Wednesday, February 25, 2026

ಭಾರತೀಯರು

 ಭಾರತೀಯರು

ನಮ್ಮ ದೇಶ ಭಾರತ. ನಾವೆಲ್ಲ ಭಾರತೀಯರು.

ಭಾರತ ದೇಶದ ನಾಗರಿಕತೆ, ಸಂಸ್ಕೃತಿ, ಸಂಪ್ರದಾಯಗಳು ವಿಶಿಷ್ಟ.

ಭಾರತದ ವೇಷ-ಭೂಷಣ, ಆಹಾರ-ವಿಹಾರ ಎಲ್ಲವೂ ವಿಶಿಷ್ಟ.

ಭಾರತದ ಬಗ್ಗೆ ನಾವೆಲ್ಲರೂ ಅಭಿಮಾನದಿಂದ, ಗರ್ವ ಪಡಬೇಕು.

ಹಿಂದೂ, ಹಿಂದೂಸ್ತಾನ ಮುಂತಾದ ಪದಗಳು ತೀರಾ ಇತ್ತೀಚೆಗೆ ಹುಟ್ಟಿಕೊಂಡ ಪದಗಳು.

ಅದು ದೇಶದ ಜನರಲ್ಲಿ ಅನವಶ್ಯಕವಾಗಿ ಒಡಕು ಮೂಡಿಸುತ್ತಿದೆ.

ಈಗಾಗಲೆ ಹಿಂದೂಗಳು ಜೈನರು, ಸಿಖ್ಖರು, ದಲಿತರು, ಹಿಂದುಳಿದವರು, ಪರಿಶಿಷ್ಟರು ಮುಂತಾದವರಿದ ಬೇರೆಯಾಗಿದ್ದಾರೆ.

ಭಾರತದ ಕೆಲವು ಸಂಘ, ಸಂಘಟನೆ ಹಾಗೂ ಸಂಸ್ಥೆಗಳು ಹಿಂದೂ ಎಂಬ ಪದವನ್ನು ವಿಶೇಷವಾಗಿ ಬಳಸುತ್ತಿವೆ.

ಆ ಸಂಘಟನೆ-ಸಂಸ್ಥೆಗಳ ಗುರಿಯೂ ಭಾರತೀಯರನ್ನು ಒಗ್ಗೂಡಿಸುವುದೇ ಆಗಿದೆ.

ಹಿಂದೂಗಳನ್ನು ಒಂದು ನಿರ್ದಿಷ್ಟ ರಾಜಕೀಯ ಪಕ್ಷದೊಂದಿಗೆ ಗುರುತಿಸಲಾಗುತ್ತಿದೆ.

ಹಾಗಾಗಿ ನಾವು ನಮ್ಮ ವ್ಯವಹಾರಗಳಲ್ಲಿ ಹಿಂದೂ ಎಂಬ ಪದಬಳಕೆಯನ್ನು ಕೈ ಬಿಡೋಣ.

ನಮ್ಮನ್ನು ನಾವು ಭಾರತೀಯರೆಂದೇ ಕರೆದುಕೊಳ್ಳೋಣ.

ಹಾಗಾದಲ್ಲಿ ಭಾರತದಲ್ಲಿ ವಾಸಿಸುವ ಎಲ್ಲರಲ್ಲೂ ಭಾರತೀಯತೆಯ ಬಗ್ಗೆ ಹೆಮ್ಮೆ ಮೂಡುತ್ತದೆ!

_ ಡಾ| ನರಸಿಂಹನ್

No comments: