Wednesday, February 25, 2026

ಪ್ರಕೃತಿಯ ಸಮತೋಲನದಲ್ಲಿ ಸೂಕ್ಷ್ಮಜೀವಿಗಳ ಪಾತ್ರ

 ಪ್ರಕೃತಿಯ ಸಮತೋಲನದಲ್ಲಿ ಸೂಕ್ಷ್ಮಜೀವಿಗಳ ಪಾತ್ರ

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು?                                                                                                                                                        ಬಗೆದು ಬಿಡಿಸುವರಾರು ಸೋಜಿಗವನಿದನು?                                                                                                                                                      ಜಗವ ನಿರವಿಸಿದ ಕೈಯೊಂದಾದೊಡೇಕಿAತು                                                                                                                                               ಬಗೆ ಬಗೆಯ ಜೀವಗತಿ? – ಮಂಕುತಿಮ್ಮ

ಈ ಜಗತ್ತನ್ನು ಒಂದೇ ಶಕ್ತಿ ನಿರ್ಮಿಸಿದೆ ಎಂದಾದರೆ ಭೂಮಿಯ ಮೇಲೆ ಇಷ್ಟೊದು ವಿಧ ವಿಧವಾದ ಜೀವಿಗಳು ಯಾಕೆ ಬೇಕು ಎಂದು ಕನ್ನಡದ ಕಗ್ಗದಲ್ಲಿ ಡಿವಿ ಗುಂಡಪ್ಪನವರು ಕೇಳುತ್ತಾರೆ. 

ಭೂಮಿಯ ಮೇಲೆ ಜೀವವುದಿಸಿ ಸುಮಾರು ೪೦೦ ಕೋಟಿ ವರ್ಷಗಳಾಗಿª.ೆ ಈ ಸುಧೀರ್ಘ ಕಾಲಮಾನದಲ್ಲಿ ಕೋಟ್ಯಂತರ ಜೀವಿಗಳು ವಿಕಾಸ ಹೊಂದಿವೆ. ವಿಜ್ಞಾನಿಗಳ ಪ್ರಕಾರ ಅವುಗಳಲ್ಲಿ ಉಳಿದಿರುವುದು ಕೇವಲ ಶೇಕಡ ಒಂದರಷ್ಟು ಮಾತ್ರ. ಉಳಿದ ಶೇಕಡ ತೊಂಬತ್ತೊAಬತ್ತು ಜೀವಿಗಳು ನಶಿಸಿಹೋಗಿವೆ ಎಂದರ್ಥ. ಸಸ್ಯಗಳಾಗಲಿ, ಪ್ರಾಣಿಗಳಾಗಲಿ, ಜಲಜೀವಿಗಳಾಗಲಿ, ಈಗ ಜಗತ್ತಿನಲ್ಲಿರುವ ಜೀವರಾಶಿಯಲ್ಲಿಯೇ ಸುಮಾರು ಮೂರುವರೆ ಲಕ್ಷ ಪ್ರಭೇದಗಳ ಜೀವ ಜೀವಿಗಳು ಇವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. 

ಒಂದು ಜೀವಿಗೆ ತನ್ನ ಜೀವಿತಾವಧಿಯಲ್ಲಿ ಅದರ ವಾಸಕ್ಕಾಗಲಿ, ಬೆಳವಣಿಗೆಗಾಗಲಿ, ತಿನ್ನಲು ಆಹಾರ, ಆವಾಸ ಮತ್ತು ಉಸಿರಾಡಲು ಗಾಳಿ ಇವೆಲ್ಲವೂ ಬೇಕು. ಇವೆಲ್ಲವೂ ಆ ಜೀವಿಗೆ ಭೂಮಿಯ ಮೇಲಿರುವ ವಾತಾವರಣ ಹಾಗೂ ನೆಲದಿಂದ ಮತ್ತು ಜಲದಿಂದ ದೊರಕುತ್ತದೆ. ಇವುಗಳಲ್ಲಿ ಆ ಜೀವಿಯ ಉಳಿವಿಗೆ ಬೇಕಾದಂತಹ ನೀರು, ಆಮ್ಲಜನಕ, ಸಾರಜನಕ, ಜಲಜನಕ ಇವೆಲ್ಲವೂ ನಿರಂತರವಾಗಿ ಪೂರೈಕೆ ಆಗುತ್ತಲೇ ಇರಬೇಕೆಂದಾಯಿತು. ಹೀಗೆ ನಿರಂತರವಾಗಿ, ಒಂದೇ ಸಮನೆ ಎಲ್ಲಾ ಜೀವದ್ರವ್ಯಗಳು ಪೂರೈಕೆ ಆಗಬೇಕಾದಲ್ಲಿ ಒಂದೊAದು ದ್ರವ್ಯವು ಖರ್ಚಾದ ಹಾಗೆಲ್ಲ ಅದು ಪುನಃ ಪುನಃ ನೆಲ, ಜಲ, ಗಾಳಿಯಲ್ಲಿ ಹಿಂತಿರುಗಿಸುವ ಕೆಲಸ ಜೊತೆಯಲ್ಲಿಯೇ ನಡೆಯತ್ತ ಇರಬೇಕಾಗುತ್ತÀ್ತದೆ. 

ಉದಾಹರಣೆಗೆ ಆಮ್ಲಜನಕವನ್ನು ತೆಗೆದುಕೊಳ್ಳೋಣ: ಆಮ್ಲಜನಕ, ಎಲ್ಲ ಜೀವಿಗಳಿಗೂ ಶಕ್ತಿಯ ಇಂಧನ. ಪ್ರಕೃತಿಯಲ್ಲಿ ಆಮ್ಲಜನಕಕ್ಕೆ ಒಂದು ಚಕ್ರ ಇದೆ. ಪ್ರತಿಯೊಂದು ಜೀವಿಯೂ ಉಸಿರಾಡುವುದರ ಮೂಲಕ ನೀರಿನಲ್ಲಿ ಮತ್ತು ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸಿಕೊಳ್ಳುತ್ತವೆ. ಹೀಗೆ ನೀರು-ಗಾಳಿಯಲ್ಲಿರುವ ಎಲ್ಲಾ ಆಮ್ಲಜನಕವನ್ನೂ ಇಡೀ ಜೀವಸಂಕುಲ ಬಳಸಿಕೊಂಡು ಖರ್ಚಾಗಿ ಹೋದರೆ, ಒಂದು ದಿನ ಆಮ್ಲಜನಕವು ಖಾಲಿಯಾಗಿ ಜೀವನವೇ ಸ್ತಬ್ಧವಾಗಿ ಬಿಡುತ್ತದೆ, ಅಲ್ಲವೇ? ಈ ಆಮ್ಲಜನಕವನ್ನು ವಾತಾವರಣಕ್ಕೆ ಮತ್ತು ನೀರಿಗೆ ಸೇರಿಸಬೇಕಾದಲ್ಲಿ ಅದು ಭೂಮಿಯ ಮೇಲೆ ಪುನಃ ತಯಾರಾಗಬೇಕು. ಈ ಪ್ರಮುಖ ಕೆಲಸವನ್ನು ಭೂಮಿಯ ಮೇಲಿರುವ ಎಲ್ಲಾ ಹಸಿರು ಮರಗಿಡಗಳು ಮಾಡುತ್ತವೆ ಎಂದು ನಮಗೆಲ್ಲ ಗೊತ್ತಿದೆ. 

ಇದೇ ರೀತಿ ಜಲಚಕ್ರ, ಇಂಗಾಲದ ಚಕ್ರ, ಆಹಾರದ ಚಕ್ರಗಳಿವೆ. ಅಲ್ಲದೆ, ಭೂಮಿಯ ಮೇಲೆ ಎಲ್ಲಾ ದ್ರವ್ಯಗಳಿಗೂ ಅವುಗಳÀದ್ದೇ ಆದಂತಹ ಚಕ್ರಗಳಿವೆ. ಜೀವಿಗಳುಳೀ ಎಲ್ಲ ದ್ರವ್ಯಗಳಲ್ಲಿ ಪ್ರತಿಯೊಂದÀನ್ನು ಬಳಸಿಕೊಂಡು ಹೋದಂತೆಲ್ಲ ಅವುಗಳನ್ನು ಅಲ್ಲಿಗೆ ಮರುಪೂರೈಕೆ ಮಾಡುವಂತಹ ಪ್ರಕ್ರಿಯೆಯು ನಿರಂತರವಾಗಿ ಭೂಮಿಯ ಮೇಲೆ ಜೊತೆಜೊತೆಯಲ್ಲಿಯೇ ಸಾಗುತ್ತಾ ಬಂದಿದೆ. ಈ ಬೃಹತ್ ಕಾರ್ಯದಲ್ಲಿ ವಿವಿಧ ಜಾತಿಗಳ ಸಸ್ಯಗಳು, ಜೀವಿಗಳು ತಮ್ಮ ಜೀವಿತಾವಧಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪರಿಸರಕ್ಕೆ ತಮ್ಮ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತವೆÉ ಹಾಗೂ ಆ ಮೂಲಕ ಪರಿಸರದÀ ಸಮತೋಲನವನ್ನು ಕಾಪಾಡಿಕೊಂಡು ಬಂದಿವೆ. ಈ ಸಮತೋಲನ ಏನುಂಟೋ ಅದನ್ನು ಒಂದಿಷ್ಟೂ ಏರುಪೇರು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಅವುಗಳ ಮೇಲಿದೆ!

ಅದಕ್ಕಾಗಿಯೇ ಈ ಭೂಮಿಯ ಮೇಲೆ ಇಷ್ಟೊಂದು ಜೀವರಾಶಿಗಳಿವೆ; ಅಷ್ಟೊಂದು ಪ್ರಭೇದಗಳಿವೆ ಮತ್ತು ಪ್ರತಿಯೊಂದು ಪ್ರಭೇದಲ್ಲೂ ಆಯಾ ಜೀವಿಯ ಒಟ್ಟು ಸಂಖ್ಯೆ, ಇವೆಲ್ಲವೂ ಸ್ವಾಭಾವಿಕವಾಗಿಯೇ ಸಮಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವ ಒಂದು ಬೃಹತ್ ವ್ಯವಸ್ಥೆ ಇದೆ. 

ಪರಿಸರ ಸಮತೋಲನದಲ್ಲಿ ಸೂಕ್ಷ್ಮಾಣು ಜೀವಿಗಳ ಪಾತ್ರ ಏನು ಎನ್ನುವುದನ್ನು ನೋಡೋಣ. ಯಾವ ಜೀವಿಯು ನಮ್ಮ ಬರಿ ಕಣ್ಣಿಗೆ ಕಾಣುವುದಿಲ್ಲವೋ ಆ ಜೀವಿಯನ್ನು ನಾವು ಸೂಕ್ಷ್ಮಾಣು ಜೀವಿ ಎಂದು ಕರೆಯುತ್ತೇವೆ. ಅವುಗಳ ಕೆಲಸ ಕಾರ್ಯಗಳು ಕೂಡ ನಮ್ಮ ಅರಿವಿಗೆ ಬರುವುದಿಲ್ಲ. ಈ ಸೂಕ್ಷ್ಮಾಣು ಜೀವಿಗಳು ಈ ಭೂಮಿಗೆ ನೀಡುತ್ತಿರುವ ಕೊಡುಗೆ ಅಸಾಮಾನ್ಯ, ಅನರ್ಘ್ಯ, ಅದ್ವಿತೀಯ ಮತ್ತು ಅನಂತ! ಹಾಗೂ ಇತರ ಯಾವ ಜೀವಿಯು ಮಾಡಲೂ ಅಸಾಧ್ಯ! ಭೂಮಿಯ ಮೇಲೆ ಸೂಕ್ಷ್ಮಾಣು ಜೀವಿಗಳು ಇಲ್ಲದೆ ಹೋಗಿದ್ದರೆ ಇಡೀ ಭೂಮಿಯ ಮೇಲಿನ ಜೀವನವೇ ಏರುಪೇರಾಗಿ ಬಿಡುತ್ತಿತ್ತು!

ಸೂಕ್ಷ್ಮಾಣು ಜೀವಿ ಎಂದು ಹೇಳಿದರೆ, ನಮ್ಮ ಮನಸ್ಸಿಗೆ ಮೊದಲಿಗೆ ಬರುವುದು ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮುಂತಾದ ಏಕಾಣು ಜೀವಿಗಳು. ಇವು ನಮ್ಮ ಕಣ್ಣಿಗೆ ಕಾಣದಿದ್ದರೂ ಕೂಡ ಅವುಗಳ ಸಹಾಯ ದಲ್ಲಿ ಇದ್ದೇ ಇರುತ್ತದೆ ಜನಸಾಮಾನ್ಯರಿಗೆ ಬ್ಯಾಕ್ಟೀರಿಯಾ ಅಂತ ಹೇಳಿದರೆ ಭಾವನೆ ಕ್ರಿಮಿಗಳು ಎಂದೇ ಭಾವನೆ ಬ್ಯಾಕ್ಟೀರಿಯಗಳು ನಾವು ಬಳಸುವ ಆಹಾರ ಬಟ್ಟೆ ಬರೆ ನೆಲ ಗೂಡೆ ಸುತ್ತಮುತ್ತಲ ಎಲ್ಲ ವಸ್ತುಗಳು ನಮ್ಮ ದೇಹದ ಮೇಲೆ ಚರ್ಮದ ಮೇಲೆ ಒಳಗೆ ಹೀಗೆ ಸರ್ವಾಂತರ್ಯಾಮಿಯಾಗಿ ಇರುತ್ತವೆ ಅಷ್ಟೇ ಅಲ್ಲ ಕೆಲವು ಬ್ಯಾಕ್ಟೀರಿಯಾ ಗಳು ಕುದಿಯುವ ನೀರಿನಲ್ಲಿ ಹಿಮದ ನೆಲದಲ್ಲಿ ಅಗ್ನಿ ಪರ್ವತದಗಳಲ್ಲಿ ಆಮ್ಲೀಯ ಅಗ್ನಿ ಪರ್ವತಗಳಲ್ಲಿ ಆದರೆ ಭೂಮಿಯ ಮೇಲೆ ಇರುವ ಮುಟ್ಟು ಅಂದರೆ ಒಂದಲ್ಲ ಎರಡಲ್ಲ ಒಂದೂವರೆ ಲಕ್ಷ ಪ್ರಭೇದಗಳ ಬ್ಯಾಕ್ಟೀರಿಯಾಗಳಲ್ಲಿ ನಮ್ಮ ದೇಹದ ಮೇಲೆ ರೋಗವನ್ನುಂಟು ಮಾಡುವ ಇವತ್ತು ನಾವು ಹೇಳಬಹುದು ಮನುಷ್ಯನ ರೋಗಗಳಲ್ಲಿ ಹೆಚ್ಚು ರೋಗಗಳನ್ನು ಉಂಟುಮಾಡುವAತಹ ಬ್ಯಾಕ್ಟೀರಿಯಾ ಗಳು ಆದರೂ ಅವುಗಳ ಸಂಖ್ಯೆ ಬಹಳ ಕಡಿಮೆ ಕಾಲರ ಆಮಶಂಕೆ ಅಂದ್ರೆ ಡಿಸೈನ್ ಟಿಬಿ ಕುಷ್ಟರೋಗ ಕ್ಷಯ ನಿಮೋನಿಯಾ ಅದಕ್ಕಿಂತ ಹೆಚ್ಚೇನಿಲ್ಲ ಸುಮಾರು ೯೭ ರಷ್ಟು ಬ್ಯಾಕ್ಟೀರಿಯಾ ಗಳು ಮನುಷ್ಯನ ಸಂಪರ್ಕಕ್ಕೆ ಬರದಂತ ಬ್ಯಾಕ್ಟೀರಿಯಾಗಳು ಹೆಚ್ಚಿನ ನಮಗೆ ನಮಗೆ ತೊಂದರೆ ಮಾಡದೇ ಇರುತ್ತವೆ ಅದಕ್ಕಿಂತ ಮುಖ್ಯವಾಗಿ ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುವಂತಹ ಬ್ಯಾಕ್ಟೀರಿಯಾ ಗಳು ಇವೆ ಅಂದರೆ ನಿಮಗೆ ಆಶ್ಚರ್ಯ ಆಗಬಹುದು ಎಲ್ಲ ಸೂಕ್ಷ್ಮಗಳು ತಮ್ಮ ಪರಿಸರಕ್ಕೆ ಒಳ್ಳೆಯದನ್ನೇ ಮಾಡುತ್ತವೆ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿದೆ ಮೊದಲನೆಯದಾಗಿ ನಮ್ಮ ದೇಹದ ಸಣ್ಣ ಕರುಳಿನಲ್ಲಿ ವಾಸ ಮಾಡುವಂತಹ ಬ್ಯಾಕ್ಟೀರಿಯಾ ಗಳು ಮತ್ತು ವೈರಸ್ ಗಳು ಇವು ಹಲವಾರು ಹೆಣ್ಣುಮಗಳು ಎಂಜಾಯ್ ಅಂತ ಕರೀತೀವಲ್ಲ ಸಾಕಷ್ಟು ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಇರುವುದರಿಂದ ಇತರ ಹಾನಿಕಾರಕ ಬ್ಯಾಕ್ಟೀರಿಯಾ ಗಳು ನಮ್ಮ ದೇಹದಲ್ಲಿ ಬೆಳೆಯದಂತೆ ಪ್ರತಿರೋಧವನ್ನ ಉಂಟು ಮಾಡುತ್ತವೆ ಅಲ್ಲದೇ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತದೆ ಅಲ್ಲದೆ ಎಷ್ಟೋ ಅಪಾಯಕಾರಿ ರಾಸಾಯನಿಕಗಳನ್ನ ತಾವೇ ಹೀರಿಕೊಂಡು ನಿಷ್ಕ್ರಿಯಗೊಳಿಸಿ ದೇಹದ ಆರೋಗ್ಯವನ್ನು ಕಾಪಾಡ್ತವೆ. ಇದು ಮೊದಲನೇದು ಈ ಏಕಾಣು ಜೀವಿಗಳ ಮತ್ತೊಂದು ವಿಶೇಷ ಏನಂತ ಅಂದ್ರೆ ಅವುಗಳ ಸಂಖ್ಯೆ ಇದರ ಎಲ್ಲ ಜೀವಿಗಳನ್ನು ಮೀರಿಸುತ್ತದೆ ಅಭಿವೃದ್ಧಿಗೊಳ್ಳುವ ವೇಗ ಇತರ ಜೀವಿಗಳಿಗಿಂತ ಬಹಳ ಹೆಚ್ಚು ಅಂದರೆ ನಿಮ್ಮನ್ನ ದಂಗುಬಡಿಸುತ್ತದೆ ಪ್ರತಿ ೨೦ ನಿಮಿಷಗಳಿಗೆ ಒಂದು ಸಾರಿ ಒಂದು ಬ್ಯಾಕ್ಟೀರಿಯಾ ಎರಡು ಆಗುತ್ತದೆ ಅಂದರೆ ಒಂದು ದಿವಸದಲ್ಲಿ ಒಂದು ಬ್ಯಾಕ್ಟೀರಿಯಾ ಒಂದಿದ್ದದ್ದು ಎರಡು ನಾಲ್ಕು ಎಂಟು ೧೬ ೩೨ ೬೪ ೧೨೮ ಈ ತರ ಬೆಳೆದು ಸುಮಾರು ೭೨ ಬಾರಿ ಒಂದು ವಿಂಗಡಣೆಯಾದಲ್ಲಿ ದಿನದ ಕೊನೆಗೆ ಅವುಗಳ ಸಂಖ್ಯೆ ಎಣಿಸಲು ನಿಮಗೆ ಸಾಧ್ಯವಾಗುವುದಿಲ್ಲ ಇನ್ನು ಎರಡನೆಯದಾಗಿ ಆಮ್ಲಜನಕ ತಯಾರಿಕೆ ಮತ್ತು ಪುನಃ ಅವುಗಳನ್ನು ವಾತಾವರಣಕ್ಕೆ ಸೇರಿಸುವಂತಹ ಕೆಲಸ ಭೂಮಿಯ ಮೇಲೆ ಹಸಿರು ಹಸಿರು ಜೀವಿಗಳು ಅಂದ್ರೆ ಸಸ್ಯಗಳು ವಿಕಾಸ ಹೊಂದುವ ಸುಮಾರು ಸುಮಾರು ೧೮೦ ಕೋಟಿ ವರ್ಷಕ್ಕೂ ಮುಂಚೆ ಈ ಕೆಲಸವನ್ನು ಬ್ಯಾಕ್ಟೀರಿಯಗಳು ಮಾಡ್ತಾ ಬಂದಿವೆ ಅದರಲ್ಲೂ ಭೂಮಿಯಲ್ಲಿ ಐದನೇ ನಾಲ್ಕು ಭಾಗ ನೀರಿರುವುದರಿಂದ ನಮಗೆ ಅದು ಗೊತ್ತೇ ಆಗುವುದಿಲ್ಲ ಹಸಿರು ಸಸ್ಯಗಳು ನೀರಿನಲ್ಲಿ ಇಲ್ಲದೆ ಇರುವುದರಿಂದ ಆ ಕೆಲಸವನ್ನು ಬ್ಯಾಕ್ಟೀರಿಯಾಗಳೇ ಮಾಡ್ತಾ ಇದೆ ೪೦೦ ಕೋಟಿ ವರ್ಷಗಳಲ್ಲಿ ಸುಮಾರು ೫೦ರಷ್ಟು ಶೇಕಡ ೫೦ರಷ್ಟು ಆಮ್ಲಜನಕವನ್ನು ಬ್ಯಾಕ್ಟೀರಿಯಾಗಳ ಮಾಡಿಕೊಂಡು ಬಂದಿವೆ ಮೂರನೆಯದಾಗಿ ಗಾಳಿಯಲ್ಲಿ ವ್ಯಾಪಕವಾಗಿರುವಂತಹ ಸಾರಜನಕವನ್ನು ಭೂಮಿಗೆ ತಂದು ಕೊಡುವಂತ ಭೂಮಿಗೆ ಅದನ್ನು ಫಿಕ್ಸಿಂಗ್ ಭೂಮಿಗೆ ಸೇರ್ಪಡೆಗೊಳಿಸುವ ಕೆಲಸ ಹೀಗೆ ಭೂಮಿಗೆ ಸೇರಿದ ಸಾರ್ವಜನಿಕವನ್ನೇ ಎಲ್ಲ ಸಸ್ಯಗಳು ಬಳಸಿಕೊಂಡು ಸಸ್ಯ ಹರಿಜೀವಿಗಳು ತಿಂದು ಅವುಗಳ ಮೂಲಕ ಸಾರ್ವಜನಿಕ ವನ್ನು ಹೀರಿಕೊಂಡು ತಮ್ಮ ದೇಹವನ್ನು ಬೆಳೆಯುತ್ತದೆ ಭೂಮಿಯ ಮೇಲೆ ಮತ್ತು ಸಮುದ್ರದಲ್ಲಿ ವಾಸಿಸುವ ಎಲ್ಲಾ ಜೀವಿಗಳಿಗೂ ನೇರವಾಗಿ ಅಥವಾ ಪರೋಕ್ಷವಾಗಿ ಸಸ್ಯಜನ ಆಹಾರವೇ ಮುಖ್ಯ ಈ ಸಸ್ಯಗಳಿಗೆ ಈ ಜೀವಿಗಳಿಗೆ ಬೇಕಾದಂತ ಸಾರಜನಕವನ್ನು ಪೂರೈಸುತ್ತದೆ ಅಂದರೆ ಬ್ಯಾಕ್ಟೀರಿಯಾ ಗಳು ಜೀವಿಗಳ ಅಸ್ತಿತ್ವಕ್ಕೂ ಕೂಡ ಅತ್ಯವಶ್ಯಕ ಇನ್ನೂ ನಾಲ್ಕನೆಯದಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮತ್ತೊಂದು ಕೆಲಸ ಇದು ಪ್ರಪಂಚದಲ್ಲಿ ಸತ್ತಂತಹ ನಿರ್ಜೀವ ಹೊಂದAತ ಎಲ್ಲ ಜೀವಿಗಳು ಇರಬಹುದು ಪ್ರಾಣಿಗಳಿರಬಹುದು ಇವೆಲ್ಲವನ್ನು ಕಳುಹಿಸುವ ಕೆಲಸ ಕೃತಕರಿಸುವಂತಹ ಕೆಲಸ ವಿಘಟಿಸುವ ಬೇರ್ಪಡಿಸುವ ಬಳಸಲಿಕ್ಕೆ ಸಾಧ್ಯವಾಗುವಂತಹ ಕೆಲಸ ಒಂದೇ ಮಾತಿನಲ್ಲಿ ಹೇಳುವುದಾದರೆ ಕೊಳೆಯುವ ಕೆಲಸ ಸಾರ್ ಜನಕ ಇಂಗಳದ ಡೈಯಾಕ್ಸೈಡ್ ಇವೆಲ್ಲವನ್ನು ವಾತಾವರಣಕ್ಕೆ ಹಿಂತಿರುಗಿ ಸೇರಿಸುವ ಕೆಲಸ ಅದಲ್ಲದೆ ವಿವಿಧಗಳು ಮತ್ತು ಬೇರೆ ಬೇರೆ ಲವಣಗಳು ಇವುಗಳನೆಲ್ಲ ಮಣ್ಣಿಗೆ ಸಾಗರದ ನೀರಿಗೆ ಸೇರ್ಪಡೆಗೊಳಿಸುವ ಕೆಲಸ ಬಾಯಿ ಮಾತಿನಲ್ಲಿ ನಾವು ಸುಲಭವಾಗಿ ಕೊಳೆತು ಹೋಗುತ್ತದೆ ಎಂದು ಹೇಳುತ್ತೇವೆ. ಸತ್ತ ಜೀವಿಗಳೆಲ್ಲ ಕೊಳೆದೆ ಹಾಗೆ ಉಳಿದು ಹೋಗಿದ್ದರೆ ಅದರಲ್ಲಿಯೂ ಸಪ್ತ ಪ್ರಾಣಿಗಳು ಹಾಗೆ ಉಳಿದು ಹೋಗಿದ್ದರೆ ಪ್ರಪಂಚ ಹೇಗಿರಬಹುದು ಈ ಎಲ್ಲ ಜೀವಗಳನ್ನು ಸುಲಭವಾಗಿ ಸಸ್ಯಗಳು ಹೀರಿಕೊಳ್ಳುವ ಬೆಳೆಯುವ ಕಾರಣ ಸೂಕ್ಷ್ಮಾಣು ಜೀವಿಗಳು ಇಲ್ಲದಿದ್ದರೆ ಅಸಾಧ್ಯವಾದಂತಹ ಪರಿಸ್ಥಿತಿ ಬರುತ್ತಿತ್ತು ಹಾಗಾಗಿ ಸೂಕ್ಷ್ಮಾಣು ಜೀವಿಗಳಿಗೂ ಸೂಕ್ಷ್ಮಾಣು ಜೀವಿಗಳು ಈ ಭೂಮಿಯ ಮೇಲೆ ಇಲ್ಲದಿದ್ದಲ್ಲಿ ಪ್ರತಿಯೊಂದು ಜೀವಿಯು ಅಪಾಯವನ್ನು ಎದುರಿಸುತ್ತದೆ ಸೂತ್ರಗಳೇ ಪ್ರಕೃತಿಯಲ್ಲಿ ಪ್ರತಿ ಎಲ್ಲ ಕಾರ್ಯಗಳು ತಾನೇ ತಾನಾಗಿ ನಡೆದುಕೊಂಡು ಹೋಗ್ತಾ ಇವೆ ಎಲ್ಲ ಜೀವಿಗಳು ಒಂದಕ್ಕೊAದು ಪೂರಕವಾಗಿ ಪ್ರೇರಕವಾಗಿ ಆಧಾರ ಸ್ತಂಭಗಳಾಗಿ ನಿಂತು ಆಧಾರ ಸ್ತಂಭಗಳಾಗಿ ಈ ಅತ್ಯಂತ ದೊಡ್ಡ ಜೀವ ಜಾಲವನ್ನೇ ಸೃಷ್ಟಿಸಿಕೊಂಡು ಕೊಂಡಿದೆ ಇದನ್ನೇ ನಾವು ಜೀವವೈವಿಧ್ಯತೆ ಈ ವಿಷಯದ ಪ್ರಾಮುಖ್ಯತೆ ಏನು ಅಂತ ಹೇಳಿದ್ರೆ ಹಸಿರು ಕ್ರಾಂತಿಯ ನೆಪದಲ್ಲಿ ನೆಲ ಜಲ ಗಾಳಿಯನ್ನು ಕಲುಷಿತಗೊಳಿಸುತ್ತಾ ಬಂದಿದೆ ಈ ಕೆಲಸವನ್ನ ನಾವು ಅನಾವಶ್ಯಕವಾಗಿ ನಮ್ಮ ಕೈ ಹಾಕಿ ಹೆಚ್ಚು ಹೆಚ್ಚು ಆಹಾರವನ್ನ ಪದಾರ್ಥಗಳನ್ನು ಬೆಳೆಸುವ ಒಂದು ಹುಚ್ಚಿನಿಂದಾಗಿ ಕೃತಕ ಗೊಬ್ಬರಗಳನ್ನ ಕೀಟನಾಶಕಗಳನ್ನ ಹಾಕಿ ರಾಸಾಯನಿಕ ಗೊಬ್ಬರಗಳನ್ನ ಹಾಕಿ ಜೀವಜಾಲದ ವಿವಿಧ ಪಾತ್ರಧಾರಿಗಳನ್ನು ನಾವು ಕಡೆಗಣಿಸುತ್ತಿದ್ದೇವೆ ಇದರಿಂದಾಗಿ ಇದರಿಂದ ಬೆಳೆಯುವಂತಹ ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಬಹಳ ಕುಂಟಿತವಾಗಿ ಗಳಿಂದ ನಾಶವಾಗುತ್ತದೆ ವಿವಿಧ ರೋಗಗಳಿಗೆ ಎಡೆಯಾಗುತ್ತದೆ ಅವುಗಳನ್ನು ತಡೆಗಟ್ಟಲಿಕ್ಕಾಗಿ ನಾವು ವಿವಿಧ ರೀತಿಯ ರಾಸಾಯನಿಕ ಕೀಟನಾಶಕಗಳನ್ನು ಬಳಸುತ್ತಿದ್ದೇವೆ, ಇದರಿಂದಲೂ ಕೂಡ ಕೀಟಗಳು ಮತ್ತು ಸೂಕ್ಷ್ಮಾಣು ಜೀವಿಗಳು ಕೀಟಗಳು ಸಾಯುವುದರ ಜೊತೆಯಲ್ಲಿ ಭೂಮಿಯಲ್ಲಿರುವ ಸೂಕ್ಷ್ಮಾಣು ಜೀವಿಗಳು ಕೂಡ ನಿರ್ನಾಮವಾಗುತ್ತದೆ ಯಾವ ಮಣ್ಣನ್ನ ನಾವು ನಿರ್ಜೀವಿ ಎಂದು ಕರೆಯುತ್ತೇವೆ ಪರಿಗಣಿಸಲೇಬಾರದು ನಾಲ್ಕಾರು ಇಂಚು ದಪ್ಪದ ಮೇಲ್ಪದರ ಅತ್ಯಂತ ಜೀವಂತವಾದ ಒಂದು ವಸ್ತು ಒಂದು ಗ್ರಾಂ ಮಣ್ಣಿನಲ್ಲಿಯೇ ೩೦ ಲಕ್ಷ ೩೦ ೪೦ ಲಕ್ಷ ಸೂಕ್ಷ್ಮಾಣು ಜೀವಿಗಳು ಇರುತ್ತವೆ ಇವುಗಳನ್ನು ಹೆಚ್ಚಿಸಿ ಸಸ್ಯಗಳನ್ನು ಬೆಳೆಯಲು ನಾವು ಅನುವು ಮಾಡಿಕೊಡಬೇಕು ನೆಲದ ಮೇಲೆ ಬಿದ್ದ ಮರ ಎಲೆಗಳು ಮುಂತಾದ ಜೀವಿಗಳನ್ನು ಕೊಳಸಿ ಮಣ್ಣಿನಲ್ಲಿ ಮಣ್ಣು ಮಾಡುತ್ತದೆ ತೋಟದಲ್ಲಿ ಗಿಡಗಳಿಗೆ ಹೊಲಗದ್ದೆಗಳಿಗೆ ಧಾನ್ಯಗಳಿಗೆ ಬರಿ ಎಂಪಿಕೆ ಗೊಬ್ಬರಗಳನ್ನ ಕೀಟನಾಶಕಗಳನ್ನ ಅಂಗಡಿಗಳಲ್ಲಿ ಪೋಷಕಾಂಶಗಳನ್ನು ಬೆಳೆಸಲು ಸಾಧ್ಯವೇ ಇಲ್ಲ ಇದೊಂದು ಭ್ರಮೆ. ಇದಕ್ಕಾಗಿ ಸಾವಿರಾರು ಕಂಪೆÀನಿಗಳು ಮೋಸ ಮಾಡುತ್ತಿವೆ. ರೈತರು ತಮ್ಮತನವನ್ನು ಮರೆತು ಲೋಭಕೋರ ಕೃತಕ ರಾಸಾಯನಿಕ ತಯಾರಿಸುವ, ಅದನ್ನು ಮಾರುವ ದಂಧೆಯ ವಿಷ ವರ್ತುಲದಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಕೃತಿದತ್ತವಾದ ಸಂಪದ್ಭರಿತವಾದ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಇಂದು ಆಲೋಚನೆ ಮಾಡಬೇಕು. ಕೊನೆಯಲ್ಲಿ ಡಿವಿಜಿಯವರ ಮತ್ತೊಂದು ಮುಕ್ತಕವನ್ನು ಹೇಳಿ ಈ ಲೇಖನÀಕ್ಕೆ ಮುಕ್ತಾಯ ಹೇಳುತ್ತೇನೆ.   

                                                        ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ                                                                                                                                                    ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ |                                                                                                                                                        ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ                                                                                                                                        ನೋಟಕರುಮಾಟಕರೆ – ಮಂಕುತಿಮ್ಮ ||

ಈ ಭೂಮಿಯ ಮೇಲೆ ನಾವು ದೊಡ್ಡ ನಾಟಕವನ್ನು ನೋಡುತ್ತಿದ್ದೇವೆ. ಇಂದಿನ ನಟ ಸತ್ತ ಮೇಲೆ, ಮತ್ತೊಂದು ವೇಷ ಧರಿಸಿ ಮತ್ತೊಂದು ಪಾತ್ರವನ್ನು ಮಾಡುತ್ತಾರೆ. ನಿರಂತರ ಕೌತುಕದಿಂದ ಕೂಡಿರುವ ಈ ಜಗನ್ನಾಟಕವನ್ನು ನೋಡುತ್ತÀ ನೋಡುತ್ತ ಮನುಷ್ಯ ತಾನೂ ಈ ನಾಟಕದಲ್ಲಿ ಒಬ್ಬ ಪಾತ್ರಧಾರಿ ಎನ್ನುವುದನ್ನೇ ಮರೆತುಬಿಟ್ಟಿದ್ದಾನೆ; ತಾನು ಕೂಡ ಈ ಜೀವಜಾಲದ ಒಂದು ಭಾಗ ಎನ್ನುವುದನ್ನು ಮರೆತುಬಿಟ್ಟಿದ್ದಾನೆ!

ಈ ಜೀವ ಜಗತ್ತಿನಲ್ಲಿ ನಡೆಯುತ್ತಿರುವಂತಹ ಪ್ರಕೃತಿ ಸಮತೋಲನ ಕಾರ್ಯದಲ್ಲಿ ತಾನು ಭಾಗವಹಿಸಬೇಕು ಮತ್ತು ಇದರಲ್ಲಿ ತನ್ನ ಹೊಣೆಗಾರಿಕೆಯೂ ಇದೆ ಎನ್ನುವುದನ್ನೂ ಮರೆತಿದ್ದಾನೆ.  ಒಂದು ಮನೋಭಾವ ಬಂದುಬಿಟ್ಟಿದೆ ಆದಷ್ಟು ಬೇಗ ಈ ತಪ್ಪನ್ನು ನಾವು ತಿದ್ದಿಕೊಳ್ಳಬೇಕು ನನಗೆ ಯಾವುದು ನಿಷ್ಪ್ರಯೋಜಕವು ಅದು ಭೂಮಿಗೂ ಬೇಡ ಅಂತ ಹೇಳುವ ಧೋರಣೆ ಮನುಷ್ಯನಿಗೆ ಬಂದುಬಿಟ್ಟಿದೆ ಈ ತಪ್ಪನ್ನು ನಾವು ಆದಷ್ಟು ಬೇಗ ಸರಿ ತಿದ್ದಿಕೊಳ್ಳಬೇಕು. 

ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿAದ, ಸಹಬಾಳ್ವೆ ನಡೆಸುವಂತೆ ಮಾಡೋಣ. 




No comments: