಳ, ಭೂತಾನ್, ಶ್ರೀಲಂಕಾ ಮುಂತಾದ ದೇಶಗಳಿಗೆ, ಪ್ರವಾಸ ಮಾಡುತ್ತಾರೆ. ಭೂಮಧ್ಯ ರೇಖೆಯ ದಕ್ಷಿಣ ಭಾಗದಲ್ಲಿರುವ ಆಫಿû್ರಕಾದ ದಕ್ಷಿಣ ದೇಶಗಳು, ದ. ಅಮೆರಿಕಾ, ಆಸ್ಟೆçÃಲಿಯಾ, ನ್ಯೂಜಿûಲ್ಯಾಂಡ್ ಮೊದಲಾದ ದೇಶಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವುದಿಲ್ಲ!
ಭೂಮಧ್ಯ ರೇಖೆಯ ದಕ್ಷಿಣದ ದೇಶಗಳಿಗೆ ನನ್ನದು ಇದೇ ಮೊದಲ ಬಾರಿಗೆ ಪ್ರಯಾಣ! ಹಾಗಾಗಿ ನನ್ನ ನಿರೀಕ್ಷೆಗಳೂ ಬಹಳ ಇದ್ದವು. ಅಲ್ಲಿಯ ಪರಿಸರ, ಜೀವವೈವಿಧ್ಯತೆ, ವಾತಾವರಣ, ವಿವಿಧ ಜನಗಳ ಭಾಷೆ, ಆಚಾರ-ವಿಚಾರಗಳು ಮತ್ತು ಎಲ್ಲಕ್ಕಿಂತ ನನಗೆ ಪ್ರಿಯವಾದ ಇರುಳಿನ ಆಕಾಶ.
ಬ್ಯೂನಸ್ ಆಯ್ರಿಸ್‌ನಿಂದ ಹೊರಟ ನಮ್ಮ ‘ಸೆಲೆಬ್ರಿಟಿ ಇನ್ಫಿನಿಟಿ’ ಹಡಗು ಅರ್ಜೆಂಟೈನಾ, ಉರುವಾಯ್ ಮತ್ತು ಚಿಲಿ ಮಾರ್ಗವಾಗಿ ಜಗತ್ತಿನ ಅತ್ಯಂತ ದಕ್ಷಿಣದ ಪಟ್ಟಣವೆಂದೇ ಹೆಸರಾದ, ಉಶುವಯ್ಯಾ ಎಂಬ ಸ್ಥಳಕ್ಕೆ ತಲುಪಿತು. ಈ ಪಟ್ಟಣದಿಂದಲೇ ಅಂಟಾರ್ಟಿಕಾ ಖಂಡಕ್ಕೆ ಅತಿ ಹತ್ತಿರದ ಮಾರ್ಗ, ಅಂದರೆ ಹಡಗಿನಲ್ಲಿ ೩೦ ಗಂಟೆಗಳ ಪ್ರಯಾಣ.
ಅಂಟಾರ್ಟಿಕಾದಲ್ಲಿ ನಾವು ಕಳೆದದ್ದು ನಾಲ್ಕು ದಿನಗಳು. ಈ ಅವಧಿಯಲ್ಲಿ ನಾವು ಹಗಲು ಹೊತ್ತಿನಲ್ಲಿ ಪ್ಯಾರಡೈಸ್ ಬೇ, ಬ್ರಾಬ್ಯಾಂಟ್ ದ್ವೀಪ, ಡಿಸೆಪ್ಶನ್ ದ್ವೀಪ ಮತ್ತು ಎಲೆ¥s಼ೆಂಟ್ ದ್ವೀಪ ಎಂಬ ನಾಲ್ಕು ಸ್ಥಳಗಳಲ್ಲಿ ಹಡಗಿನಿಂದ ಇಳಿದು ಸುತ್ತಿ ನೋಡಿದೆವು.
ನಮಗೆ, ಅಂದರೆ, ಭೂಮಿಯ ಉತ್ತರ ಗೋಳಾರ್ಧದಲ್ಲಿ ವರ್ಷದ ಡಿಸೆಂಬರ್ ತಿಂಗಳು ಬಂತೆAದರೆ ಚಳಿಗಾಲ ಎಂದರ್ಥ. ಆದರೆ ದಕ್ಷಿಣ ಗೋಳಾರ್ಧದಲ್ಲಿ ಆ ಸಮಯ ಉರಿಬಿಸಿಲಿನ ಬೇಸಗೆ ಕಾಲ. ನಮಗೆ ಬೇಸಗೆ ಕಾಲವಿರುವಾಗ ಅಲ್ಲೆಲ್ಲ ಚಳಿಗಾಲ. ಈ ಪ್ರಕೃತಿಗೋಚರ ಸಂಗತಿ ಭೂಮಿಯಲ್ಲಿ ೩೦ಲಿ ಅಕ್ಷಾಂಶದ ಆಚೆಗೆ ಉತ್ತರ ಅಥವಾ ದಕ್ಷಿಣಕ್ಕೆ ವಾಸವಿರುವ ಜನರಿಗೆ ಸುಲಭವಾಗಿ ಗಮನಕ್ಕೆ ಬರುತ್ತದೆ.
ಬ್ಯೂನಸ್ ಆಯ್ರಿಸ್‌ನಿಂದ ಅಂಟಾರ್ಟಿಕಾದವರೆಗೆ ನಾವು ನೇರವಾಗಿ ದಕ್ಷಿಣದ ಕಡೆಗೆ ಸುಮಾರು ಐದು ಸಾವಿರ ಕಿಲೋಮೀಟರುಗಳನ್ನು ದಾಟಬೇಕು. ಹೀಗೆ ನಿರಂತರ ಪ್ರಯಾಣ ಮಾಡುವಾಗ ವಾತಾವರಣದ ಉಷ್ಣತೆಯಲ್ಲಿ, ಹಗಲು-ರಾತ್ರಿಯ ಅವಧಿ ಇವುಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಇಡೀ ಹಡಗಿನೊಳಗೆ ಸಂಪೂರ್ಣ ಹವಾ ನಿಯಂತ್ರಣದ ವ್ಯವಸ್ಥೆಯಿದ್ದರೂ, ಹಡಗಿನ ಕದ ತೆರೆದು ಹೊರಗೆ ಬಂದಾಗ ಅದು ಅನುಭವವಾಗುತ್ತದೆ. ಇದರಲ್ಲಿ ನಮಗೆ ಎದ್ದು ಕಾಣುವುದು,
೧. ಉಷ್ಣಾಂಶದಲ್ಲಿ ದಿಢೀರನೆ ಕಂಡುಬರುವ ಇಳಿಮುಖ! ೩೮ಲಿ ದಕ್ಷಿಣ ಅಕ್ಷಾಂಶದ ಬ್ಯೂನಸ್ ಆಯ್ರಿಸ್‌ನಿಂದ ೬೨ಲಿ ದಕ್ಷಿಣ ಅಕ್ಷಾಂಶದ ಅಂಟಾರ್ಟಿಕಾಗೆ ಹೋಗುವುದರಲ್ಲಿ, ಉಷ್ಣಾಂಶ ೩೨ಲಿಅ ನಿಂದ -೯ಲಿಅ ಕ್ಕೆ ಇಳಿಯುತ್ತದೆ! ಪ್ರಯಾಣದ ಶುರುವಿನಲ್ಲಿ ಹಗುರವಾದ ಹತ್ತಿ ಬಟ್ಟೆಯನ್ನು ಉಡುತ್ತಿದ್ದವರು, ಬರಬರುತ್ತ ಉಣ್ಣೆಯ ದಿರಿಸುಗಳನ್ನು ಧರಿಸಬೇಕಾಯಿತು. ಕೊನೆ ಕೊನೆಗೆ ಮೈ ಕೊರೆಯುವ ಚಳಿಯಿಂದಾಗಿ ಥರ್ಮಲ್ಸ್-ಕೈಚೀಲ-ಕಾಲುಚೀಲಗಳೂ ಸಾಲದಾದವು!
೨. ಬೇಸಗೆ ಕಾಲವಾದ್ದರಿಂದ ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡುತ್ತಾ ಹೋದಂತೆ, ಹಗಲಿನ ಅವಧಿ ಹೆಚ್ಚುತ್ತಾ, ರಾತ್ರಿಯ ಅವಧಿ ಕಡಿಮೆಯಾಗುತ್ತದೆ. ಇದನ್ನು ನಾನು ಮೊದಲು ಕಂಡದ್ದು ಬ್ಯೂನಸ್ ಆಯ್ರಿಸ್‌ನಲ್ಲಿಯೇ! ರಾತ್ರಿ ಎಂಟೂವರೆ ಗಂಟೆಯಾದರೂ ಇನ್ನೂ ಸಂಜೆಗತ್ತಲೂ ಆವರಿಸಿರಲಿಲ್ಲ. ಇಡೀ ಆಯಸ್ಸು ಕರ್ನಾಟಕದಲ್ಲಿ ಕಳೆದವನಿಗೆ ಇದೊಂದು ವಿಚಿತ್ರವಾದ ಅನುಭವ! ಬರಬರುತ್ತ ರಾತ್ರಿ ಹತ್ತು-ಹನ್ನೊಂದು ಗಂಟೆಯಾದರೂ ಮಟಮಟ ಮಧ್ಯಾಹ್ನದಂತೆ ಬೆಳಕು! ಕೊನೆಗೆ ಅಂಟಾರ್ಟಿಕಾ ತಲಪುವಾಗ ಕತ್ತಲಾಗುತ್ತಿದ್ದುದು ರಾತ್ರಿ ಹನ್ನೊಂದೂಮುಕ್ಕಾಲು ಗಂಟೆಗೆ!
೩. ಇದರೊಂದಿಗೆ ಗಾಳಿಯ ತೀವ್ರತೆ! ಸುಮಾರು ೧೦೦ರಿಂದ ೧೫೦ ಕಿಲೋಮೀಟರು ವೇಗದಲ್ಲಿ ಬೀಸುವ ಗಾಳಿಯಿಂದಾಗಿ ಎಷ್ಟೋ ವೇಳೆ ಹಡಗಿನಿಂದ ಹೊರಗೆ ಬರಲೂ ಸಾಧ್ಯವಾಗದ ಪರಿಸ್ಥಿತಿಯುಂಟಾಗುತ್ತಿತ್ತು! ಈ ಗಾಳಿ ಯಾವಾಗಲೂ ಪಶ್ಚಿಮ ದಿಕ್ಕಿನಿಂದ ಪೂರ್ವಕ್ಕೆ ಬೀಸುವುದರಿಂದ, ನಮಗೆ ಸಮುದ್ರದಲ್ಲಿ ಏನನ್ನಾದರೂ ನೋಡಲೇ ಬೇಕೆನಿಸಿದರೆ, ಹಡಗಿನ ಮತ್ತೊಂದು ಬದಿಯ ಡೆಕ್‌ನಲ್ಲಿ ನಿಲ್ಲುವುದು ಸ್ವಲ್ಪ ವಾಸಿ ಎನಿಸುತ್ತಿತ್ತು! ಅಟ್ಲಾಂಟಿಕ್ ಸಾಗರ ಬಹಳ ಒರಟು. ಬ್ಯೂನಸ್ ಆಯ್ರಿಸ್‌ನಿಂದ ಹೊರಟ ನಮ್ಮ ಹಡಗು ಉಶುವಯ್ಯ ತಲಪುವವರೆಗೂ, ದಕ್ಷಿಣ ಅಮೆರಿಕಾದ ಪೂರ್ವ ತೀರದಲ್ಲಿಯೇ, ಅಟ್ಲಾಂಟಿಕ್ ಸಾಗರದಲ್ಲಿ ಸಾಗಿದ್ದರಿಂದ ಆ ಬಿರುಸು ನಮಗೆ ತಟ್ಟಲಿಲ್ಲ. ಅಲ್ಲಿಂದ ಮುಂದಕ್ಕೆ ತೆರೆದ ಸಾಗರಗಳನ್ನು ಎದುರಿಸಬೇಕಾಗುತ್ತದೆ: ಪಶ್ಚಿಮದಲ್ಲಿ ಪೆಸಿಫಿûಕ್ ಸಾಗರ ಮತ್ತು ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ! ಪೆಸಿಫಿûಕ್ ಸಾಗರ ಹೆಸರಿಗೆ ತಕ್ಕಂತೆ ‘ಶಾಂತ’ ಸಾಗರ! ಅಂಟಾರ್ಟಿಕಾ ತಲಪುವವರೆಗೂ ಸಾಧ್ಯವಾದಷ್ಟು ಆ ನೀರಿನಲ್ಲಿಯೇ ಚಲಿಸಿದ್ದರಿಂದ ಯಾರಿಗೂ ಪ್ರಯಾಣದ ಅರಿವೇ ಆಗಲಿಲ್ಲ. ಅಂಟಾರ್ಟಿಕಾದಲ್ಲಿ ನಮ್ಮ ಪ್ರಯಾಣದ ಮಾರ್ಗ
೪. ಅಂಟಾರ್ಟಿಕಾ ಪ್ರಯಾಣದಲ್ಲಿ ನಾವು ನಾಲ್ಕೆöÊದು ರೀತಿಯ ಹವಾಮಾನದ ವೈಪರೀತ್ಯಗಳನ್ನು ಎದುರಿಸುತ್ತೇವೆ. ಮೊದಲನೆಯದಾಗಿ, ಬಿಸಿಲುಗಾಲದಲ್ಲಿಯೂ -೯ಲಿಯಿಂದ -೧೫ಲಿ ಅ ವರೆಗಿನ ಚಳಿ! ಮಂಜು ಮುಸುಕಿದ ವಾತಾವರಣ; ಮೋಡ-ಮಳೆ; ಹಿಮಪಾತ; ವೇಗವಾಗಿ ಬೀಸುವ ಗಾಳಿ ಮತ್ತು ಇವಾವುವೂ ಇಲ್ಲದಿದ್ದಲ್ಲಿ ಮಾತ್ರ ಶುಭ್ರವಾದ, ನಿರ್ಮಲ ವಾತಾವರಣ! ಆಶ್ಚರ್ಯದ ಸಂಗತಿ ಏನೆಂದರೆ, ಕೇವಲ ಮುಕ್ಕಾಲು ಗಂಟೆಯ ಅವಧಿಯಲ್ಲಿ ಈ ಎಲ್ಲ ವೈಪರೀತ್ಯಗಳನ್ನೂ ಕಾಣಬಹುದು!
ಹಡಗಿನಿಂದ ಹೊರಗೆ ಆ ಸಮಯದಲ್ಲಿ ಬರಬೇಕಾದರೆ, ಥರ್ಮಲ್ಸ್, ಬೆಚ್ಚಗಿನ ನೀರಿಳಿಯದ ಉಡುಪು ಮತ್ತು ಅದೇ ರೀತಿ ಕೈ-ಕಾಲುಗಳಿಗೆ ಕವಚ, ಇವೆಲ್ಲವನ್ನೂ ಧರಿಸಿ ತಯಾರಾಗಬೇಕು. ಒಂದೊAದು ಬಾರಿಗೂ ಹೀಗೆ ನಮ್ಮ ರೂಮಿನಿಂದ ‘ವೇಷ ಕಟ್ಟಿ’ಕೊಂಡು ಬರುವುದು, ಹಿಂದಿರುಗಿ ಮಾಮೂಲಿ ಬಟ್ಟೆ ಹಾಕಿಕೊಳ್ಳುವುದು, ಇವೆಲ್ಲ ಕಿರಿಕಿರಿಯುಂಟು ಮಾಡುತ್ತಿದ್ದವು.
ಹಡಗಿನಲ್ಲಿ ಪ್ರಯಾಣ ಮಾಡಿ ಅಂಟಾರ್ಟಿಕಾ ತಲುಪಲು ಬೇಸಗೆ ಕಾಲವೇ ಸೂಕ್ತ. ಚಳಿಗಾಲದಲ್ಲಿ ಸಮುದ್ರದ ಮೇಲೆ ಸುಮಾರು ನೂರು-ನೂರೈವತ್ತು ಕಿಲೋಮೀಟರುಗಳ ವ್ಯಾಪ್ತಿಯಲ್ಲಿ ಹಿಮಗಡ್ಡೆಗಳು ಸಂಪೂರ್ಣವಾಗಿ ಆವರಿಸಿಕೊಳ್ಳುವುದರಿಂದ, ಹಡಗಿನಲ್ಲಿ ಪ್ರಯಾಣಿಸಿ ನೆಲವನ್ನು ತಲುಪಲು ಸಾಧ್ಯವೇ ಆಗುವುದಿಲ್ಲ. ಸಮುದ್ರದ ಮೇಲೆ ಬಿಸಿಲು ಬಿದ್ದು ನಿಧಾನವಾಗಿ ಹಿಮ ಕರಗುತ್ತಾ ಹೋದಂತೆ ಸ್ವಲ್ಪ ಸ್ವಲ್ಪವಾಗಿ ದಾರಿಯಾಗುತ್ತದೆ. ಹಿಮ ಕರಗುವ ಈ ಪ್ರಕ್ರಿಯೆ ನವೆಂಬರ್‌ನಲ್ಲಿಯೇ ಶುರುವಾದರೂ ಅದು ಡಿಸೆಂಬರ್ ತಿಂಗಳೂ ಮುಂದುವರೆದು, ಜನವರಿ ತಿಂಗಳ ಕೊನೆಗೆ ಸಮುದ್ರ ಖಾಲಿಯಾಗುವುದರಿಂದ, ¥s಼Éಬ್ರವರಿ-ಮಾರ್ಚ್ ತಿಂಗಳುಗಳು ಅಂಟಾರ್ಟಿಕಾ ಪ್ರಯಾಣಕ್ಕೆ ಸೂಕ್ತ. ಮಾರ್ಚ್ ತಿಂಗಳಿನ ಕೊನೆಗೆ ಪುನಃ ನೀರು ಹೆಪುö್ಪಗಟ್ಟಿ ಹಿಮಗಡ್ಡೆಗಳು ತೇಲಲು ತೊಡಗುವುದರಿಂದ ಅಲ್ಲಿಂದಾಚೆಗೆ ಹಡಗುಗಳು ಅಂಟಾರ್ಟಿಕಾ ಕಡೆಗೆ ಪ್ರಯಾಣ ಮಾಡುವುದು ಕಡಿಮೆ.
ಅಂಟಾರ್ಟಿಕಾ ಸೇರಲು ಉಶುವಯ್ಯಾ ಪಟ್ಟಣವನ್ನು ನಾವು ಬಿಟ್ಟದ್ದು ಜನವರಿ ೨೬ರಂದು. ಎರಡು ದಿನ ಕಳೆದು, ೨೮ನೇ ತಾರೀಕು, ಬೆಳಿಗ್ಗೆ ೫:೧೫ಕ್ಕೆ ಹಿಮಖಂಡದ ಮೊದಲ ದರ್ಶನ! ಹಡಗಿನಲ್ಲಿದ್ದ ಎಲ್ಲ ಪ್ರಯಾಣಿಕರೂ ಮೊದಲ ಬಾರಿಗೆ ಅಂಟಾರ್ಟಿಕಾ ಖಂಡವನ್ನು ನೋಡುವ ಕುತೂಹಲದಿಂದ ಹಡಗಿನ ಮೇಲ್ಮಹಡಿಯಲ್ಲಿ, ಅಂದರೆ, ಹಡಗಿನ ೧೨ನೇ ಡೆಕ್‌ನ ಮೇಲೆ ಗಡಗಡ ನಡುಗುತ್ತಾ ೪ ಗಂಟೆಗೇ ತಯಾರಾಗಿ ನೆರೆದಿದ್ದರು!
ಆಕಾಶ ವೀಕ್ಷಣೆ:
ಉತ್ತರ ಗೋಳಾರ್ಧದಲ್ಲಿ ವಾಸಿಸುವ ನಮಗೆ ಇಲ್ಲಿ ಕಾಣದ ಕೆಲವು ಆಕಾಶದ ಭಾಗಗಳು ದಕ್ಷಿಣಕ್ಕೆ ಹೋದಾಗ ಕಂಡುಬರುತ್ತವೆ. ಜೊತೆಗೆ ಯಾವ ಜೀವಿಗಳೂ ಇಲ್ಲದ, ಯಾವುದೇ ಕೃತಕವಾದ ಬೆಳಕೂ ಇಲ್ಲದ, ಶುಭ್ರವಾದ ವಾತಾವರಣ ಮತ್ತು ನಿಶ್ಶಬ್ದವಾದ ಅಂಟಾರ್ಟಿಕಾದಲ್ಲಿ ಆಕಾಶ ವೀಕ್ಷಣೆ ನಿಜಕ್ಕೂ ರೋಮಾಂಚನಕಾರಿ!
ಅAಟಾರ್ಟಿಕಾದಲ್ಲಿ ಕಾಣಬಹುದಾದ ನಭೋಮಂಡಲದ ದೃಶ್ಯ ಮತ್ತು ಆಕಾಶಕಾಯಗಳ ಬಗ್ಗೆ ನಾನು ಪೂರ್ವತಯಾರಿ ನಡೆಸಿದ್ದೆ. ನಕ್ಷತ್ರ ವೀಕ್ಷಣೆ ಮಾಡುವಾಗ ನಾವು ಗಮನಿಸಬೇಕಾದ ಮತ್ತೊಂದು ಅಂಶವಿದೆ. ಉತ್ತರದಲ್ಲಿ ಧ್ರುವ ನಕ್ಷತ್ರವನ್ನು ನೀವೆಲ್ಲ ನೋಡಿದ್ದೀರಿ. ಭೂಮಧ್ಯರೇಖೆಯಿಂದ ನೀವು ಉತ್ತರಕ್ಕೆ ಹೋದಂತೆಲ್ಲ, ಆ ನಕ್ಷತ್ರ ಅಷ್ಟೇ ಡಿಗ್ರಿಯಷ್ಟು ದಿಗಂತದಿAದ ಮೇಲಕ್ಕೆ ಕಾಣುತ್ತದೆ. ಅಂದರೆ, ಕರ್ನಾಟಕದಲ್ಲಿ ೧೨-೧೭ ಡಿಗ್ರಿ ಮತ್ತು ಡೆಲ್ಲಿಯಲ್ಲಿ ೨೮ ಡಿಗ್ರಿ ಎತ್ತರದಲ್ಲಿ ಕಂಡುಬರುತ್ತದೆ. ಆಕಾಶದಲ್ಲಿ ನಮ್ಮ ಎರಡೂ ಬದಿಯಲ್ಲಿ ಉತ್ತರ-ದಕ್ಷಿಣದ ನಕ್ಷತ್ರಪಟಗಳನ್ನು ನೋಡಬಹುದು. ಅವೆರಡರ ಮಧ್ಯೆ ಸೂರ್ಯ, ಚಂದ್ರ, ಗ್ರಹಾದಿಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತವೆ. ಭೂಮಿಯ ಉತ್ತರ ಧ್ರುವದಲ್ಲಿ ರಾತ್ರಿ ನಿಂತು ನೋಡಿದರೆ, ಧ್ರುವನಕ್ಷತ್ರ ನೇರವಾಗಿ ನೆತ್ತಿಯ ಮೇಲೇ ಕಾಣುತ್ತದೆ ಹಾಗೂ ಆಕಾಶದಲ್ಲಿ ಉತ್ತರ ಭಾಗದ ಸಂಪೂರ್ಣ ಚಿತ್ರಪಟ ಕಾಣುತ್ತದೆ. ಅಷ್ಟೇ ಅಲ್ಲ, ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಿಸುವ ಸೂರ್ಯ, ಚಂದ್ರ, ಗ್ರಹಾದಿಗಳು ದಿಗಂತದಲ್ಲಿ ಅಡ್ಡಡ್ಡಲಾಗಿ ಚಲಿಸುವಂತೆ ಕಾಣುತ್ತವೆ!
ಅದೇ ರೀತಿ ನಾವು ಭೂಮಿಯ ದಕ್ಷಿಣಕ್ಕೆ ಪ್ರಯಾಣಿಸಿದಾಗ, ದಕ್ಷಿಣ ಧ್ರುವ ಪ್ರದೇಶದಲ್ಲಿ ಬರೇ ದಕ್ಷಿಣ ಆಕಾಶದ ಚಿತ್ರಪಟ ಕಾಣುತ್ತದೆ ಮತ್ತು ಭಾರತದಲ್ಲಿ ನಮಗೆ ಸಾಮಾನ್ಯವಾಗಿ ದಕ್ಷಿಣ ದಿಗಂತದಲ್ಲಿ ಕಾಣುವ ತಾರಾಮಂಡಲಗಳು ಅಂಟಾರ್ಟಿಕಾ ಪ್ರದೇಶದಲ್ಲಿ ಸುಲಭವಾಗಿ ತಲೆಯ ಮೇಲೇ ಕಾಣುವುವು. ಹಗಲಿನಲ್ಲಿ ಗ್ರಹಗಳು ಅಡ್ಡಡ್ಡಲಾಗಿ ಚಲಿಸುವಂತೆ ತೋರುತ್ತವೆ ಹಾಗೂ ಸೂರ್ಯನು ನಮ್ಮ ಭುಜ ಮಟ್ಟವನ್ನು ದಾಟಿ ಮೇಲೆ ಬರುವುದಿಲ್ಲ.
೧. ಅಚಿಡಿiಟಿಚಿ (ದೇವನೌಕೆ) ಎಂಬುದು ದಕ್ಷಿಣ ಆಕಾಶದಲ್ಲಿ ಕಾಣುವ ಒಂದು ನಕ್ಷತ್ರಪುಂಜ(ಅoಟಿsಣeಟಟಚಿಣioಟಿ). ಇದೊಂದು ಅತ್ಯಂತ ಮನೋಹರವಾದ, ಹಲವಾರು ನಕ್ಷತ್ರಗಳು, ನಕ್ಷತ್ರಗುಚ್ಚ(Sಣಚಿಡಿಅಟusಣeಡಿ)ಗಳು, ನೀಹಾರಿಕೆ(ಓebuಟಚಿ)ಗಳು, ಹತ್ತು-ಹಲವು ಬ್ರಹ್ಮಾಂಡ(ಉಚಿಟಚಿxಥಿ)ಗಳನ್ನು ಒಳಗೊಂಡ ವಿಶಾಲವಾದ ತಾರಾ ಸಮೂಹದ ನಭೋಪ್ರದೇಶ! ಈ ನಕ್ಷತ್ರಪುಂಜದಲ್ಲಿ ಎಲ್ಲಕ್ಕಿಂತ ಪ್ರಕಾಶಮಾನವಾಗಿ ಕಾಣುವ ಅಚಿಟಿoಠಿus (α ಅಚಿಡಿiಟಿಚಿe) ಎಂಬ ತಾರೆ ನಮಗೆ ಕರ್ನಾಟಕದಲ್ಲಿಯೂ ಬರಿಗಣ್ಣಿಗೆ, ದಕ್ಷಿಣ ದಿಗಂತದಲ್ಲಿ ಕಾಣುತ್ತದೆ. ಆದರೆ ಆ ನಕ್ಷತ್ರಪುಂಜದ ಉಳಿದ ನಕ್ಷತ್ರಗಳು ಸುಲಭವಾಗಿ ಕಾಣುವುದಿಲ್ಲ; ಹೆಚ್ಚು ಸಮಯ ಇವು ಕ್ಷಿತಿಜದ ಕೆಳಗೇ ಉಳಿಯುತ್ತವೆ. ನಾವಿರುವ ಬ್ರಹ್ಮಾಂಡಕ್ಕೆ ಕ್ಷೀರಪಥ ಬ್ರಹ್ಮಾಂಡವೆAದೇ ಹೆಸರು. ಭೂಮಿಯಿಂದ ನಾವು ರಾತ್ರಿ ವೇಳೆ ಗಗನವನ್ನು ನೋಡಿದಾಗ, ಬ್ರಹ್ಮಾಂಡದ ಮಧ್ಯ ಭಾಗದ ಮೂಲಕ ನಮಗೆ ನಕ್ಷತ್ರಗಳ ಸಾಂದ್ರತೆ ಹೆಚ್ಚಿ, ಮುದ್ದೆ ಮುದ್ದೆಯಾಗಿ, ರಾಶಿ ರಾಶಿ ತಾರೆಗಳು ಇಡೀ ಆಕಾಶದಲ್ಲಿ ಹಾಲು ಚೆಲ್ಲಿದ ಒಂದು ಪಟ್ಟಿಯಂತೆ ಕಾಣುತ್ತದೆ. ಶುಭ್ರವಾದ, ಕೃತಕ ಬೆಳಕಿನ ಬಾಧೆಯಿಲ್ಲದ ಜಾಗಗಳಲ್ಲಿ, ಸುಂದರವಾದ ಈ ಕ್ಷೀರಪಥ(ಒiಟಞಥಿ Wಚಿಥಿ)ವನ್ನು ನಾವು ನೋಡಬಹುದು. ಇದು ಧನಸ್ಸು ರಾಶಿಯಿಂದ ತೊಡಗಿ, ದೇವನೌಕೆಯನ್ನು ಹಾದು ಹೋಗುವುದನ್ನು ಕಾಣಬಹುದು. ಹಾಗಾಗಿ, ನಮ್ಮ ಬ್ರಹ್ಮಾಂಡದ ಮಧ್ಯಭಾಗ ಮತ್ತು ಅದರಾಚೆ ಇರುವ ಅನೇಕ ಬ್ರಹ್ಮಾಂಡಗಳನ್ನು ದೇವನೌಕೆಯ ಅಂಗಳದಲ್ಲಿಯೇ ನಾವು ನಿರೀಕ್ಷಿಸಬಹುದು. ಅದರಲ್ಲೂ ಇಣಚಿ ಅಚಿಡಿiಟಿಚಿe ಎಂಬ ನೀಹಾರಿಕೆಯಂತೂ ಆಕಾಶವೀಕ್ಷಕರ ಅಚ್ಚುಮೆಚ್ಚಿನ ತಾಣ! η ಅಚಿಡಿiಟಿಚಿe ಎಂಬ ಅದೇ ಹೆಸರಿನ ನಕ್ಷತ್ರ ಹುಟ್ಟಿದ್ದೂ ಈ ನೀಹಾರಿಕೆಯಲ್ಲಿಯೇ! ಈ ನೀಹಾರಿಕೆಯ ಸುತ್ತ ಮುತ್ತ ಇನ್ನೂ ಹಲವಾರು ನೀಹಾರಿಕೆಗಳು, ನಕ್ಷತ್ರಗುಚ್ಚಗಳು ನೆಲೆಸಿವೆ. ಅವುಗಳಲ್ಲಿ ‘ಈಗಲ್’ ನೀಹಾರಿಕೆ ಅತ್ಯಂತ ಸುಂದರ ಮತ್ತು ಪ್ರಮುಖವಾದದ್ದು. ಹದ್ದಿನ ಆಕಾರದ ಈ ಅಂತರಿಕ್ಷಕಾಯ, ಭೂಮಿಯಿಂದ ೭ ಸಾವಿರ ಜ್ಯೋತಿರ್ವರ್ಷ ದೂರದಲ್ಲಿದೆ ಹಾಗೂ ಈ ದ್ರವ್ಯರಾಶಿಯ ವಿಸ್ತಾರವೇ ೭೦ ಜ್ಯೋತಿರ್ವರ್ಷಗಳು! ಈ ನೀಹಾರಿಕೆಗಳು, ಅನಿಲ ಸ್ಥಿತಿಯಲ್ಲಿರುವ ಬೃಹತ್ ದ್ರವ್ಯರಾಶಿಗಳು. ಮತ್ತು ಹೊಸ ಹೊಸ ನಕ್ಷತ್ರಗಳ ಹುಟ್ಟುದಾಣಗಳು.
೨. ಮ್ಯಾಜೆಲ್ಲನ್ನನ ಮೇಘಗಳು(ಒಚಿgeಟಟeಟಿiಛಿ ಅಟouಜs): ಬಹುಶಃ ಮ್ಯಾಜೆಲ್ಲನ್ ನಾವಿಕನ ಬಗ್ಗೆ ನೀವೆಲ್ಲ ಚರಿತ್ರೆಯ ಪಾಠದಲ್ಲಿ ಓದಿರಬಹುದು. ಆತ ಭೂಮಿಯ ಸುತ್ತ ಪ್ರಯಾಣ ಮಾಡುತ್ತಾ, ದಕ್ಷಿಣ ಗೋಳದಲ್ಲಿ ಸಂಚರಿಸುತ್ತಿರುವಾಗ ರಾತ್ರಿ ವೇಳೆ ಆಕಾಶದಲ್ಲಿ ಎರಡು ಸಣ್ಣ ಸಣ್ಣ ಮೋಡದಂತಿರುವ ಆಕಾಶಕಾಯಗಳನ್ನು ಕಂಡಿದ್ದನೆAದು ತೋರುತ್ತದೆ. ಆದ್ದರಿಂದ ಅವುಗಳಿಗೆ ಅವನ ಹೆಸರನ್ನೇ ಇಟ್ಟಿದ್ದಾರೆ. ಒಂದು ಮತ್ತೊಂದಕ್ಕಿAತ ಚಿಕ್ಕದಾಗಿರುವ ಕಾರಣ ಅವುಗಳಿಗೆ ಹಿರಿಯ ಮತ್ತು ಕಿರಿಯ ಮ್ಯಾಜೆಲ್ಲನ್ನನ ಮೇಘಗಳು ಎಂದು ಹೆಸರು. ಉತ್ತರ ಗೋಳಾರ್ಧದಲ್ಲಿರುವ ನಮಗೆ ಬರಿಗಣ್ಣಿಗೆ ಕಾಣುವ ಒಂದೇ ಒಂದು ಬ್ರಹ್ಮಾಂಡವೆAದರೆ, ಅದು ಆಂಡ್ರೋಮೆಡಾ (ಂಟಿಜಡಿomeಜಚಿ) ಬ್ರಹ್ಮಾಂಡ. ಅದು ನಮ್ಮಿಂದ ೨೪ ಲಕ್ಷ ಜೋತಿರ್ವರ್ಷಗಳ ದೂರದಲ್ಲಿರುವ ಮತ್ತು ನಮ್ಮ ಬ್ರಹ್ಮಾಂಡಕ್ಕಿAತ ಎರಡು ಪಟ್ಟು ದೊಡ್ಡದಾದ ಆಕಾಶಕಾಯ. ಅದೇ ರೀತಿ ದಕ್ಷಿಣ ಗೋಳಾರ್ಧದ ಜನರಿಗೆ ಮ್ಯಾಜೆಲ್ಲನ್ನನ ಜೋಡಿ ಮೇಘಗಳು, ನಮ್ಮ ಬ್ರಹ್ಮಾಂಡದಿAದ ಹೊರಗೆ ಬರಿಗಣ್ಣಿಗೆ ಕಾಣುವ ಮತ್ತೆರಡು ಬ್ರಹ್ಮಾಂಡಗಳು! ನಮ್ಮಿಂದ ಸುಮಾರು ೧೬೩-೨೦೬ ಸಾವಿರ ಜ್ಯೋತಿರ್ವರ್ಷ ದೂರದಲ್ಲಿರುವ, ನಿರ್ದಿಷ್ಟ ಆಕಾರವಿಲ್ಲದ, ಈ ಎರಡೂ ಬ್ರಹ್ಮಾಂಡಗಳು ನಮ್ಮ ಕ್ಷೀರಪಥ ಬ್ರಹ್ಮಾಂಡವನ್ನೇ ಸುತ್ತುತ್ತಿವೆ.
೩. ಇವಲ್ಲದೆ, ದಕ್ಷಿಣ ಆಕಾಶದಲ್ಲಿ ಮಾತ್ರ ಕಾಣುವ ಅನೇಕ ನಕ್ಷತ್ರಪುಂಜಗಳಾದ ಒusಛಿಚಿ, ಒeಟಿsಚಿ, ಊಥಿಜಡಿus, ಆoಡಿಚಿಜo, Piಛಿಣoಡಿ, ಖeಣiಛಿuಟum, ಖಿuಛಿಚಿಟಿಚಿ, ಔಛಿಣಚಿಟಿs, ಉಡಿus, Iಟಿಜus.. .. ಗಳನ್ನು ಮತ್ತು ಆ ಪ್ರದೇಶಗಳಲ್ಲಿರುವ ನಕ್ಷತ್ರಗಳು, ನಕ್ಷತ್ರಗುಚ್ಚಗಳು, ನೀಹಾರಿಕೆಗಳು, ಹತ್ತು-ಹಲವು ಬ್ರಹ್ಮಾಂಡಗಳನ್ನು ಕಾಣುವ ಒಂದೇ ಅವಕಾಶ ಇದಾಗಿತ್ತು.
ಬ್ಯೂನಸ್ ಆಯ್ರಿಸ್‌ನಿಂದಲೇ, ನಮ್ಮ ನೌಕೆ ಹೊರಟ ಮೊದಲ ರಾತ್ರಿಯಿಂದಲೇ, ನಾನು ಆಕಾಶವನ್ನು ಗಮನಿಸುತ್ತ ಹೊರಟೆ. ದಕ್ಷಿಣ ದಿಕ್ಕಿನತ್ತ ಪ್ರಯಾಣ ಮಾಡುತ್ತಿದ್ದಂತೆ, ಬರಬರುತ್ತ ರಾತ್ರಿಯ ವೇಳೆ ಕಡಿಮೆಯಾಗುತ್ತಾ, ಕೊನೆಗೆ ಅಂಟಾರ್ಟಿಕಾ ತಲಪುವ ಹೊತ್ತಿಗೆ ರಾತ್ರಿ ಹನ್ನೊಂದೂಮುಕ್ಕಾಲು ಗಂಟೆಗೆ ಕತ್ತಲಾದರೆ, ಎರಡು-ಎರಡೂವರೆ ಗಂಟೆಗೆ ಬೆಳಕು ಹರಿಯುತ್ತಿತ್ತು! ಹೀಗಾಗಿ ನಾನು ಮಧ್ಯ ರಾತ್ರಿಯ ನಂತರವೇ ಕೊರೆಯುವ ಚಳಿಯಲ್ಲಿ ಹಡಗಿನಿಂದ ಹೊರಗೆ ಬರಬೇಕಿತ್ತು. ಅಂಟಾರ್ಟಿಕಾದಲ್ಲಿ ಇದ್ದ ನಾಲ್ಕು ದಿವಸಗಳಲ್ಲಿ, ಎರಡು ರಾತ್ರಿಗಳು ಆಕಾಶದಲ್ಲಿ ಮಂಜು-ಮಳೆ ಮತ್ತು ಹಿಮಪಾತವಾಗಿದ್ದರಿಂದ ನನಗೆ ದೊರಕಿದ್ದು ಎರಡೇ ರಾತ್ರಿಗಳ ಆಕಾಶವೀಕ್ಷಣೆಯ ಭಾಗ್ಯ! ಆ ನಡುರಾತ್ರಿಯಲ್ಲಿ, ನನ್ನ ಜೊತೆಗಾರನಾಗಿ ಬಂದಿದ್ದ ಕಿರಣ್ ‘ವೇಷ ಕಟ್ಟಿಕೊಂಡು’ ನನ್ನೊಡನೆ ಹನ್ನೆರಡನೆ ಮಹಡಿ ಹತ್ತಿ, ಮೊದಲ ರಾತ್ರಿ ಏನೋ ಬಂದ. ಆದರೆ, ಎರಡನೆಯ ರಾತ್ರಿ ಆತ ಸುತರಾಂ ಒಪ್ಪಲಿಲ್ಲ. ಆ ಅಪರಾತ್ರಿಯ ವೇಳೆಯಲ್ಲಿ ಇತರ ಯಾವುದೇ ಪ್ರಯಾಣಿಕನನ್ನೂ ನಾನು ನಿರೀಕ್ಷಿಸುವಂತಿರಲಿಲ್ಲ. ಸುಮಾರು ೨೨ ದೇಶಗಳಿಂದ ಬಂದAತಹ ಪ್ರಯಾಣಿಕರಲ್ಲಿ ಯಾವೊಬ್ಬರಿಗೂ ಆಕಾಶ ವೀಕ್ಷಣೆಯ ಹವ್ಯಾಸವಿದ್ದಂತಿರಲಿಲ್ಲ; ಇದು ನನಗೆ ನಿಜಕ್ಕೂ ಬಹಳ ಆಶ್ಚರ್ಯದ ವಿಚಾರವಾಗಿತ್ತು.
ಪ್ರತಿ ರಾತ್ರಿ ನನ್ನೊಂದಿಗೆ ಲ್ಯಾಪ್‌ಟಾಪ್, ಬೈನಾಕ್ಯುರ‍್ಸ್, ಹಸಿರು ಲೇಸರ್ ಟಾರ್ಚ್ ಮತ್ತು ಅಚಿಟಿoಟಿ P೯೦ ಕ್ಯಾಮೆರಾದೊಂದಿಗೆ ಒಯ್ಯುತ್ತಿದ್ದೆ. ನನ್ನ ಹತ್ತಿರ ಟೆಲಿಸ್ಕೋಪ್ ಇಲ್ಲವಾದ್ದರಿಂದ ನನ್ನ ಆಕಾಶವೀಕ್ಷಣೆ ದುರ್ಬೀನಿನಲ್ಲಿ ಕಾಣುವ ಆಕಾಶಕಾಯಗಳಿಗೆ ಸೀಮಿತ. ಕೊರೆಯುವ ಚಳಿಯಲ್ಲಿ ಒಂದೊAದನ್ನೂ ಅಣಿಮಾಡಿ, ಹೊಂದಿಸುವುದರಲ್ಲಿ ಸಾಕುಸಾಕಾಗುತ್ತಿತ್ತು. ಅದೇನಾಯಿತೋ, ನನ್ನ ಮೊಬೈಲ್‌ನಲ್ಲಿ, ಎರಡು ದಿನ ಮುಂಚೆಯೇ, ಕಂಪಾಸ್ ಕೆಲಸ ಏರುಪೇರಾಗಿತ್ತು, ಅಂದರೆ, ದಿಕ್ಕುಗಳನ್ನು ಯದ್ವಾತದ್ವಾ ತೋರಿಸತೊಡಗಿತ್ತು. ಅದಕ್ಕೆ ಕಾರಣ ನನಗೆ ಇಲ್ಲಿಯವರೆಗೂ ಅರ್ಥವಾಗಿಲ್ಲ. ನನ್ನ ಆಕಾಶವೀಕ್ಷಣೆಯ ವೇದಿಕೆ, ನಮ್ಮ ಹಡಗಿನ ತುತ್ತತುದಿಯ ಮಹಡಿಯಾದ್ದರಿಂದ ಸುತ್ತಲೂ ಆಕಾಶದ ಎಲ್ಲ ದಿಕ್ಕುಗಳೂ ಕಾಣುತ್ತಿತ್ತು. ನನಗೆ ಬಂದ ಮತ್ತೊಂದು ಅಡಚಣೆಯೆಂದರೆ, ಹಡಗಿನ ಮೇಲೆ ಸುತ್ತಲೂ ಉರಿಯುತ್ತಿದ್ದ ಲೈಟ್‌ಗಳು! ಪ್ರತಿ ಬಾರಿಯೂ ಕತ್ತಲ ಜಾಗವನ್ನು ಹುಡುಕಿ ನಿಲ್ಲಬೇಕಾಗಿತ್ತು. ಆ ಸಮಯದಲ್ಲಿ ಯಾವ ಮಟ್ಟದ ಚಳಿ ಇರುತ್ತಿತ್ತೆಂದರೆ, ¥s಼ÉÇÃಟೋ ತೆಗೆಯಲು ಹರಸಾಹಸ ಪಡಬೇಕಾಗಿತ್ತು. ಕ್ಯಾಮೆರಾದ ಯಾವ ಕೀಲಿಯೂ ದಪ್ಪನಾದ ಕೈಕವಚದ ಮೂಲಕ ತಿರುಗಿಸಲಾಗುತ್ತಿರಲಿಲ್ಲ. ಕೈಕವಚವನ್ನು ತೆಗೆದು ಎಲ್ಲವನ್ನೂ ಹೊಂದಿಸಿ ಕ್ಲಿಕ್ ಮಾಡುವಷ್ಟರಲ್ಲಿ ಕೈ ಮರಗಟ್ಟಿ ಹೋಗುತ್ತಿತ್ತು. ಪುನಃ ಬೆರಳುಗಳು ಬೆಚ್ಚಗಾಗಿಸಲು ಎರಡು ನಿಮಿಷ!
ನಕ್ಷತ್ರಪುಂಜಗಳು ಮತ್ತು ಗ್ರೀಕ್ ಖಗೋಳಶಾಸ್ತç:
ಇರುಳಿನ ವೇಳೆ ಆಕಾಶದಲ್ಲಿ ನಕ್ಷತ್ರಗಳನ್ನು ನೋಡಿ ಆಶ್ಚರ್ಯ-ಕುತೂಹಲ-ಭಯ-ಗೌರವಭಾವಗಳಿಂದ ನೋಡಿದವರಲ್ಲಿ ಗ್ರೀಕರೂ ಒಬ್ಬರು. ಕತ್ತಲು ಕವಿದಂತೆ ಗಗನದಲ್ಲಿ ಮಿಂಚುತ್ತಿದ್ದ ತಾರೆಗಳನ್ನು ಗಮನಿಸಿ, ಆ ಚಿತ್ತಾರಗಳಿಗೆ ಏನೋ ಒಂದು ಅರ್ಥವಿರಬೇಕೆಂದು ಊಹಿಸಿದರು. ಆ ಊಹೆಯನ್ನು ವಿಸ್ತರಿಸಿ, ಚೆಲ್ಲಾಪಿಲ್ಲಿಯಾಗಿ ಎರಚಿ ಹೋದ ಹೊಳೆಯುವ ನಕ್ಷತ್ರಗಳನ್ನು ರಂಗೋಲಿ ಚುಕ್ಕೆಗಳನ್ನು ಸೇರಿಸಿ ಚಿತ್ರ ರಚಿಸುವಂತೆ, ವಿವಿಧ ಚಿತ್ರಗಳನ್ನು ಸೃಷ್ಟಿಸಿ, ಅವಕ್ಕೆ ವಿವಿಧ ಗ್ರೀಕ್ ಪೌರಾಣಿಕ ಹೆಸರುಗಳನ್ನು ನೀಡಿ ಪ್ರಚುರಪಡಿಸಿದರು. ಆಕಾಶದಲ್ಲಿ ನಕ್ಷತ್ರಗಳನ್ನು ಬರಿಗಣ್ಣಿನಿಂದ ನೋಡಿ, ಅವುಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿ, ಮಾಡಿದ ೮೮ ನಕ್ಷತ್ರಪುಂಜಗಳ ಖಗೋಳ ನಕ್ಷೆಯನ್ನು ಇಂದಿಗೂ ಕೂಡ ಬಳಸುತ್ತಿದ್ದೇವೆ. ಭೂಮಿಯ ಮೇಲೆ ಸ್ಥಳಗಳನ್ನು ಗುರುತಿಸಲು ಅಕ್ಷಾಂಶ(ಐಚಿಣiಣuಜe)-ರೇಖಾAಶ(ಐoಟಿgiಣuಜe)ಗಳ ಅನ್ವಯ ನಿರ್ಧರಿಸಿರುವಂತೆ, ಆಕಾಶದಲ್ಲೂ ಯಾವುದೇ ನಕ್ಷತ್ರದ ಸ್ಥಾನವನ್ನು ನಿರ್ಧರಿಸಲು ವಿಷುವದಂಶ(ಆeಛಿಟiಟಿಚಿಣioಟಿ)- ಘಂಟವೃತ್ತಾAಶ(ಖighಣ ಚಿsಛಿeಟಿsioಟಿ) ಎಂಬ ಅಂಶಗಳನ್ನು ಬಳಸುತ್ತೇವೆ.
ಕ್ರಿ.ಶ. ಒಂದು-ಎರಡನೆಯ ಶತಮಾನದಲ್ಲಿ ಭಾರತ ಮತ್ತು ಗ್ರೀಕರ ಒಡನಾಟ-ಪ್ರಭಾವ-ವಿಚಾರವಿನಿಮಯದಿಂದಾಗಿ ಭಾರತೀಯ ಖಗೋಳ ವಿಜ್ಞಾನಿಗಳೂ ಆಕಾಶದಲ್ಲಿನ ಆ ೮೮ ನಕ್ಷತ್ರಪುಂಜಗಳಿಗೆ ಭಾರತೀಯ ಹೆಸರುಗಳನ್ನು ಇಟ್ಟು ಬಳಸತೊಡಗಿದರು. ಇಲ್ಲಿ ನಾವು ಅವಶ್ಯವಾಗಿ ಗಮನಿಸಬೇಕಾದ ಒಂದು ಅಂಶವೇನೆAದರೆ, ೮೮ ನಕ್ಷತ್ರಪುಂಜಗಳಲ್ಲಿಯೇ ರಾಶಿಚಕ್ರ(Zoಜiಚಿಛಿ)ವೂ ಬರುವುದರಿಂದ ಅದರಲ್ಲಿರುವ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ.. .. ಮುಂತಾದ ಅಸಂಬದ್ಧ ಹೆಸರುಗಳು ಕ್ರಮವಾಗಿ ಂಡಿies, ಖಿಚಿuಡಿus, ಉemiಟಿi, ಅಚಿಟಿಛಿeಡಿ, ಐeo.. ಗಳ ನೇರ ಭಾಷಾಂತರಗಳಾಗಿವೆ. ಇದನ್ನು ಭಾರತದಲ್ಲಿ ಬಳಸಿದವರಲ್ಲಿ ಎರಡನೆ ಭಾಸ್ಕರಾಚಾರ್ಯ(೧೧೧೪-೧೧೮೫)ನ ಪಾತ್ರ ದೊಡ್ಡದು. ಉದಾಹರಣೆಗೆ ಇಲ್ಲಿ ನಾನು ಹೇಳಿರುವ ಅಚಿಡಿiಟಿಚಿ ನಕ್ಷತ್ರಪುಂಜಕ್ಕೆ ದೇವನೌಕಾ ಎಂದು ಹೆಸರು. ಇಂದು ನಮ್ಮಲ್ಲಿ ಗಿಳಿಶಾಸ್ತç ಹೇಳುವ ಸಾವಿರಾರು ಜೋತಿಷಿಗಳು ಬಳಸುವ ರಾಶಿ, ಜಾತಕ ಇವೆಲ್ಲ ಭಾರತೀಯ ಪರಂಪರೆ-ಸAಸ್ಕöÈತಿಯಲ್ಲಿ ಬಂದದ್ದಲ್ಲ. ಅವೆಲ್ಲ ಗ್ರೀಕರಿಂದ ನೇರವಾಗಿ ನಮ್ಮವರು ಎರವಲು ಪಡೆದದ್ದು!
೩೦ ಜನವರಿ: ಭೂಮಿಯ ದಕ್ಷಿಣ ಭಾಗದ ಸ್ಥಳಗಳಿಂದ ತೋರುತ್ತಿದ್ದ ಆಕಾಶ ನನಗೆ ಸಂಪೂರ್ಣವಾಗಿ ಹೊಸದು. ಮೊದಲು ಮೊದಲಿಗೆ ನನಗೆ ಆಕಾಶದಲ್ಲಿ ಕಾಣುತ್ತಿದ್ದ ತಾರೆಗಳನ್ನು ಗುರುತಿಸುವ ಕಾರ್ಯದಲ್ಲಿ ಸ್ವಲ್ಪ ಮಟ್ಟಿನ ಗೊಂದಲವುAಟಾಗಿತ್ತು. ಪ್ರತಿನಿತ್ಯ ರಾತ್ರಿ ಒಂದಲ್ಲ ಒಂದು ವೇಳೆಯಲ್ಲಿ ನಕ್ಷತ್ರವೀಕ್ಷಣೆ ಮಾಡುತ್ತಿದ್ದುದರಿಂದ ಆ ಕೆಲಸ ಹಗುರವೇನೋ ಆಗಿತ್ತು. ಆದರೆ, ಅಂಟಾರ್ಟಿಕಾದ ಅತ್ಯಂತ ನಿರಭ್ರವಾದ, ಒಂದಿಷ್ಟೂ ಕೃತಕ ಬೆಳಕಿಲ್ಲದ ಆ ಆಕಾಶದಲ್ಲಿ ಎಲ್ಲಾ ತಾರೆಗಳು ಇನ್ನೂ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿದ್ದಂತೆ ತೋರುತ್ತಿದ್ದವು! ಸುತ್ತಲೂ ಸಮುದ್ರವೇ ಸಮುದ್ರ! ತಲೆಯೆತ್ತಿದರೆ, ದಿಗಂತದಿAದ ದಿಗಂತದವರೆಗೆ ಅಭೂತಪೂರ್ವ ಆಕಾಶ! ವಾಹ್! ಅದೊಂದು ಅನಿರ್ವಚನೀಯ ಅನುಭವ! ನನ್ನೊಂದಿಗೆ ಕಿರಣನನ್ನೂ ಕರೆದುಕೊಂಡು ಬಂದಿದ್ದೆ. ಸಂಭ್ರಮದಿAದ ಒಂದೊAದನ್ನೂ ಅವನಿಗೆ ಅರ್ಥವಾಗುವಂತೆ ತೋರಿಸಿದೆ. ಸಂಭ್ರಮ ನನಗೆ!
ಬಾಂದಳದಲ್ಲಿ ಪ್ರಥಮವಾಗಿ ನನ್ನನ್ನು ಆಕರ್ಷಿಸಿದ್ದು ಹಾಲಿನಂತೆ ಆವರಿಸಿದ್ದ ಕ್ಷೀರಪಥ. ಧನಸ್ಸುರಾಶಿಯಲ್ಲಿ ನೆಲೆಸಿರುವ ನಮ್ಮ ಬ್ರಹ್ಮಾಂಡದ ಕೇಂದ್ರಭಾಗವನ್ನು ದಿಗಂತದಿAದ ಅಷ್ಟು ಎತ್ತರದಲ್ಲಿ ನಾನು ಕಂಡಿರಲಿಲ್ಲ. ಸಿಂಹ, ಕನ್ಯಾ, ತುಲಾ, ವೃಶ್ಚಿಕಾ, ಧನಸ್ಸು ರಾಶಿಗಳು ಕ್ಷಿತಿಜವನ್ನು ಅಲಂಕರಿಸಿದ್ದವು. ಪೂರ್ವದಲ್ಲಿ ಸಾಲಾಗಿ ಗುರುಗ್ರಹ ತುಲಾರಾಶಿಯಲ್ಲಿ; ಮಂಗಳಗ್ರಹ ವೃಶ್ಚಿಕಾ ರಾಶಿಯ ಅನೂರಾಧಾ ನಕ್ಷತ್ರದ ಬಳಿ ಹಾಗೂ ಶನಿಗ್ರಹ ಧನಸ್ಸುರಾಶಿಯಲ್ಲಿ ಮಿಂಚುತ್ತಿದ್ದವು. ಆ ದಿನ ಅಥವಾ ಹಿಂದಿನ ದಿನ ಹುಣ್ಣಿಮೆಯಿದ್ದಿರಬೇಕು. ಚಂದ್ರ ರಾತ್ರಿ ೧೨:೫೦ಕ್ಕೆ ಪಶ್ಚಿಮದ ಕಡೆಗೆ ಅಸ್ತಮಿಸಿದ್ದರಿಂದ, ಅವನ ಬೆಳಕು ಗಗನ ವೀಕ್ಷಣೆಗೆ ಅಡ್ಡಬರಲಿಲ್ಲ. ಆಕಾಶದಲ್ಲಿ ಮಹಾವ್ಯಾಧ(ಔಡಿioಟಿ) ಮತ್ತು ಮಹಾಶ್ವಾನ(ಅಚಿಟಿis ಒಚಿರಿoಡಿ) ಪುಂಜಗಳು ಆಕರ್ಷಿಸಿದವು. ತಲೆಯ ಮೇಲೆ ಎದ್ದು ಕಾಣುತ್ತಿದ್ದ ನಕ್ಷತ್ರಪುಂಜಗಳಲ್ಲಿ ಅತಿ ಮುಖ್ಯವಾದ ಅeಟಿಣಚಿuಡಿus, ಅಡಿux, ಅಚಿಡಿiಟಿಚಿ, ಮುಂತಾದುವುಗಳನ್ನು, ಅವುಗಳಲ್ಲಿದ್ದ ವಿಶೇಷತೆಗಳನ್ನು ಸಾಕಷ್ಟು ಹೊತ್ತು ವಿವರವಾಗಿ ನೋಡಿದೆ.
ಅಲ್ಲಿಂದ ನನ್ನ ಗಮನವನ್ನೆಲ್ಲ ಮ್ಯಾಜೆಲ್ಲನ್ನನ ಮೇಘಗಳ ಮೇಲೆ! ಈವರೆಗೆ ನಾನು ಅವುಗಳನ್ನು ಬರೇ ಪುಸ್ತಕಗಳಲ್ಲಿ, ಕಂಪ್ಯೂಟರಿನಲ್ಲಿ ಕಂಡಿದ್ದೆ. ಆಕಾಶದಲ್ಲಿ ಆ ಎರಡು ಮೇಘಗಳು ಬೂದು ಮೋಡಗಳಂತೆ ಎದ್ದು ಕಾಣುತ್ತವೆಂದು ಭಾವಿಸಿದ್ದೆ. ಸ್ವಲ್ಪ ಹೊತ್ತು ಅವು ಖಂಡಿತ ನನ್ನ ಕಣ್ಣಿಗೆ ಕಾಣಿಸಲೇ ಇಲ್ಲ. ಶತಮಾನಗಳ ಹಿಂದೆ ನಾವಿಕ ಮ್ಯಾಜೆಲ್ಲನಿಗೆ ಅಷ್ಟು ಸ್ಫುಟವಾಗಿ ಕಂಡ ಬ್ರಹ್ಮಾಂಡಗಳನ್ನು ನಾನಿಂದು ದುರ್ಬೀನಿನಲ್ಲಿ ಹುಡುಕಬೇಕಾಯಿತು! ಅವು ಅಲ್ಲಿಯೇ ಇದ್ದವು, ನನ್ನ ಕಣ್ಣಿಗೆ ಬಿದ್ದಿರಲಿಲ್ಲ. ತಡ ಮಾಡದೆ ಕ್ಯಾಮೆರಾದಲ್ಲಿ ಒಂದಷ್ಟು ¥s಼ÉÇÃಟೊಗಳನ್ನು ತೆಗೆದೆ.
ಆಕಾಶವೀಕ್ಷಣೆಯಂತಹ ಗಹನವಾದ ವಿಚಾರದಲ್ಲೆಲ್ಲ ಕಿರಣನಿಗೆ ಆಸಕ್ತಿ ಅಷ್ಟಕ್ಕಷ್ಟೆ. ಬೆನ್ನು ನೋವು, ಕತ್ತು ಉಳುಕು, ಬೆರಳುಗಳನ್ನು ಆಡಿಸಲು ಆಗದೇ ಇರುವಷ್ಟು ಚಳಿ, ನಿದ್ರೆ, ಇವೆಲ್ಲ ಅವನಿಗೆ ಒಟ್ಟಿಗೇ ಕಾಡತೊಡಗಿದವು. ಹಾಗಾಗಿ ನಾವು ಬೆಳಕು ಹರಿಯುವವರೆಗೆ, ಅಂದರೆ, ಎರಡು ಗಂಟೆಯವರೆಗೆ ಮುಂದುವರೆಸಲಿಲ್ಲ.೩೧ ಜನವರಿ: ಕಿರಣ್ ಈ ರಾತ್ರಿ ನನ್ನೊಂದಿಗೆ ಬರಲಿಲ್ಲ. ಆ ಅಪರಾತ್ರಿಯಲ್ಲಿ ಹಡಗಿನ ಮೇಲ್ಚಾವಣಿಯ ಮೇಲೆ ನಾನೊಬ್ಬನೇ ಎಲ್ಲ ಸಲಕರಣೆಗಳನ್ನೂ ಹೊತ್ತುಕೊಂಡು ಹೋಗಿ, ಆಕಾಶವನ್ನು ವೀಕ್ಷಿಸಿಬೇಕಾಯಿತು. ಹಿಂದಿನ ರಾತ್ರಿ ಕಂಡ ದೃಶ್ಯಗಳ ಪುನರಾವರ್ತನೆ ಹಾಗೂ ಪುನರ್ಪರಿಶೀಲನೆ. ಮರುದಿನ ನಮ್ಮ ಹಡಗು ಹಿಂದಿರುಗುವುದರಲ್ಲಿತ್ತು. ಹಾಗಾಗಿ ಮತ್ತೊಂದು ಬಾರಿ, ಕೊನೆಯ ಬಾರಿ, ಎಲ್ಲವನ್ನೂ ಕಣ್ತುಂಬಿಕೊAಡೆ.
ರಾತ್ರಿ ಸುಮಾರು ಒಂದು ಗಂಟೆಯ ಸಮಯ. ಯಾವುದೋ ದ್ವೀಪದ ಒಂದು ಪರ್ವತಶ್ರೇಣಿಯನ್ನು ನಮ್ಮ ಹಡಗು ದಾಟುತ್ತಿತ್ತು. ಅಂಟಾರ್ಟಿಕಾದ ದಕ್ಷಿಣ ದಿಗಂತದಲ್ಲಿ ಇದ್ದಕ್ಕಿದ್ದಂತೆ ಆ ಪರ್ವತಗಳ ಆಚೆಯಿಂದ ಕ್ಷೀಣವಾದ ಬೆಳಕೊಂದು ಕಾಣಿಸಿತು. ಇದೇನಿದು? ಯಾವುದಾದರೂ ಮತ್ತೊಂದು ಹಡಗು ನಮ್ಮತ್ತ ಬರುತ್ತಿದೆಯೇ? ಎಂದು ಊಹಿಸುವಷ್ಟರಲ್ಲಿ ಬೆಳಕು ಇಡೀ ಆಕಾಶವನ್ನು ಆವರಿಸಿತು! ನೋಡನೋಡುತ್ತಿದ್ದಂತೆಯೇ ಬಣ್ಣ ಬಣ್ಣದ ಛಾಯೆಗಳು ಆಕಾಶದ ದಕ್ಷಿಣ ಭಾಗವನ್ನು ವ್ಯಾಪಿಸಿದವು. ಇವಿಷ್ಟೂ ಕೇವಲ ೩೦-೪೦ ಸೆಕೆಂಡುಗಳಲ್ಲಿ ನಡೆದುಹೋದವು! ನನ್ನ ಜೀವಮಾನದಲ್ಲಿ ಅತ್ಯಂತ ಸಂತೋಷವಾದ ಘಳಿಗೆ ಇದು! ಮೊದಲ ಬಾರಿಗೆ ನಾನು ಂಡಿoಡಿಚಿ ಂusಣಡಿಚಿಟis ಎಂಬ ಅದ್ಭುತ ವಿದ್ಯಮಾನವನ್ನು ಕಂಡಿದ್ದೆ! ಕನ್ನಡದಲ್ಲಿ ಇದನ್ನು “ಭೂಕಾಂತ ಧ್ರುವ ಪ್ರಭೆ” ಎನ್ನುತ್ತಾರೆ. ಸೂರ್ಯನ ಮೇಲ್ಮೆöÊ ಮೇಲೆ ಏಳುವ ವಿದ್ಯುತ್ ಕಾಂತ ಅಲೆಗಳು ಭೂಮಿಯ ಧ್ರುವ ಪ್ರದೇಶಗಳ ವಾತಾವರಣವನ್ನು ಅಪ್ಪಳಿಸಿದಾಗ, ಭೂಮಿಯ ವಾಯುಮಂಡಲದ ಕಾಂತಗೋಳ(ಒಚಿgಟಿeಣiಛಿ sಠಿheಡಿe)ದಲ್ಲಿ ಉದ್ಭವವಾಗುವ ವಿದ್ಯುತ್ ಅಲೆಗಳು ಹೀಗೆ ವಾಯುಮಂಡಲವನ್ನು ಬೆಳಗುತ್ತವೆ. ಇವು ಮುಖ್ಯವಾಗಿ ಹಸಿರು, ಹಳದಿ, ಕೆಂಪು ಬಣ್ಣದ ಛಾಯೆಗಳಿಂದ ಕೂಡಿರುತ್ತವೆ. ಬಹಳ ಅಪರೂಪವಾಗಿ ಘಟಿಸುವ ಈ ವಿದ್ಯಮಾನವನ್ನು ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ನಾವು ಕಾಣಬಹುದು.
ಸುತ್ತಲೂ ಮತ್ತೊಮ್ಮೆ ನೋಡಿದೆ. ನನ್ನ ಸಂತೋಷವನ್ನು ಹಂಚಿಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ. ಓಡಿ ಹೋಗಿ ಕಿರಣನನ್ನು ಎಬ್ಬಿಸಲೆ? ಅವನು ಎಚ್ಚರಗೊಂಡು, ವೇಷ ಕಟ್ಟಿಕೊಂಡು ಮೇಲೆ ಬರಲು ಕನಿಷ್ಟ ೨೦ ನಿಮಿಷವಾದರೂ ಬೇಕು. ಅಷ್ಟರಲ್ಲಿ ಇದೆಲ್ಲಾದರೂ ಮಾಯವಾಗಿಬಿಟ್ಟರೆ? ಅಂದು ನಾನು ಕಂಡ ಧ್ರುವ ಪ್ರಭೆ ಸುಮಾರು ೨೨ ನಿಮಿಷ ಆಕಾಶವನ್ನು ಬೆಳಗಿತು. ¥s಼ÉÇÃಟೊ ತೆಗೆಯಲು ಯಾವ ಸಮಸ್ಯೆಯೂ ಇರಲಿಲ್ಲ. ನೇರವಾಗಿ ಯಾವುದೇ ಸಿದ್ಧತೆಯಿಲ್ಲದೆ ಆ ಕ್ಷಣವನ್ನು ಕ್ಯಾಮೆರಾದಲ್ಲಿ ಬಂಧಿಸಿದೆ. ಅಬ್ಬ! ಈ ವಿಸ್ಮಯಕರ ಘಟನೆಯನ್ನು ನೋಡಲು ನನ್ನೂರಿನಿಂದ ೧೪ ಸಾವಿರ ಕಿಲೋಮೀಟರು ಬರಬೇಕಾಯಿತಲ್ಲ! ಅರೋರಾ ಮಾಯವಾಗಿ ಪುನಃ ಕತ್ತಲೆ ಆವರಿಸಿತು. ತೃಪ್ತವಾದ, ಹಗುರವಾದ, ಆದರೆ ಅಷ್ಟೇ ಭಾರವಾದ ಮನಸ್ಸಿನಿಂದ ರೂಮಿಗೆ ಹಿಂದಿರುಗಿದೆ.
ಹಡಗಿನಲ್ಲಿ ಇದ್ದ ನಾಲ್ಕು ಂಗಿ ರೂಮ್‌ಗಳಲ್ಲಿ ನಮಗೆ ಪ್ರತಿದಿನ ದೈನಂದಿನ ಚಟುವಟಿಕೆಗೆಳು, ನೋಡಬಹುದಾದ ವೈಚಿತ್ರ÷್ಯಗಳು ಮತ್ತು ಪ್ರಾಣಿ-ಪಕ್ಷಿಗಳ ಬಗ್ಗೆ ಸವಿವರವಾಗಿ ವರ್ಣಿಸುತ್ತಿದ್ದರು. ಮಿಕಿ ಲೈವ್ ಎಂಬಾತ ಆ ಗೈಡ್‌ಗಳ ಮುಖ್ಯಸ್ಥ. ನೇರವಾಗಿ ಅವನಲ್ಲಿ ಹೋಗಿ, ಪ್ರತಿದಿನ ಇಷ್ಟೆಲ್ಲ ಹೇಳುವ ನೀವು ಆಕಾಶವೀಕ್ಷಣೆಯ ವಿಚಾರ ಹೇಳುವುದೇ ಇಲ್ಲವಲ್ಲ, ಏಕೆ? ಎಂದು ಕೇಳಿದೆ. ಕೇಳುವ ಆಸಕ್ತಿ ಎಷ್ಟು ಮಂದಿಗಿತ್ತೋ, ತಿಳಿಹೇಳುವ ಜನ ಅಲ್ಲಿರಲಿಲ್ಲ. ನೀವೇ ಹೇಳಿ ಎಂದು ನನ್ನನ್ನೇ ನೇಮಿಸಿದ. ಅಲ್ಲಿಂದ ಎರಡು ದಿನ ಹಗಲು ವೇಳೆಯಲ್ಲಿ ೩೦-೭೦ ಆಸಕ್ತರಿಗೆ ಲ್ಯಾಪ್‌ಟಾಪ್ ಮೂಲಕವೇ ವಿವರಿಸಿದೆ. ಆದರೆ ಹಿಂದಿರುವಾಗ, ಅಂಟಾರ್ಟಿಕಾದಿAದ ಉತ್ತರಕ್ಕೆ ನಮ್ಮ ಪ್ರಯಾಣ, ಬೇರೆ ವಿಧಿಯಿಲ್ಲದೆ, ಅಟ್ಲಾಂಟಿಕ್ ಸಾಗರದಲ್ಲಿಯೇ ಸಾಗಿದ್ದರಿಂದ, ರಾತ್ರಿ ವೇಳೆ ಬಿರುಸು ಗಾಳಿ, ತೀವ್ರ ಅಲೆಗಳ ಕಾರಣ ಯಾರೊಬ್ಬರೂ ಹೊರಗೆ ಹೋಗದಂತೆ ನಿರ್ಬಂಧ ಹಾಕಲಾಗಿತ್ತು. ೩೦-೩೩ ಅಡಿಗಳಷ್ಟು ಎತ್ತರದ ಅಲೆಗಳು, ೨೦೦-೨೫೦ ಕಿಮೀ ವೇಗದ ಗಾಳಿ, ನಮ್ಮ ದೈತ್ಯ ಹಡಗನ್ನೇ ನಡುಗಿಸಿಬಿಟ್ಟಿತ್ತು!

No comments:
Post a Comment