Tuesday, October 6, 2020

WILDLIFE MESSAGES 2020

 Sunday, 27 September 2020

WHO IS THE MOST EVOLVED ON OUR PLANET?                                                


Dear friend,

 You may think this, a silly question. All of us know the obvious answer: of course, it is we - the humans - who are the most evolved living beings on the Earth! We are the most intelligent, successful and fit of all. Climbing the tall evolutionary ladder, rung by rung, we have come to occupy the highest position!

             But wait! Let us take a look around. Have you observed a colourful fish swimming in an aquarium? The agile and fluid movements of its wing and tails, its adaptability inside the water to ma
neuver itself in all directions, it is a treat to watch the fish! Hold a flower and feel the marvellous soft petals, its bright colours, its pollen-ridden stamens, and the pleasant fragrance! Where did all this come from? From the bark of the plant or the leaves or roots? Every creation of nature appears to be an absolute wonder!

             I prefer to compare the evolutionary process to a large growing tree. Starting from a small seed, this tree has grown in all directions, adding new and diverse branches, for innumerable number of years. During rough times, some of its large branches broke and fell, some twigs snapped and lost. But come spring, it blooms with full majestic beauty and splendour! Now, which tender leaf do you consider the most recent or which flower the most evolved - of all?

             Friends, this is my theory: Since four billion years, life has existed on this Earth and nature has continuously experimented on them. Of the millions of species of plants and animals that were born on the Earth, only one percent of them remain! Rest of them was pushed to extinction for reasons best known to nature itself: Inadvertent errors, failure to coexist with others, burden to other co-occupants...   

            Nature Always Aims At Perfection! In concordance with the nature’s instincts and grand designs, every species that has remained on the planet, including us, slowly but steadily perfected itself into live masterpieces! This process of achieving absolute excellence naturally continues forever. Therefore, at any given point of time on the timeline of the Earth, every single lifeform on our planet is the most evolved!

             We, as humans, happen to be here and now! As witness to the success of all those who have accomplished the pinnacle of achievement and at the same time participating in that symphonic act of being perfect.

 Let us join hands to make our only Earth, a place where all elements of life can live in health, happiness and harmony. Thank you.

SPECIAL WILDLIFE MESSENGER OF THIS YEAR

Red-whiskered Bulbul (Pycnonotus jocosus)  This is the most common garden bird of India. It has a black crest that is turned forwards and has bright red patches on the cheeks and vent. Melodiously vocal, it feeds on fruits, nectar and small insects. Bulbuls are mostly monogamous. They build an open cup-shaped nest made of rootlets and leaves lined with soft fibre. They live for about 10-11 years.

Total of hand-painted cards made: this year 1930; in 36 years 72,655. Total recipients: this year 1010; in 36 years 13,004.        THE WILDLIFE MESSAGE CARDS are individually hand-painted and sent to individuals throughout the world to mark the Wildlife Week.

ಭೂಮಿಯ ಮೇಲೆ ಎಲ್ಲರಿಗಿಂತ ವಿಕಾಸ ಹೊಂದಿದ ಜೀವಿ ಯಾರು? 

ಮಿತ್ರರೆ,

ಇದೆಂಥ ಬಾಲಿಶ ಪ್ರಶ್ನೆ ಎಂದು ನಿಮಗೆ ಅನ್ನಿಸಬಹುದು. ಭೂಮಿಯ ಮೇಲೆ ಎಲ್ಲರಿಗಿಂತ ವಿಕಾಸ ಹೊಂದಿದ ಜೀವಿಗಳು ನಾವು-ಮಾನವರು- ಅಲ್ಲವೆ? ಎಲ್ಲರಿಗಿಂತ ಬುದ್ಧಿವಂತ, ಯಶಸ್ವಿ ಹಾಗೂ ಸಮರ್ಥ ಜೀವಿಗಳು ನಾವು ಎಂಬುದನ್ನು ವಿಶ್ವಕ್ಕೆ ಸಾಧಿಸಿ ತೋರಿಸಿಲ್ಲವೆ? ಜೀವವಿಕಾಸದ ಎತ್ತರವಾದ ಏಣಿಯನ್ನು ಒಂದೊಂದೇ ಮೆಟ್ಟಿಲು ಹತ್ತಿ ಉತ್ತುಂಗವನ್ನು ತಲುಪಿರುವವರು ನಾವಲ್ಲವೆ!

ಒಂದು ಕ್ಷಣ ತಡೆಯಿರಿ; ನಮ್ಮ ಸುತ್ತುಮುತ್ತಲು ಒಮ್ಮೆ ದೃಷ್ಟಿ ಹಾಯಿಸೋಣ. ಗಾಜಿನ ತೊಟ್ಟಿಯಲ್ಲಿ ಈಜಾಡುತ್ತಿರುವ ಬಣ್ಣಬಣ್ಣದ ಮೀನುಗಳನ್ನು ಗಮನಿಸಿ: ಲೀಲಾಜಾಲವಾಗಿ, ಚಾಕಚಕ್ಯತೆಯಿಂದ ರೆಕ್ಕೆ ಮತ್ತು ಬಾಲವನ್ನಾಡಿಸಿಕೊಂಡು ಓಡಾಡುತ್ತಿರುವ ಅವುಗಳನ್ನು ನೋಡಲು ಎರಡು ಕಣ್ಣುಗಳು ಸಾಲವು! ಅದೆಂಥ ಜಾಣ್ಮೆ, ಅದೆಂಥ ಚಾತುರ್ಯ! ಅದೇ ರೀತಿ, ಒಂದು ಸುಂದರವಾದ ಹೂವನ್ನು ಕೈಯ್ಯಲ್ಲಿ ಹಿಡಿದುಕೊಂಡು ಅನುಭವಿಸಿ: ರೇಷ್ಮೆಯಂತಹ ಆ ಹೂವಿನ ಪಕಳೆಗಳು, ಉಜ್ವಲ ಬಣ್ಣ, ನಾಜೂಕಾದ ಆ ಕೇಸರಗಳು ಮತ್ತು ಮಧುರವಾದ ಪರಿಮಳ! ಆ ಮೃದುತ್ವ, ಆ ಕೋಮಲತೆ, ಇವೆಲ್ಲ ಆ ಹೂವಿಗೆ ಎಲ್ಲಿಂ
ದ ಬಂದವು? ಮರದ ಒರಟು ಕಾಂಡದಿಂದಲೆ, ಎಲೆಗಳಿಂದಲೆ ಅಥವಾ ಬೇರುಗಳಿಂದಲೆ? ನಿಸರ್ಗದ ಒಂದೊಂದು ಸೃಷ್ಠಿಯೂ ಸೌಂದರ್ಯದ ಅಪ್ಪಟವಾದ ಶ್ರೇಷ್ಠ ಹಾಗೂ ಅದ್ಭುತ ರಚನೆ ಅನ್ನಿಸುವುದಿಲ್ಲವೆ? 

ವಿಕಾಸದ ಪ್ರಕ್ರಿಯೆಯನ್ನು ನಾನು ಬೆಳೆಯಿತ್ತಿರುವ ಒಂದು ಬೃಹತ್ ವೃಕ್ಷಕ್ಕೆ ಹೋಲಿಸಲು ಬಯಸುತ್ತೇನೆ. ಒಂದು ಸಣ್ಣ ಬೀಜದಿಂದ ಮೊಳಕೆಯೊಡೆದು ವೇಗವಾಗಿ ಎಲ್ಲ ದಿಕ್ಕುಗಳಲ್ಲಿ, ಅದೆಷ್ಟೋ ಶತಮಾನಗಳ ಕಾಲ ಬೆಳೆದು, ಇಂದು ಹೆಮ್ಮರವಾಗಿ ನಮ್ಮೆದುರು ನಿಂತಿದೆ! ಕಾಲನ ಕ್ರೂರ ಜಾಲಕ್ಕೆ ಸಿಕ್ಕು, ಅದರ ಎಷ್ಟೋ ಕೊಂಬೆಗಳು ತುಂಡರಿಸಿ ಬಿದ್ದುಹೋಗಿರಬಹುದು, ಇನ್ನೆಷ್ಟೋ ಟೊಂಗೆಗಳು ಕಳಚಿಕೊಂಡಿರಬಹುದು. ಆದರೆ, ವಸಂತ ಕಾಲ ಬಂದಾಗ, ಇಡೀ ಮರ ತಳಿರೊಡೆದು ಪುಷ್ಪಗಳನ್ನು ತಳೆದಾಗ... ವಾಹ್! ಸೌಂದರ್ಯವೇ ಮೈದಳೆದು ನಳನಳಿಸುತ್ತಿರುವ ಆ ಮರದಲ್ಲಿ ಎಲ್ಲಕ್ಕಿಂತ ಅತ್ಯಂತ ಹೊಸದಾದ ಚಿಗುರು ಯಾವುದು, ಅಥವಾ ಅತ್ಯಂತ ವಿಕಾಸ ಹೊಂದಿದ ಹೂವು ಯಾವುದು ಎಂದು ಹೇಳಲು ಸಾಧ್ಯವೆ? 

ಮಿತ್ರರೆ, ಇದು ನನ್ನ ವಿಚಾರ ಸರಣಿ: ಭೂಮಿಯ ಮೇಲೆ ಮೊದಲ ಜೀವ ಜನ್ಮತಳೆದು ನಾನ್ನೂರು ಕೋಟಿ ವರ್ಷಗಳಾದುವು. ಅಲ್ಲಿಂದ ಇಲ್ಲಿಯವರೆಗೆ ಪ್ರಕೃತಿಯು, ಇಲ್ಲಿ ಜನಿಸಿದ ಜೀವಿಗಳ ಮೇಲೆ ನಿರಂತರವಾಗಿ ಪ್ರಯೋಗಗಳನ್ನು ನಡೆಸಿದೆ. ಇಳೆಯ ಮೇಲೆ ಹುಟ್ಟಿದ ಅದೆಷ್ಟೋ ಕೋಟಿ ಜೀವ ಪ್ರಭೇದಗಳಲ್ಲಿ ಇಂದು ಉಳಿದಿರುವುದು ಕೇವಲ ಶೇಕಡ ಒಂದರಷ್ಟು ಮಾತ್ರ! ಉಳಿದವು ಹೇಳಹೆಸರಿಲ್ಲದಂತೆ ನಶಿಸಿಹೋಗಿವೆ. ಅವು ಸೃಷ್ಟಿಯ ಪ್ರಯೋಗ ದೋಷಗಳೋ, ಅವು ಭೂಮಿಗೆ ಹೊರೆಯಾದವೋ ಅಥವಾ ನಿಷ್ಪ್ರಯೋಜಕ ಜೀವಿಗಳೆನಿಸಿಕೊಂಡವೋ.... ಕಾರಣ ನಿಸರ್ಗಕ್ಕೆ ಮಾತ್ರ ಗೊತ್ತು!

ಪರಿಪೂರ್ಣತೆಯ ಪರಾಕಾಷ್ಠೆಯೇ ನಿಸರ್ಗದ ಗುರಿ! ಪ್ರಕೃತಿಯ ಈ ಹುಟ್ಟರಿವಿನ ಗುಣ, ಅದರ ಉತ್ಕೃಷ್ಟ ವಿನ್ಯಾಸದ ಸಂಕಲ್ಪ, ಇವುಗಳನ್ನು ಅನುಸರಿಸಿ, ಜಗತ್ತಿನಲ್ಲಿ ಉಳಿದು ಬಾಳಿದ ಎಲ್ಲ ಜೀವಿಗಳೂ ದೃಢವಾಗಿ, ನಿರಂತರವಾಗಿ ವಿಕಸಿತಗೊಂಡು, ಒಂದೊಂದೂ ಸೃಷ್ಟಿಯ ಅತ್ಯಂತ ಕೌಶಲ್ಯದ ಕಲಾಕೃತಿಗಳಾಗಿ ರೂಪುಗೊಂಡಿವೆ! ಈ ಕಾರ್ಯಗತಿ ಹೀಗೆಯೇ ಮುಂದುವರಿಯುವುದೂ ನಿಸರ್ಗದ ಸಹಜ ಲಕ್ಷಣವೇ ಆಗಿದೆ. ಆದ್ದರಿಂದ ಈ ಭೂಮಿಯ ಯಾವುದೇ ನಿರ್ದಿಷ್ಟ ಕಾಲಘಟ್ಟದಲ್ಲಿಯೂ, ಇಲ್ಲಿರುವ ಪ್ರತಿಯೊಂದು ಜೀವಿಯೂ ಅತ್ಯಂತ ವಿಕಾಸ ಹೊಂದಿದ ಜೀವಿಯೇ ಆಗಿದೆ!

ನಾವು, ಮನುಷ್ಯರು, ಇಂದೀಗ, ಇಲ್ಲಿದ್ದೇವೆ. ಉತ್ಕೃಷ್ಟತೆಯನ್ನು ಸಾಧಿಸಿರುವ ಇತರ ಜೀವಿಗಳ ಯಶಸ್ಸಿಗೆ ಸಾಕ್ಷಿಗಳಾಗಿ, ಮತ್ತು ಆ ಸಾಧನೆಯ ಪ್ರಕ್ರಿಯೆಯಲ್ಲಿ, ಸಾಮರಸ್ಯದ ವೈದೃಶ್ಯದಲ್ಲಿ ನಾವೂ ಭಾಗಿಗಳಾಗಿ! 

ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ. 

ವಂದನೆಗಳು. 

 ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ: ಕೆಮ್ಮೀಸೆ ಪಿಕಳಾರ : ಹೂದೋಟಗಳಲ್ಲಿ ಲವಲವಿಕೆಯಿಂದ ಹಾಡುತ್ತಾ, ಹಾರಾಡುತ್ತಾ ಸಂತೋಷದ ವಾತಾವರಣವನ್ನೇ ಸೃಷ್ಟಿಸುವ ಈ ಹಕ್ಕಿಗೆ ತಲೆಯ ಮೇಲೆ  ಮುಂದಕ್ಕೆ ಬಾಗಿರುವ ಕಪ್ಪು ಕಿರೀಟ; ಕೆನ್ನೆ ಮತ್ತು ಕಿಬ್ಬೊಟ್ಟೆಯ ಮೇಲೆ ಅಚ್ಚ ಕೆಂಪು ಮಚ್ಚೆಗಳು. ಹೂ ಮಕರಂದ, ಹಣ್ಣುಗಳು ಮತ್ತು ಸಣ್ಣ ಕೀಟಗಳೇ ಆಹಾರ. ಪಿಕಳಾರಗಳ ಆಯಸ್ಸು ಸುಮಾರು ೧೦-೧೧ ವರ್ಷ; ಸಾಧಾರಣವಾಗಿ ಏಕಪತಿತ್ತ್ವ ಅನುಸರಿಸುತ್ತವೆ. ಗಿಡಗಂಟಿಗಳ ಕವಲುಗಳಲ್ಲಿ, ನಾರು-ಬೇರುಗಳಿಂದ ಕೂಡಿದ, ಒಳಗೆ ಮೃದುವಾದ ಬಟ್ಟಲಾಕಾರದ ಗೂಡು ಕಟ್ಟುತ್ತವೆ. 

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೧೯೩೦; ಕಳೆದ ೩೬ ವರ್ಷಗಳಲ್ಲಿ ಒಟ್ಟು ೭೨,೬೫೫

ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧೦೧೦; ಕಳೆದ ೩೬ ವರ್ಷಗಳಲ್ಲಿ ಒಟ್ಟು ೧೩,೦೦೪. 



4 comments:

Dr. S. V. Narasimhan said...

ಓದುಗ ಮಿತ್ರರನೇಕರು ಈ ಬ್ಲಾಗ್‌ನಲ್ಲಿ, ಇಮೇಲ್ ಮೂಲಕ, ವಾಟ್ಸ್‌ಆಪ್ ಹೀಗೆ ವಿವಿಧ ಮಾಧ್ಯಮಗಳ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದ್ದಾರೆ. ಅವುಗಳನ್ನು ಜೊತೆಗೂಡಿಸಿ ಒಂದೇ ಕಡೆಯಲ್ಲಿ ಕ್ರೋಢೀಕರಿಸಿದ್ದೇನೆ:


ಮನದಾಳದಿಂದ ... ಪ್ರತಿ ಪ್ರಜ್ಞಾವಂತ ವ್ಯಕ್ತಿಯನ್ನೂ ನಿಮ್ಮ ಪತ್ರ ಚಿಂತನೆಗೆ ಹಚ್ಚುತ್ತದೆ... ಮನುಷ್ಯನೇ ಉತ್ಕೃಷ್ಟ ಹಾಗೂ ವಿಕಸಿತ ಜೀವಿ ಎನ್ನುವ ಅಹಂಗೆ ನಿಮ್ಮ ಪ್ರತಿ ವಾಕ್ಯವೂ ಸವಾಲಾಗಿದೆ. ಅದಕ್ಕಾಗಿ ನೀವು ಬರೆದ ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಲೇಖನ ಬಹಳ ಹೃದಯಸ್ಪರ್ಶಿಯಾಗಿದೆ. ಜಗತ್ತಿನ ಪ್ರತಿ ಜೀವಿಯೂ ಸುಂದರ, ವಿಕಸಿತ... ಮತ್ತು ಪರಮಾತ್ಮ ಪ್ರಕಟಗೊಂಡ ಸ್ವರೂಪ. ಅವುಗಳನ್ನು ಪೋಷಿಸಿ, ರಕ್ಷಿಸಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿ, ಪ್ರಕೃತಿಯ ಒಳಿತನ್ನೇ ಆಶಿಸೋಣ ಎಂಬ ನಿಮ್ಮ ಅದ್ಭುತ ಅಭಿಯಾನಕ್ಕೆ ಮತ್ತೊಮ್ಮೆ ಕೈ ಎತ್ತಿ ಮುಗಿಯುತ್ತೇನೆ. - ಡಾ. ಸುಲೋಚನ, ಪಾಲಂಗಾಲ, ಕೊಡಗು

ಸಂದೇಶದ ಸಾರ- ಸಾಮರಸ್ಯದ ಬದುಕನ್ನು ಎಲ್ಲಾ ಜೀವಜಂತುಗಳು ಪಾಲಿಸುತ್ತಿವೆ; ಪಾಲಿಸದೇ ಇರುವ ಜೀವಿ ಮಾನವ... ತನ್ನ ಅವನತಿಯ ಭಾಷ್ಯ ಬರೆಯುತ್ತಿದ್ದಾನೆ. - ಎ. ಶಿವಪ್ರಕಾಶ್, ಡಿಆರ್‍ಡಿಓ, ಮೈಸೂರು.

ನೀನು ಕಳುಹಿಸಿದ ವನ್ಯ ಪ್ರಾಣಿ ಸಂರಕ್ಷಣೆಯ ಬಗ್ಗೆ ಕಾರ್ಡ್ ನನ್ನ ಕೈ ಸೇರಿದೆ. ನಿನ್ನ ಸಾಧನೆ ಮೆಚ್ಚುವಂತದ್ದು ಹಾಗು ನನ್ನ ಸಹಪಾಠಿಯೊಬ್ಬ ಇಂತಹ ಹವ್ಯಾಸವನ್ನು ತನ್ನದಾಗಿಸಿಕೊಂಡು ಅದಕ್ಕಾಗಿ ನಿರಂತರ ಶ್ರಮಿಸುತ್ತಾ ಹೊಸ ಹೊಸ ಆವಿಷ್ಕಾರಗಳನ್ನು ಕಿಂಚಿತ್ ಪ್ರತಿಫಲಾಪೇಕ್ಷೆಯಿಲ್ಲದೆ ನಮಗೆಲ್ಲರಿಗೂ ತಲಪಿಸುವುದನ್ನು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತಿದೆ. - ಡಾ. ರಾಮದಾಸ್ ಶೇಟ್, ಎಂ.ಎಂ.ಸಿ. ಸಹಪಾಠಿ, ಕುಂದಾಪುರ


ಡಾ. ನರಸಿಂಹನ್‌ರವರ ಪ್ರಕೃತಿಪ್ರೇಮ ಮತ್ತು ಹೊಸ ವೈಜ್ಞಾನಿಕ ಆಲೋಚನೆಗೆ ಅಭಿನಂದನೆಗಳು. ನಿಸರ್ಗ ಹಾಗೂ ಪಕ್ಷಿಸಂಕುಲದ ವೀಕ್ಷಣೆ ಮತ್ತು ಅಧ್ಯಯನ ಮಾಡಲು ಬಹಳ ತಾಳ್ಮೆ-ಸಂಯಮ ಇರಬೇಕಾಗುತ್ತದೆ. ಇವರ ಸಾಧನೆ ನಮ್ಮ ವೈದ್ಯರ ಗುಂಪಿನಲ್ಲಿ ಅಪರೂಪ ಅನಿಸುತ್ತದೆ. ಈ ಸಾಧನೆಗೆ ಇವರ ಸಹಧರ್ಮಿಣಿಯ ಬೆಂಬಲವೂ ಇದೆ ಅಂದುಕೊಳ್ಳುತ್ತೇನೆ. - ಶ್ರೀಮತಿ ಪದ್ಮಾ ಕುಶಾಲಪ್ಪ, ಮಡಿಕೇರಿ

ಸುಂದರ ಕೆಮ್ಮೀಸೆ ಪಿಕಳಾರ ಮತ್ತು ಕೆಂದಲೆ ಕಳ್ಳಿಪೀರ ಹಕ್ಕಿಗಳು ಮನ ಮುಟ್ಟುವ ಸಂದೇಶಗಳೊಂದಿಗೆ ಇಂದು ನನ್ನ ಮನೆ ಸೇರಿವೆ. ಅವುಗಳ ಕನ್ನಡ ಹೆಸರು ಬಹಳ ಆಕರ್ಷಕವೆನಿಸಿತು ನನಗೆ. ನಿಮ್ಮ ಅದ್ಭುತ ಕಲಾ ಚೈತನ್ಯ ಹಕ್ಕಿ-ಪ್ರಾಣಿಗಳ ಮೂಲಕ ಹೊರಬರುತ್ತಿರುವುದು ನಮಗೆ ಹೆಮ್ಮೆ. ನಿಮ್ಮ ಪ್ರಕೃತಿ ಮೇಲಿನ ಒಲವಿಗೆ, ಕಲಾಕೃತಿಯ ರಚನೆಯ ತಾಳ್ಮೆಗೆ ಸದಾ ನನ್ನ ನಮನಗಳು. - ಹೆಚ್. ಕೆ. ರಮೇಶ್, ಹಾಸನ

ಜೀವಿಗಳ ಒಳ-ಹೊರಗನ್ನು ಅನುಭವಿಸಿದವರು/ಆನಂದಿಸಿದವರು ಮಾತ್ರ ಈ ರೀತಿಯ ವ್ಯಾಖ್ಯಾನ ನೀಡಬಲ್ಲರು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು! - ಸ್ವಾಮಿ ಆಲೋಕಾನಂದ, ರಾಮಕೃಷ್ಣ ವೇದಾಂತ ಆಶ್ರಮ, ಕೋಲ್ಕತ್ತಾ.

Dr. S. V. Narasimhan said...

ನಿಮ್ಮ ವನ್ಯ ಜೀವಿಗಳ ಆಸಕ್ತಿ, ಅದೂ ದೀರ್ಘ ೩೭ ವರ್ಷಗಳಿಂದ ಪಕ್ಷಿ ಅಧ್ಯಯನ, ಜೊತೆಗೆ ಚಿತ್ರ ಬಿಡಿಸುವ ಆಸಕ್ತಿ ನಿಜಕ್ಕೂ ವೈದ್ಯರಲ್ಲಿ ಕಡಿಮೆ ಅನಿಸುತ್ತೆ!! ನಿಮ್ಮ ಈ ಸಾಧನೆಗೆ ಅದರಲ್ಲೂ ನಮ್ಮ ಎಂ.ಎಂ.ಸಿ ವೈದ್ಯರು ಬಹಳ ಹೆಮ್ಮೆ ಪಡುತ್ತೇವೆ. ನೀವು ಇನ್ನೂ ಹೆಚ್ಚಿನ ವನ್ಯಜೀವಿಗಳ ಬಗ್ಗೆ ಅಧ್ಯಯನ ಮಾಡಲು ದೇವರು ನಿಮಗೆ ಶಕ್ತಿ ಕೊಡಲಿ ಎಂದು ಹಾರೈಸುತ್ತೇನೆ. - ಡಾ. ಪದ್ಮಿನೀ ಜಯಪಾಲ, ವೈದ್ಯಕೀಯ ಸಹಪಾಠಿ, ಚಾಮರಾಜನಗರ

ನಿಮ್ಮ ಅಮೂಲ್ಯ ಸಂದೇಶಗಳು ತಲುಪಿವೆ. ಪ್ರಕೃತಿರಕ್ಷಣೆಯ ಬಗ್ಗೆ ನೀವು ಬರೆದಿರುವ ಎಷ್ಟೋ ವಿಚಾರಗಳನ್ನು ಮತ್ತು ಸಂದೇಶಗಳನ್ನು ನಾನು ನನ್ನ ಭಾಷಣಗಳಲ್ಲಿ ಬಳಸಿಕೊಂಡಿದ್ದೇನೆ. ಅಭಿನಂದನೆಗಳು. - ಎ.ಎಸ್.ಎನ್. ಹೆಬ್ಬಾರ್, ವಕೀಲರು, ಕುಂದಾಪುರ.

ವಿಕಾಸ ಎಂಬುದು ಎಲ್ಲ ಜೀವಿಗಳಿಗೂ ಅನ್ವಯಿಸುತ್ತದೆ ಎಂಬ ಈ ಬಾರಿಯ ನಿಮ್ಮ ವಿಚಾರ ಬಹಳ ಚೆನ್ನಾಗಿದೆ. ನಾವು ಯಾವಾಗಲೂ ಒಂದೇ ಸಿದ್ಧ ದಿಕ್ಕಿನಲ್ಲಿ ಆಲೋಚಿಸುತ್ತೇವೆ. ಪ್ರತಿಯೊಂದು ವಾದಕ್ಕೂ ಮತ್ತೊಂದು ಕೋನವಿದೆ ಎಂಬುದನ್ನು ನೀವು ಉದಾಹರಣೆಗಳೊಂದಿಗೆ ಪ್ರತಿಪಾದಿಸಿದ್ದೀರಿ. ಧನ್ಯವಾದಗಳು. - ರಕ್ಷಿತ್ ಮೋನಪ್ಪ, ವೆಸ್ಟ್ ಮೌಂಟ್, ಮಾಂಟ್ರಯಲ್, ಕೆನಡಾ.

ನಿಮ್ಮ ವೃತ್ತಿಯ ಹೊರತಾಗಿಯೂ ಪ್ರಕೃತಿ ಪಕ್ಷಿಗಳ ಬಗ್ಗೆ ಆಸಕ್ತಿ, ಅವುಗಳ ಅಧ್ಯಯನ ಮತ್ತು ಸ್ವತಃ ನೀವೇ ಅವುಗಳ ಚಿತ್ರ ಬಿಡಿಸಿ, ನಿಮ್ಮ ಪ್ರೀತಿಪಾತ್ರರಿಗೆ ಹಂಚಲು, ನಿಮಗಿರುವ ಪ್ರೀತಿಗೆ-ತಾಳ್ಮೆಗೆ ಬೆಲೆ ಕಟ್ಟಲಾಗದು, ಎಲ್ಲಿ ಪ್ರತಿಭೆ ಇದೆಯೋ ಅಲ್ಲಿ ಪ್ರಶಂಸೆ-ಪ್ರಶಕ್ತಿಗಳು ಹುಡುಕಿಕೊಂಡು ಬರುವುದು ಸಹಜ. - ಪ್ರತಿಭಾ ರಾಮೇಗೌಡ, ವಿಭೂತಿಪುರ, ಕೋಲಾರ

ನಿಮ್ಮ ಕುಂಚಕಲೆ ಮತ್ತು ಬರೆಹ ಎರಡೂ ಒಂದಕ್ಕೊಂದು ಪೂರಕವಾಗಿವೆ. ಪ್ರಕೃತಿಯನ್ನುಳಿಸಲು ನೀವು ಆರಿಸಿಕೊಂಡಿರುವ ಮಾಧ್ಯಮ ಶ್ಲಾಘನೀಯ. ನಿಮ್ಮ ಈ ಶ್ರದ್ಧೆ ಮತ್ತು ಅಚಲ ಪ್ರೀತಿಗೆ ನಾವೂ ಕೈ ಜೋಡಿಸುತ್ತೇವೆ. - ವಿಂಸೆಂಟ್ ಫ಼ರ್ನಾಂಡಿಸ್, ಕುಂಚಗಿ, ತುಮಕೂರು.

Dr. S. V. Narasimhan said...

This is what called, Out of the Box thinking! Thank you for the beautiful watercolour cards. - Sharat Kumar, Kozhikode

Some years ago, you had told about Viruses, and that viruses have vaged a war against human beings. The war between the most primitive and the most evolved! If they suceed, they are more evolved than us? – Dr. Vishwanath K.K, Toranto.

Fantastic cards and thought inspiring text! How do you manage time? – Asha Parikkar, Mumbai

Doctor, I have no words to express! I wanted to tell you from very long time. Please make small videos of all your Wildlife Messages (there may be more than 30) and flood them in Youtube. Let it be in English, please! – Dr. Shekar Kapoor, Kapoor’s Hospital, Chandigarh.

Nature and you are synonymous! Both inspire mind and soul! – Mascarhans Fernandes, Vijayanagar 2nd stage, Mysore

I was proud that humans were the most evolved. It was “vertical thinking”. You have given a new angle and that is “lateral thinking”! – Mamatha Baig, Kolkota.

In one of your earlier letters, you told that human beings are the most vulnerable animals. Not all of us will go extinct. Homo sapiens will survive in those remote corners of the world where civilization has not influenced life! – Muralidhara Valmiki, San Francisco.

Dr. S. V. Narasimhan said...

This is what called, Out of the Box thinking! Thank you for the beautiful watercolour cards. - Sharat Kumar, Kozhikode

Some years ago, you had told about Viruses, and that viruses have vaged a war against human beings. The war between the most primitive and the most evolved! If they suceed, they are more evolved than us? – Dr. Vishwanath K.K, Toranto.

Fantastic cards and thought inspiring text! How do you manage time? – Asha Parikkar, Mumbai

Doctor, I have no words to express! I wanted to tell you from very long time. Please make small videos of all your Wildlife Messages (there may be more than 30) and flood them in Youtube. Let it be in English, please! – Dr. Shekar Kapoor, Kapoor’s Hospital, Chandigarh.

Nature and you are synonymous! Both inspire mind and soul! – Mascarhans Fernandes, Vijayanagar 2nd stage, Mysore

I was proud that humans were the most evolved. It was “vertical thinking”. You have given a new angle and that is “lateral thinking”! – Mamatha Baig, Kolkota.

In one of your earlier letters, you told that human beings are the most vulnerable animals. Not all of us will go extinct. Homo sapiens will survive in those remote corners of the world where civilization has not influenced life! – Muralidhara Valmiki, San Francisco.

I feel that you always think in terms of Indian philosophy, where Science and Religion are the same. World is looking at us! – Dr. Shubhakar K. Y, VVPuram, Bengaluru

Congrats Narasimha, for your yeomin service for wildlife and nature conservation especially among younger generation. I felt that Kodagu is having unusual landslides and floods because of over exploitation of land and unscrupulous building of resots to make money. Nature extorts her revenge as happened in Kerala and Uttaranchal. Hope the young people will preserve Nature in Kodagu. – Dr. C.N.Dinesh, MMC Classmate, Bangalore

Dear Narasimha, I know you from school days and appreciate your 37 years long commitment, which is a record! I have a funny feeling that you have also evolved in your art and thoughts! – Satish Kumar, San Jose, Costa Rica

Congratulations and thanks for your contributions in raising awareness on wildlife. - Dr. Sriprakash Mokshagundam, Prospect, Ketucky.

Nature’s wonders really leave one wonderstruck! We have many things to learn from it. No animal or plant is inferior or placed low. And how we humans ill-treat nature! – Savita Krishna, Indira Nagar, Bengaluru

Your commitment and love for nature should inspire the younger generation. They are the future owners of this poluted planet. Your message cards and letters are always on display on special display board in our school. – Satyanarayana, St. Thomas English School, Hubli

Not only religion, Science is also Human-centred! Your thought should be an eye-operner to all scientists! – Ameen Ahmed, Naturalist, Chitradurga