ಪೋಸ್ಟ್ ಕಾರ್ಡುಗಳಿಂದ ಪಕ್ಷಿ ಪುಸ್ತಕದವರೆಗೆ
ಹಕ್ಕಿಗಳು ಸ್ವಾತಂತ್ರ÷್ಯ, ಶಾಂತಿ ಮತ್ತು ಸೌಂದರ್ಯದ ಪ್ರತಿನಿಧಿಗಳು. ಅವು, ಅಪರಿಮಿತ ನೈಸರ್ಗಿಕ ವೈಭವವುಳ್ಳ ಕೊಡಗಿನ ಸೊಬಗನ್ನು ಇಮ್ಮಡಿಗೊಳಿಸಿವೆ. ಕೊಡಗಿನಲ್ಲಿ ಕಂಡುಬರುವ ಪಕ್ಷಿವೈವಿಧ್ಯತೆ ಅಪೂರ್ವ. ಇಲ್ಲಿ ಸುಮಾರು ೩೩೮ ಪ್ರಭೇದದ ಹಕ್ಕಿಗಳನ್ನು ನಾವು ಕಾಣುತ್ತೇವೆ. ಒಂದು ದೇಶದ ಅತಿ ಪುಟ್ಟ ಭೂವಿಸ್ತೀರ್ಣದಲ್ಲಿ ಆ ದೇಶದ ಶೇಕಡ ೨೮ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳು ಮನೆಮಾಡಿವೆ ಎಂದರೆ ಈ ನಾಡಿನ ಉತ್ಕöÈಷ್ಟತೆಯನ್ನು ನಾವು ಮನಗಾಣಬಹುದು. ಕೊಡಗಿನ ಅರಣ್ಯ ಪ್ರದೇಶಗಳಲ್ಲಿ, ಎಸ್ಟೇಟುಗಳಲ್ಲಿ, ಹಣ್ಣು-ಹೂದೋಟಗಳ ನಡುವೆ ಸುತ್ತಾಡುತ್ತಾ, ಪ್ರಕೃತಿಯ ಮಡಿಲಲ್ಲಿ ಚಿಲಿಪಿಲಿಗುಟ್ಟುತ್ತಾ ಹಾರಾಡುವ ಹಕ್ಕಿಗಳನ್ನು ನೋಡುವುದು, ಮನಸ್ಸಿಗೆ ಅನಿರ್ವಚನೀಯ ಆನಂದವನ್ನು ನೀಡುತ್ತದೆ!
೧೯೮೩. ನನ್ನ ಪಕ್ಷಿವೀಕ್ಷಣೆಯ ಹವ್ಯಾಸ ಸುಮಾರು ೩೮ ವರ್ಷ ಹಿಂದಿನದ್ದು. ವಿರಾಜಪೇಟೆಯಲ್ಲಿ ವಕೀಲರಾಗಿದ್ದ ಶ್ರೀ ಪ್ರಮೋದ್ ನನ್ನ ಬಾಲ್ಯ ಸ್ನೇಹಿತ ಮತ್ತು ಸಹಪಾಠಿ. ಅವರ ಕಕ್ಷಿದಾರರಾಗಿದ್ದ ಶ್ರೀ ಕುಂಬೇರ ಶರು ಸುಬ್ಬಯ್ಯನವರು ಆ ಕಾಲಕ್ಕೆ ಚೆನ್ನೆöÊನ ಪೆಸ್ಟ್ ಕಂಟ್ರೋಲ್ ಆ¥s಼ï ಇಂಡಿಯಾದಲ್ಲಿ, ಕೃಷಿವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು ಮತ್ತು ವಿರಾಜಪೇಟೆಯ ಹೊರವಲಯದಲ್ಲಿದ್ದ ಅವರ ಮನೆಗೆ ಆಗಾಗ ಬಂದುಹೋಗುತ್ತಿದ್ದರು. ಅವರೊಬ್ಬ ಹವ್ಯಾಸಿ ಪಕ್ಷಿವೀಕ್ಷಕ. ಅವರ ಮನೆಯ ಸುತ್ತುಮುತ್ತಲ ಪಕ್ಷಿಗಳನ್ನು ಪರಿಚಯಿಸಲು ಪ್ರಮೋದ್‌ರನ್ನು ತಮ್ಮ ಮನೆಗೆ ಬರಲು ಆಹ್ವಾನಿಸುತ್ತಿದ್ದರು.
ಒಂದು ಭಾನುವಾರ ಬೆಳಿಗ್ಗೆ ನಾವಿಬ್ಬರೂ ಶರು ಸುಬ್ಬಯ್ಯನವರ ಮನೆಗೆ ಹೋದೆವು. ಆ ದಿವಸ ನಾನು ಮೊದಲ ಬಾರಿಗೆ ಹಕ್ಕಿಗಳನ್ನು ಗುರುತಿಸಲು ಕಲಿತೆ. ಅಲ್ಲಿಂದ ಮುಂದೆ ಡಾ. ಸಲೀಂ ಅಲಿಯವರು ಬರೆದ ಸಮಗ್ರ ಭಾರತದ ಹಕ್ಕಿಗಳ ಪುಸ್ತಕ ನನ್ನ ಎಡೆಬಿಡದ ಮಾರ್ಗದರ್ಶಿಯಾಯಿತು. ಪ್ರತಿದಿನ ಬೆಳಿಗ್ಗೆ ಊರಿನ ಸುತ್ತುಮುತ್ತಲ ದೇವರಕಾಡುಗಳಲ್ಲಿ, ಎಸ್ಟೇಟುಗಳಲ್ಲಿ, ಕುರುಚಲು-ವಿರಳ ಕಾಡುಗಳಲ್ಲಿ ದುರ್ಬೀನಿನ ಸಹಾಯದಿಂದ ಪಕ್ಷಿವೀಕ್ಷಣೆಯನ್ನು ಮಾಡುತ್ತ ಬಂದೆ. ಅದರೊಂದಿಗೆ ನನ್ನ ಗಮನಕ್ಕೆ ಬಂದ ಹಲವಾರು ವಿಚಾರಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತ ಬಂದೆ. ಜೊತೆ ಜೊತೆಯಲ್ಲಿಯೇ ಹಕ್ಕಿಗಳ ವಿವಿಧ ಪ್ರಭೇದಗಳನ್ನು ನೋಡಿ, ಅವುಗಳ ಧ್ವನಿಯನ್ನು ಕೇಳಿ, ಗುರುತಿಸುವ ಕಲೆ ನನಗೆ ಕರಗತವಾದುವು. ವರ್ಷಗಳು ಕಳೆದಂತೆ, ಕೊಡಗಿನ ಹಕ್ಕಿಗಳ ಮಾಹಿತಿಗಳನ್ನು ಕುರಿತಂತೆ ಟಿಪ್ಪಣಿಗಳ ದೊಡ್ಡ ಸಂಗ್ರಹವೇ ನನ್ನದಾಯಿತು.
ಪಕ್ಷಿವೀಕ್ಷಣೆಯೆಂಬ ಅತ್ಯಂತ ಮನೋಲ್ಲಾಸಕರ ಹವ್ಯಾಸ ನನ್ನಲ್ಲಿ ಬೆಳೆದಂತೆ, ಪ್ರಕೃತಿಯೊಂದಿಗೆ ನನ್ನ ಅವಿನಾಸಂಬAಧ ಇನ್ನೂ ಗಟ್ಟಿಯಾಯಿತು. ಪಕ್ಷಿಗಳು ಒಂದು ಭೂ ಆವಾಸದ ವಸ್ತುಸ್ಥಿತಿಯ ಕನ್ನಡಿಯಿದ್ದಂತೆ. ಮಾನವನ ಸ್ವಾರ್ಥ, ದುರಾಸೆ, ಕ್ರೂರತೆಯಿಂದಾಗಿ ಇಂದು ಎಷ್ಟೋ ಜೀವಿಗಳು ಕಣ್ಮರೆಯಾಗಿವೆ. ಜನಸಂಖ್ಯಾ ಸ್ಫೋಟ, ನಗರೀಕರಣ, ಔದ್ಯೋಗೀಕರಣ, ಆಧುನಿಕ ಬೇಸಾಯದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ರಾಸುಗಳ ಮೇವಿಗೆ ಕಾಡುಗಳ ಬಳಕೆ, ಪ್ರಾಣಿಹತ್ಯೆ ಮುಂತಾದ ದುಷ್ಪರಿಣಾಮಗಳಿಂದ ಇಂದು ಎಷ್ಟೋ ಪಕ್ಷಿಸಂಕುಲಗಳು ವಿನಾಶದ ಹಾದಿ ಹಿಡಿದಿವೆ. ವೇಗವಾಗಿ ನಡೆಯುತ್ತಿರುವ ಈ ಬದಲಾವಣೆಗಳನ್ನು ಸೈರಿಸಿಕೊಂಡು ಬಾಳುವ ಶಕ್ತಿ ಕೆಲವು ಹಕ್ಕಿಗಳಿಗಿದ್ದರೂ, ಅನೇಕ ಪಕ್ಷಿಗಳಿಗೆ ಇದು ದುಸ್ಸಾಹಸವಾಗಿ ತೋರುತ್ತದೆ. ಪರಿಸರದಲ್ಲಿ ಕನಿಷ್ಟ ಬದಲಾವಣೆಗಳಾದರೂ ಇಂತಹ ಹಕ್ಕಿಗಳ ಸಂಖ್ಯೆ ಮತ್ತು ನಡೆವಳಿಕೆಯಲ್ಲಿ ಗಣನೀಯ ವ್ಯತ್ಯಾಸಗಳಾಗಿ ಬಿಡುತ್ತವೆ. ಆರೋಗ್ಯಕರ ನೈಸರ್ಗಿಕ ವಾತಾವರಣದ ಸೂಚಕಗಳಾಗಿರುವ ಈ ಹಕ್ಕಿಗಳು ಪರಿಸರ ಸಂರಕ್ಷಣೆಯ ಕೀಲಿಕೈಗಳು.ಶಾಲಾ ಕಾಲೇಜುಗಳಲ್ಲಿ, ರೇಡಿಯೋ-ದೂರದರ್ಶನ ಮಾಧ್ಯಮಗಳಲ್ಲಿ ಹಾಗೂ ಹಲವಾರು ಸಂಘ-ಸAಸ್ಥೆಗಳ ವೇದಿಕೆಯಲ್ಲಿ, ಕೊಡಗಿನ ಜೀವವೈವಿಧ್ಯತೆ, ಪ್ರಾಣಿಪಕ್ಷಿಸಂಕುಲದ ಪ್ರಾಮುಖ್ಯತೆ ಮತ್ತು ಅವುಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ನಮ್ಮ ಹೊಣೆಗಾರಿಕೆ, ಮುಂತಾದುವುಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ನೀಡುತ್ತ ಬಂದೆ.
ಈ ಎಲ್ಲ ಪ್ರಕ್ರಿಯೆಗಳು, ಅದರೊಂದಿಗೇ ನನ್ನಲ್ಲಿ ಮತ್ತೊಂದು ಹೊಸ ಹವ್ಯಾಸಕ್ಕೆ ಎಡೆ ಮಾಡಿಕೊಟ್ಟವು. ವರ್ಷಂಪ್ರತಿ ಅಕ್ಟೋಬರ್ ಮೊದಲ ವಾರ ಭಾರತ ದೇಶದಾದ್ಯಂತ ಎಲ್ಲೆಡೆ ವನ್ಯಜೀವಿ ಸಪ್ತಾಹವನ್ನು ಆಚರಿಸಲ್ಪಡುತ್ತದೆ. ಅದರ ಅಂಗವಾಗಿ ನಾನು ಅಂಚೆಪತ್ರಗಳ
ಅಳತೆಯ ಕಾರ್ಡುಗಳಲ್ಲಿ ಪಕ್ಷಿ-ಪ್ರಾಣಿಗಳ ಚಿತ್ರಗಳನ್ನು ಚಿತ್ರಿಸಿ, ಅವುಗಳೊಂದಿಗೆ ಒಂದು ವನ್ಯಜೀವಿ ಸಂರಕ್ಷಣೆಯ ಸಂದೇಶವನ್ನು ಸಾರುವ, ವನ್ಯಜೀವಿ ಸಂದೇಶ ಪತ್ರಗಳನ್ನು ಆಸಕ್ತರಿಗೆ ಕಳುಹಿಸತೊಡಗಿದೆ. ವಿವಿಧ ಮಾಧ್ಯಮಗಳಲ್ಲಿ ನನ್ನ ಸಂದೇಶ ಪತ್ರಗಳ ಬಗ್ಗೆ ಪ್ರಚಾರವಾಗುತ್ತಿದ್ದಂತೆ, ನನ್ನ ಈ ಹವ್ಯಾಸ ಬದ್ಧತೆಯ ರೂಪ ಪಡೆಯಿತು. ಪ್ರತಿವರ್ಷ ಹದಿನೈದರಿಂದ ಹದಿನೆಂಟು ಪ್ರಾಣಿ-ಪಕ್ಷಿಗಳ ಚಿತ್ರಗಳಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವನ್ಯಜೀವಿ ಸಂದೇಶ ಪತ್ರಗಳನ್ನು ಚಿತ್ರಿಸಿ ಅವುಗಳನ್ನು ಪ್ರಪಂಚದಾದ್ಯAತ ಅಂಚೆಯಲ್ಲಿ ಕಳುಹಿಸುವ ಕಾಯಕ ನನ್ನದಾಯಿತು. ಕಳೆದ ೩೬ ವರ್ಷಗಳಲ್ಲಿ ಈ ಸಂಖ್ಯೆ ೭೨,೬೫೫ ತಲುಪಿದೆ!
ಕೊಡಗಿನಲ್ಲಿ ಪಕ್ಷಿವೀಕ್ಷಣೆ, ಕೊಡಗಿನ ಹಕ್ಕಿಗಳ ವೈಜ್ಞಾನಿಕ ಅಧ್ಯಯನ, ಪ್ರಮಾಣೀಕರಣ ಮತ್ತು ಅವುಗಳ ಸೂಕ್ತ ಪ್ರಕಟಣೆ ಹಲವು ಹಂತಗಳಲ್ಲಿ ನಡೆದಿವೆ. ಕೊಡಗಿನ ಹಕ್ಕಿಗಳ ದಾಖಲೀಕರಣಕ್ಕೆ ಸುಮಾರು ನೂರು ವರ್ಷಗಳ ಇತಿಹಾಸವಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
೧೯೨೪. ಇಂಗ್ಲೆAಡಿನ ಕಾರ್ನ್ವಾಲ್ ಜಿಲ್ಲೆಯಲ್ಲಿ ಜನಿಸಿದ ¥s಼ೆ್ರಡ್ರಿಕ್ ನಿಕೊಲ್ಸನ್ ಬೆಟ್ಟ್÷್ಸಗೆ ಮೊದಲಿನಿಂದಲೂ ಪ್ರಕೃತಿ ಸೌಂದರ್ಯ, ಪಕ್ಷಿ-ಪತಂಗಗಳೆAದರೆ ಬಹಳ ಪ್ರೀತಿ. ಆತನದ್ದು ಅಧ್ಯಯನಶೀಲ ಮತ್ತು ಸಾಹಸ ಪ್ರವೃತ್ತಿ. ಸ್ನೇಹಿತರು ಅವನನ್ನು ಪ್ರೀತಿಯಿಂದ ಟಿಮ್ ಎಂದು ಕರೆಯುತ್ತಿದ್ದರು. ಇಂಗ್ಲೆAಡ್‌ನ ವಿಂಚೆಸ್ಟರ್ ಕಾಲೇಜಿನಿಂದ ಓದು ಮುಗಿಸಿದ ನಂತರ, ಯೌವ್ವನದ ಹುಮ್ಮಸ್ಸು ಹಾಗೂ ಅದಮ್ಯ ಪ್ರಕೃತಿಪ್ರೇಮ, ನಿಸರ್ಗದ ಮಡಿಲಿನಲ್ಲಿಯೇ ತನ್ನ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಒಂದು ಸೂಕ್ತ ಕೆಲಸ ಹುಡುಕಲು ಪ್ರೇರೇಪಿಸಿದವು. ಮೊದಲಿಗೆ ಟಿಮ್ ಶ್ರೀಲಂಕಾದ ಟೀ ಎಸ್ಟೇಟುಗಳಲ್ಲಿ ಕೆಲಸ ಮಾಡಿದ. ಅಲ್ಲಿಂದ ಆತನನ್ನು ಕೊಡಗಿನ ಕಾಫಿû, ಏಲಕ್ಕಿ ಎಸ್ಟೇಟುಗಳ ಮೇಲ್ವಿಚಾರಕನಾಗಿ ವರ್ಗಾವಣೆ ಮಾಡಲಾಯಿತು.
ಕೊಡಗಿನ ಸೋಮವಾರಪೇಟೆಯ ಕೂವರ್ ಕೊಲ್ಲಿ ಮತ್ತು ಪಾಲಿಬೆಟ್ಟದ ಎಮ್ಮೆಗುಂಡಿ ಎಸ್ಟೇಟುಗಳಲ್ಲಿ ಸುಮಾರು ಐದು ವರ್ಷಗಳ ಕಾಲ ಎಸ್ಟೇಟು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ. ಈ ಸಮಯದಲ್ಲಿ ಕೊಡಗಿನ ಹಕ್ಕಿಗಳ ಜೀವನಶೈಲಿಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಾ ಅವುಗಳ ಬಗ್ಗೆ ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ. ಪಕ್ಷಿಗಳ ವಿವಿಧ ಪ್ರಭೇದಗಳನ್ನು ಗುರುತಿಸಿ, ಹಕ್ಕಿಗಳ ಚಲನವಲನ, ನಡೆವಳಿಕೆ, ಅವುಗಳ ವಲಸೆ ಪ್ರಕ್ರಿಯೆ ಮತ್ತು ಕೊಡಗಿನ ವಿವಿಧ ಭೂ ಆವಾಸಗಳ ವೈವಿಧ್ಯತೆಗಳನ್ನು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ವ್ಯಾಸಂಗ ಮಾಡಿದ.
ಟಿಮ್ ಕೊಡಗಿನಲ್ಲಿ ನಡೆಸಿದ ಹಲವಾರು ಪರಿಶೋಧನಾತ್ಮಕ ಲೇಖನಗಳು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ನಿಯತ ಪತ್ರಿಕೆಯಲ್ಲಿ ನಿರಂತರವಾಗಿ ಪ್ರಕಟವಾದುವು. ಕೊಡಗಿನ ಹಕ್ಕಿಗಳ ಬಗೆಗಿನ ಅವನ ಕಾರ್ಯಗಳು, ದಾಖಲೆಗಳು ಇಂದಿಗೂ ಎಲ್ಲರಿಗೂ ದಾರಿದೀಪವಾಗಿವೆ. ಈ ಇಡೀ ಅಧ್ಯಯನವನ್ನು ತನ್ನ ಸ್ವಂತ ಅನುಭವದ ಆಧಾರದಲ್ಲಿಯೇ ನಡೆಸಿ, ಒಟ್ಟು ೨೭೯ ಪಕ್ಷಿ ಪ್ರಭೇದಗಳನ್ನು ಗುರುತಿಸಿ ದಾಖಲಿಸಿದ್ದ. ಆತ ಕೊಡಗಿನ ಪಕ್ಷಿಲೋಕದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದ ಮತ್ತು ಪಕ್ಷಿಗಳ ಛಾಯಾಗ್ರಹಣದ ಮೊದಲಿಗ ಎಂದು ಹೇಳಬಹುದು.
ಅಲ್ಲಿಂದ ೧೯೨೯ರಲ್ಲಿ ಟಿಮ್ ಬ್ರಿಟಿಷ್ ಸೇನೆಯನ್ನು ಸೇರಿದ. ಪಂಜಾಬ್ ರೆಜಿಮೆಂಟ್‌ನಲ್ಲಿ ಕ್ಯಾಪ್ಟನ್ ಆಗಿ ಸೇರಿದ ಆತ ಮುಂದೆ ಲೆಫಿû್ಟನೆಂಟ್ ಕರ್ನಲ್ ಆಗಿ, ಅಸ್ಸಾಂ ಬುಡಕಟ್ಟು ಜನರ ಸಹಾಯದಿಂದ, ಬರ್ಮಾದ ಗೆರಿಲ್ಲಾಗಳನ್ನು ಸದೆಬಡಿದ. ಆ ಸಮಯದಲ್ಲಿಯೇ, ಅಲ್ಲಿಯ ನಾಗಾ ಸಮುದಾಯದ ಅಧ್ಯಯನ ನಡೆಸುತ್ತಿದ್ದ ಉರ್ಸುಲಾ ಗ್ರಾಹಂ ಬೋವರ್ ಎಂಬ ಸಾಹಸಿ ಯುವತಿಯನ್ನು ವಿವಾಹವಾದ. ಈ ದಂಪತಿಗಳಿಗೆ ಎರಡು ಮಕ್ಕಳು. ಹೋದ ಎಲ್ಲೆಡೆ ಟಿಮ್ ತನ್ನ ಹವ್ಯಾಸಗಳನ್ನು ಮುಂದುವರೆಸಿದ.
೧೯೩೯. ಆ ವೇಳೆಗೆ ಭಾರತದ ಪಕ್ಷಿತಜ್ಞರೆಂದೇ ಹೆಸರುವಾಸಿಯಾಗಿದ್ದ ಡಾ. ಸಲೀಂ ಅಲಿಯವರು ಭಾರತ ದೇಶದ ಹಲವು ಪ್ರಾಂತಗಳಲ್ಲಿ ಪಕ್ಷಿಗಳ ವಿವರಣಾತ್ಮಕ, ವೈಜ್ಞಾನಿಕ ಸಮೀಕ್ಷಣೆಗಳನ್ನು ನಡೆಸಿದ್ದರು ಮತ್ತು ಆ ಬಗ್ಗೆ ಹಲವಾರು ಪುಸ್ತಕಗಳನ್ನೂ, ಲೇಖನಗಳನ್ನೂ ಪ್ರಕಟಿಸಿದ್ದರು. ಆ ವೇಳೆಗೆ ಟಿಮ್ ನಡೆಸಿದ ಅನೇಕ ಸಂಶೋಧನೆಗಳನ್ನು ಡಾ. ಅಲಿಯವರು ಅನುಸರಿದರು.
ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ರವರು ಡಾ. ಸಲೀಂ ಅಲಿಯವರಿಗೆ ಮೈಸೂರು ಸಂಸ್ಥಾನದ, ಸಕಲ ಪಕ್ಷಿ ಸಂಕುಲದ ಅನ್ವೇಷಣೆ ಮಾಡುವ ಜವಾಬ್ದಾರಿ ವಹಿಸಿದರು. ಅದೇ ವೇಳೆಗೆ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಕೊಡಗಿನ ಹಕ್ಕಿಗಳ ಬಗೆಗೂ ಅಧ್ಯಯನ ನಡೆಸಲು ಬ್ರಿಟಿಷ್ ಸರ್ಕಾರ ಡಾ. ಅಲಿಯವರನ್ನು ಕೇಳಿಕೊಂಡಿತು. ಕೊಡಗಿನಲ್ಲಿ ಎ¥s಼ï.ಎನ್.ಬೆಟ್ಸ್ ಅಲ್ಲಿಯವರೆಗೆ ನಡೆಸಿದ್ದ ಅಧ್ಯಯನ ಕಾರ್ಯವನ್ನು ಡಾ. ಅಲಿಯವರು ಮುಂದುವರೆಸಿದರು. ದುರದೃಷ್ಟವಶಾತ್, ಅದಾದ ಕೆಲವೇ ತಿಂಗಳುಗಳಲ್ಲಿ, ಅಂದರೆ ೧೯೩೯ರಲ್ಲಿ, ಅವರ ಪತ್ನಿಯ ಅಕಾಲ ಮರಣದಿಂದಾಗಿ, ಅವರು ತುರ್ತಾಗಿ ಬೊಂಬಾಯಿಗೆ ಹಿಂದಿರುಗಬೇಕಾಯಿತು.
ಅಲ್ಲಿಂದ ಮುಂದಕ್ಕೆ ಕೊಡಗಿನ ಪಕ್ಷಿ ಸಂಕುಲದ ಅಧ್ಯಯನ ಕಾರ್ಯ ಮತ್ತು ದಾಖಲೀಕರಣದ ಕಾರ್ಯ ಹಲವಾರು ದಶಕಗಳ ಕಾಲ ನಿಂತೇ ಹೋಯಿತು.
೨೦೦೨. ಮಡಿಕೇರಿಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಅಂದಿನ ಅಧ್ಯಕ್ಷರಾಗಿದ್ದ ಕರ್ನಲ್ ಚೆಪುö್ಪಡಿರ ಮುತ್ತಣ್ಣನವರು, ಉಪಾಧ್ಯಕ್ಷರಾಗಿದ್ದ ಶ್ರೀ ಕಾಕಮಾಡ ಚಂಗಪ್ಪನವರು ಮತ್ತು ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ. ಚೆಪುö್ಪಡಿರ ಕುಶಾಲಪ್ಪನವರು ಒಂದು ದಿನ ನನ್ನನ್ನು ಭೇಟಿ ಮಾಡಿದರು. ಕೊಡಗಿನ ಪಕ್ಷಿಸಂಕುಲದ ಒಂದು ಮಾಹಿತಿ ಪುಸ್ತಕವನ್ನು ರಚಿಸಲು ನನಗೆ ಆಗ್ರಹಿಸಿದರು. ಈ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ನೂರು ಹಕ್ಕಿಗಳುಳ್ಳ ಮಾಹಿತಿಯ ಹೊತ್ತಗೆಯನ್ನು ಪ್ರಕಟಿಸುವುದು ಅವರ ಉದ್ದೇಶವಾಗಿತ್ತು. ಹೇಗಿದ್ದರೂ ನನ್ನಲ್ಲಿ ಆ ವೇಳೆಗೆ ನಾನೇ ಚಿತ್ರಿಸಿದ ನೂರಾರು ಹಕ್ಕಿಗಳ ಚಿತ್ರಗಳ ಸಂಗ್ರಹವಿದ್ದಿತು. ಹಾಗಾಗಿ ಈ ಕೆಲಸ ಅಷ್ಟೇನೂ ಕಷ್ಟವಾಗಲಾರದು ಎಂದು ಭಾವಿಸಿ ಮರುಮಾತಿಲ್ಲದೆ ಒಪ್ಪಿಕೊಂಡೆ.
ಆ ದಿನದಿಂದ ಪುಸ್ತಕವನ್ನು ಬರೆಯಲು ಮಾಹಿತಿಗಳನ್ನು ಸಂಗ್ರಹಿಸಲು ತೊಡಗಿದೆ. ದಿನಗಳೆದಂತೆ ಈ ಕಾರ್ಯದ ವ್ಯಾಪ್ತಿಯ ಅರಿವು ನನಗೆ ಆಯಿತು. ಅಲ್ಲದೆ ಕೊಡಗಿನ ಕೇವಲ ನೂರು ಹಕ್ಕಿಗಳ ಪರಿಚಯಾತ್ಮಕ ಪುಸ್ತಕ ನನ್ನ ಕೆಲಸಕ್ಕೆ ನ್ಯಾಯ ದೊರಕಿಸಿ ಕೊಡುವುದಿಲ್ಲವೆಂದು ಅನಿಸಿತು. ಹಾಗಾಗಿ ಭಾರತ ದೇಶದಲ್ಲಿಯೇ ಇತಿಹಾಸ ಪ್ರಸಿದ್ಧವಾದ, ವಿಶಿಷ್ಟ ಸಂಸ್ಕöÈತಿ, ಭೂ ಆವಾಸ ಮತ್ತು ಹಿಂದಿನಿAದಲೂ ವಿಶೇಷ ಸ್ಥಾನವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಕಂಡುಬರುವ, ಸಮಗ್ರ ಪಕ್ಷಿಗಳ ಮಾಹಿತಿಯಿರುವ ಪುಸ್ತಕವನ್ನು ರಚಿಸುವುದೇ ಸೂಕ್ತವೆಂದು, ಈ ಬಗ್ಗೆ ಕೊ.ವ.ಸಂ.ಸ.ಯ ಅಧ್ಯಕ್ಷರೊಂದಿಗೆ ಮಾತನಾಡಿದೆ. ಕೂಡಲೇ ಅವರ ಒಪ್ಪಿಗೆಯೂ ದೊರಕಿತು. ಅದನ್ನು ಇಂಗ್ಲಿಷ್ ಮತ್ತು ಕನ್ನಡ -ಎರಡೂ ಭಾಷೆಗಳನ್ನೊಳಗೊಂಡ, ದ್ವಿಭಾಷಾ ಪುಸ್ತಕವನ್ನು ಬರೆಯಬೇಕೆಂದು ತೀರ್ಮಾನಿಸಿದೆ.
ಈ ಕಾರ್ಯಕ್ಕೆ ನನಗೆ ಸುಮಾರು ಎರಡು ವರ್ಷಗಳ ಕಾಲ ಹಿಡಿಸಿತು. ಮೊದಲಿಗೆ ಕೊಡಗಿನಲ್ಲಿ ಕಂಡುಬರುವ ೩೧೦ ಹಕ್ಕಿಗಳ ಸಂಪೂರ್ಣ ಪಟ್ಟಿ ರಚಿಸಿದೆ. ಅವುಗಳ ವೈಜ್ಞಾನಿಕ ನಾಮಗಳ ಮತ್ತು ಪ್ರಚಲಿತ ಇಂಗ್ಲಿಷ್ ಹೆಸರುಗಳ ಪಟ್ಟಿ ತಯಾರಾಯಿತು. ಇನ್ನು ಆ ಹಕ್ಕಿಗಳಿಗೆ ಪ್ರಾಮಾಣೀಕೃತ ಕನ್ನಡ ಭಾಷೆಯ ಹೆಸರುಗಳನ್ನು, ಹಲವಾರು ಪಕ್ಷಿ ಹಾಗೂ ಭಾಷಾ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಚರ್ಚಿಸಿ, ಪ್ರತಿಯೊಂದು ಹಕ್ಕಿಗೂ ಸೂಕ್ತ ಹೆಸರನ್ನು ಸೂಚಿಸಲಾಯಿತು. ಈ ಕಾರ್ಯದಲ್ಲಿ ನಾಡಿನ ಹೆಸರಾಂತ ಪರಿಸರ ತಜ್ಞರೂ, ಕನ್ನಡ ಭಾಷಾ ಪಂಡಿತರೂ ಸಹಾಯಹಸ್ತ ನೀಡಿದರು.
ಕೊನೆಗೆ ಈ ಹಕ್ಕಿಗಳಿಗೆ ಸಾಧ್ಯವಾದಷ್ಟು ಕೊಡವ ಹೆಸರುಗಳ ಮಾಹಿತಿಯನ್ನೂ ಸೇರಿಸುವ ಉದ್ದೇಶದಿಂದ, ಉತ್ತರದ ಕೊಡ್ಲೀಪೇಟೆಯಿಂದ, ದಕ್ಷಿಣದ ಕುಟ್ಟದವರೆಗೆ ಸಂಚರಿಸಿ, ಕೊಡಗಿನಲ್ಲಿಯೇ ತಮ್ಮ ಇಡೀ ಬದುಕನ್ನು ಸವೆಸಿ, ಕಾಡುಮೇಡುಗಳ ಸಾಕಷ್ಟು ಅನುಭವವುಳ್ಳ ಅನೇಕ ವಯೋವೃದ್ಧರನ್ನೂ, ಬುಡಕಟ್ಟು ಜನರನ್ನೂ ಭೇಟಿಮಾಡಿ, ಮಾಹಿತಿಯನ್ನು ಸಂಗ್ರಹಿಸಿದೆ. ಆಶ್ಚರ್ಯವೆಂದರೆ, ಈ ಮಂದಿಗೆ ಕೊಡಗಿನ ಬಹುತೇಕ ಪಕ್ಷಿಗಳ ಸ್ಥೂಲ ಪರಿಚಯವಿತ್ತು ಮತ್ತು ಅವುಗಳಿಗೆ ಅತ್ಯಂತ ಸೂಕ್ತ ಹೆಸರುಗಳು ಅವರಿಗೆ ತಿಳಿದಿತ್ತು!
ಅಲ್ಲಿಂದ ಪ್ರತಿಯೊಂದು ಪ್ರಭೇದದ ಹಕ್ಕಿಯ ಸಂಪೂರ್ಣ ಮಾಹಿತಿಯನ್ನು ಬರೆಯುವ ಕಾರ್ಯವನ್ನು ಹತ್ತು ಹಲವು ಪುಸ್ತಕಗಳ ನೆರವಿನಿಂದ, ಇಂಟರ್‌ನೆಟ್ ಜಾಲಗಳಿಂದ, ಹಲವಾರು ಪಕ್ಷಿತಜ್ಞರ ಸಹಾಯದಿಂದ ಮತ್ತು ನನ್ನ ವೈಯಕ್ತಿಕ ಟಿಪ್ಪಣಿಗಳನ್ನು ಆಧರಿಸಿ ಇಡೀ ಪುಸ್ತಕದ ಮೂಲಪಾಠವನ್ನು ಬರೆದೆ. ಇದನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳ ಇಬ್ಬರು ವಿಜ್ಞಾನಿಗಳಿಗೆ ಪ್ರತ್ಯೇಕವಾಗಿ ಕಳುಹಿಸಿ, ತಿದ್ದುಪಡಿಗಳನ್ನು ಮತ್ತು ಅವರ ಧನಾತ್ಮಕ ಅಭಿಪ್ರಾಯಗಳನ್ನು ಪಡೆದೆ.
ಎಲ್ಲಕ್ಕಿಂತ ಕೊನೆಗೆ ಹಕ್ಕಿಗಳ ಚಿತ್ರಗಳನ್ನು ಚಿತ್ರಿಸುವ ಕೆಲಸಕ್ಕೆ ಕೈ ಹಾಕಿದೆ. ಪ್ರತ್ಯೇಕವಾಗಿ ಒಂದೊAದು ಹಕ್ಕಿಯ ಚಿತ್ರವನ್ನೂ ದೊಡ್ಡ ಡ್ರಾಯಿಂಗ್ ಹಾಳೆಯಲ್ಲಿ ರೇಖಿಸಿ, ಸೂಕ್ತ ಬಣ್ಣಗಳನ್ನು ತುಂಬಿದೆ. ಇದೇ ಬಹು ದೊಡ್ಡ ಕೆಲಸವಾಯಿತು.
ಅಂಗೈ ಅಗಲದ ಕಾಡು ಬೆಳೆಸಲು ನಾವು ಹಾಕುವ ಯೋಜನೆಗಳೇನು? ಖರ್ಚೇನು? ಶ್ರಮವೇನು? ಆದರೆ ಪ್ರಪಂಚದ ಮೂರನೇ ಎರಡು ಭೂಭಾಗದಷ್ಟು ವಿಶಾಲವಾದ, ಸಮೃದ್ಧವಾದ, ವೈವಿಧ್ಯಮಯ ಕಾಡನ್ನು ಬೆಳೆಸಲು ಹಕ್ಕಿಗಳು ಮತ್ತು ಅವುಗಳಂತಹ ಇತರ ಸಣ್ಣಸಣ್ಣ ಜೀವಿಗಳೇ ಕಾರಣ ಎಂಬುದನ್ನು ನಾವು ಅರಿಯಬೇಕು. ಇವೆಲ್ಲವೂ, ಪಕ್ಷಿಗಳು ಪ್ರತಿದಿನ ನಾಲ್ಕಾರು ಹನಿ ಮಕರಂದ ಕುಡಿದು, ಹತ್ತಾರು ಕಾಡು ಹಣ್ಣುಗಳನ್ನು ತಿಂದು ಆ ಮೂಲಕ ಬೆಳೆಸಿದ ಅತ್ಯಪೂರ್ವ ಸಸ್ಯಸಂಪತ್ತು!
ಕಂಪ್ಯೂಟರ್‌ನಲ್ಲಿ ಸಾಕಷ್ಟು ತಂತ್ರಾAಶಗಳನ್ನು ಬಳಸಿ ಅನುಭವವಿದ್ದ ನನಗೆ ಇಡೀ ಪುಸ್ತಕವನ್ನು ಡಿಜಿಟಲೀಕರಣ ಮಾಡಲು ಕಷ್ಟವೆನಿಸಲಿಲ್ಲ. ಪುಸ್ತಕದ ರಕ್ಷಾಕವಚದಿಂದ ಹಿಡಿದು, ಕೊಡಗಿನ ಭೂಪಟವನ್ನೊಳಗೊಂಡ ವರ್ಣರಂಜಿತ ಪುಸ್ತಕ ತಯಾರಾಯಿತು. ನನ್ನ ಈ ಚೊಚ್ಚಲ ಪುಸ್ತಕಕ್ಕೆ ಇಂಗ್ಲಿಷಿನಲ್ಲಿ ಈeಚಿಣheಡಿeಜ ಎeತಿeಟs oಜಿ ಅooಡಿg ಮತ್ತು ಕನ್ನಡದಲ್ಲಿ ಕೊಡಗಿನ ಖಗರತ್ನಗಳು ಎಂದು ನಾಮಕರಣ ಮಾಡಿದೆ. ಸಿ.ಡಿ.ಯಲ್ಲಿ ಅದನ್ನು ಸುರಕ್ಷಿತವಾಗಿ ಸಂಗ್ರಹಿಸಿ, ನೇರವಾಗಿ ಮುದ್ರಣಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದೆ.
ನನ್ನ ಈ ಸಮಗ್ರ ಕಾರ್ಯದಲ್ಲಿ ನನಗೆ ಸಂಪೂರ್ಣ ಸಹಾಯ ಮತ್ತು ಸಹಕಾರ ನೀಡಿದ ಅನೇಕ ಗಣ್ಯರನ್ನು ನಾನು ಹೃದಯಪೂರ್ವಕವಾಗಿ ಮನಸಾರೆ ನಮಿಸುತ್ತೇನೆ. ೨೦೦೪ರಲ್ಲಿ ಮೊದಲ ಮುದ್ರಣವನ್ನು ಕಂಡ ಈ ಪುಸ್ತಕ, ಕೆಲವೇ ತಿಂಗಳುಗಳಲ್ಲಿ ದೇಶದಾದ್ಯಂತ ಹೆಸರು ಗಳಿಸಿ, ೨೦೦೮ರಲ್ಲಿ ಪರಿಷ್ಕöÈತ, ವಿಸ್ತöÈತ ಆವೃತ್ತಿಯನ್ನು ಕಂಡಿತು!
೨೦೧೦. ¥s಼Éಬ್ರವರಿ ತಿಂಗಳಿನಲ್ಲಿ ಟಿಮ್‌ನ ಇಬ್ಬರು ಪುತ್ರಿಯರು, ಕ್ಯಾಟ್ರಿಯೋನಾ ಮತ್ತು ಆ್ಯಲಿಸನ್, ಕೊಡಗಿಗೆ ಭೇಟಿ ನೀಡಿ, ಅವರ ತಂದೆಯವರು ಕೆಲಸ ಮಾಡಿದ ಎಸ್ಟೇಟುಗಳನ್ನು ಸಂದರ್ಶಿಸಿದರು. ಆ ದಿವಸ, ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಡೀನ್ ಆಗಿರುವ ಪ್ರೊ. ಚೆಪುö್ಪಡಿರ ಕುಶಾಲಪ್ಪನವರು ನನಗೆ ಕರೆಮಾಡಿ, ಈ ವಿಷಯವನ್ನು ತಿಳಿಸಿದ ಮೇರೆಗೆ ನಾನು ಹಾತೂರಿನ ಬಳಿಯಿರುವ ದೇವರಕಾಡಿನಲ್ಲಿ ಟಿಮ್‌ನ ಇಬ್ಬರು ಪುತ್ರಿಯರನ್ನು ಭೇಟಿ ಮಾಡಿ, ಕೊಡಗಿನ ಖಗರತ್ನಗಳು ಪುಸ್ತಕದ ಪ್ರತಿಯನ್ನು ಅವರಿಗೆ ನೀಡಿದೆ. ಅವರೂ ಕೂಡ ನನ್ನಂತೆಯೇ ಹವ್ಯಾಸಿ ಖಗೋಳ ವೀಕ್ಷಕರಾದ್ದರಿಂದ ಆ ಸಂಜೆ ಶುಭ್ರವಾದ ಆಕಾಶ ನಕ್ಷತ್ರವೀಕ್ಷಣೆಗಾಗಿ ನಮಗೆ ತೆರೆದುಕೊಂಡಿತು.
ಈ ಭೇಟಿ, ನನ್ನ ಜೀವನದ ಬಹು ಮುಖ್ಯವಾದ ಘಟನೆಯಾಗಿತ್ತು. ಸುಮಾರು ನೂರು ವರ್ಷಗಳ ಹಿಂದೆ ಕೊಡಗಿನ ಪಕ್ಷಿಲೋಕದ ಪಿತಾಮಹನೆನಿಸಿದ್ದ ಲೆಫಿû್ಟನ್‌ಂಟ್ ಕರ್ನಲ್ ¥s಼É್ರಡ್ರಿಕ್ ನಿಕೊಲ್ಸನ್ ಬೆಟ್ಟ್÷್ಸನಿಂದ ಕೊಡಗಿನ ಹಕ್ಕಿಗಳ ಆಧ್ಯಯನದ ಪ್ರಾರಂಭವಾಗಿತ್ತು. ಆ ಕಾರ್ಯ ನನ್ನ ಪುಸ್ತಕದೊಂದಿಗೆ ಸಂಪೂರ್ಣಗೊAಡಿತ್ತು!
-ಡಾ| ಎಸ್. ವಿ. ನರಸಿಂಹನ್, ವಿರಾಜಪೇಟೆ





No comments:
Post a Comment