ಮಾನವೀಯತೆಯನ್ನು ಮೆರೆಯಿರಿ, ಜೀವಜಲದ ಗುಟುಕು ನೀಡಿ
ಕೊಡಗಿನಲ್ಲಿರುವ ನಾವೆಲ್ಲ ಪುಣ್ಯವಂತರೆAದೇ ಹೇಳಬೇಕು. ಸಹಜವಾಗಿಯೇ ನಾವೆಲ್ಲರೂ ಪ್ರಕೃತಿ ಪ್ರೇಮಿಗಳು! ಏಕೆಂದರೆ, ನಮ್ಮ ಎಲ್ಲರ ಮನೆಯ ಮುಂದುಗಡೆ ಮತ್ತು ಹಿಂಬದಿಗಳಲ್ಲಿ ಸ್ವಲ್ಪವಾದರೂ ಜಾಗಗಳಿರುತ್ತವೆ. ಮನೆಗಳ ಮುಂಭಾಗದಲ್ಲಿ ಹೂಗಿಡಗಳನ್ನೂ, ಹಿತ್ತಲು ಜಾಗಗಳಲ್ಲಿ ಕಾಯಿಪಲ್ಲೆ ತರಕಾರಿ ಗಿಡಗಳನ್ನೂ ಬೆಳೆಸಿಕೊಳ್ಳುವುದು ಕೊಡಗಿನ ಸ್ತಿçÃಯರ ಸಂಪ್ರದಾಯವೇ ಆಗಿದೆ. ಇದರಲ್ಲಿ ಸಾರ್ವಕಾಲಿಕ ಹೂಗಿಡಗಳಾದ ಸೇವಂತಿಗೆ, ದಾಸವಾಳ, ಕಾಕಡ, ಗುಲಾಬಿ ಮುಂತಾದುವುಗಳಿದ್ದರೆ, ಋತುಮಾನಕ್ಕೆ ತಕ್ಕಂತೆ ಬೆಳೆಯುವ ಡೇಲಿಯಾ, ಮಲ್ಲಿಗೆ, ಗೊರಟೆ ಇವುಗಳು ವಾಡಿಕೆಯಂತೆ ಬೆಳೆಸುತ್ತಾರೆ.
ಜನಸಂಖ್ಯೆ ಹೆಚ್ಚಿದಂತೆ, ಸಣ್ಣ ಸಣ್ಣ ಹಳ್ಳಿಗಳೂ ವ್ಯಾಪಾರ ಕೇಂದ್ರಗಳಾಗುತ್ತಿವೆ. ಎಲ್ಲೆಡೆ ಕಾಂಕ್ರೀಟ್ ಕಟ್ಟಡಗಳು ತಲೆಯೆತ್ತುತ್ತಿವೆ. ರಸ್ತೆ ಇಬ್ಬದಿಗಳಲ್ಲಿ ಇರುತ್ತಿದ್ದ ಗದ್ದೆಗಳೆಲ್ಲ ನಿರ್ನಾಮವಾಗಿವೆ. ಸದಾ ಹಚ್ಚ ಹಸುರಾಗಿ ಕಂಗೊಳಿಸುತ್ತಿದ್ದ ಕೊಡಗಿನ ಪರಿಸರ ಇಂದು ಬೆಂಗಾಡಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜನಸಂಖ್ಯೆ ಹೆಚ್ಚಿದಂತೆ ಈಗೀಗ ಪಟ್ಟಣಗಳಲ್ಲಿಯೂ ಬಹುಮಹಡಿ ಕಟ್ಟಡಗಳು ತಲೆಯೆತ್ತುತ್ತಿವೆ. ಹೀಗಾಗಿ ನರ್ಸರಿಗಳಿಂದ ಹೂಕುಂಡಗಳನ್ನು ತಂದು ಅವುಗಳನ್ನು ಅಲಂಕಾರಿಕವಾಗಿ ಜೋಡಿಸುವ ಪರಿಪಾಠವನ್ನೂ ನಾವು ಕಾಣುತ್ತಿದ್ದೇವೆ. ಈ ಗಿಡಗಳಿಗೆಲ್ಲ ನೀರನ್ನು ಪೂರೈಸುವ ಕಾರ್ಯವೂ ಸುಲಭವೇನಲ್ಲ.
ಒಂದು ಕಾಲದಲ್ಲಿ ವರ್ಷವಿಡೀ ಎಲ್ಲಿಯೂ ನೀರಿನ ಸೆಲೆಗಳು ಬತ್ತದೆ, ಎಂತಹ ಉರಿಬಿಸಿಲಿನಲ್ಲಿಯೂ ಸದಾ ನೀರು ದೊರಕುತ್ತಿದ್ದ ನಮ್ಮ ಕೊಡಗಿನಲ್ಲಿಯೂ ಕಳೆದ ಎರಡು ದಶಕಗಳಿಂದ ಬಿಸಿಲುಗಾಲದಲ್ಲಿ ನೀರಿಗೆ ಬರಗಾಲ ಕಂಡುಬರುತ್ತಿದೆ. ಯಾವ ಕಾಲಕ್ಕೂ ಹೊರಗಿನ ವಾತಾವರಣದ ಉಷ್ಣಾಂಶ ೨೫ ಡಿಗ್ರಿ ಸೆಲ್ಷಿಯಸ್ ದಾಟದ ನಾಡಿನಲ್ಲಿ ಈವತ್ತು ಅದು ೩೦-೩೨ ಟಿಗ್ರಿಗಳಿಗೆ ಏರುವುದು ಸಾಮಾನ್ಯವಾಗಿದೆ.
ಮಾರ್ಚ್ ತಿಂಗಳು ¨ಂದರೆ ಬಿಸಿಲುಗಾಲ. ನೀರಿನ ಮೂಲಗಳು ಒಣಗುತ್ತಿದ್ದಂತೆ, ಸಣ್ಣ ಸಣ್ಣ ಕೆರೆ, ತೊರೆ, ತೋಡು, ಬಾವಿಗಳು ಬತ್ತಿ ಹೋಗುತ್ತವೆ. ಅಲ್ಲಿಂದ ಮುಂದಿನ ಮೂರು ತಿಂಗಳು ಅಂದರೆ, ಮಾಚ್Àð, ಏಪ್ರಿಲ್, ಮೇ ತಿಂಗಳು ಎಲ್ಲೆಡೆ ನೀರಿಗಾಗಿ ಹಾಹಾಕಾರವನ್ನು ಕಾಣುತ್ತೇವೆ. ಕಳೆದ ಸಾಲಿನಲ್ಲಿ ಮಳೆಗಾಲದಲ್ಲಿ ನಿರೀಕ್ಷಿತ ಮಳೆ ಬಂದಿಲ್ಲವಾದ್ದರಿAದ ಈ ವರ್ಷ ಈಗಾಗಲೇ ಈ ಪರಿಸ್ಥಿತಿ ಎದುರಾಗಿದೆ. ವಾಡಿಕೆಯಂತೆ ಕಾಫಿ ತೋಟಗಳಿಗೆ ಅವಶ್ಯವಾಗಿ ಬರಬೇಕಿದ್ದ ಒಂದೆರಡು ಹೂಮಳೆ ಈ ವರ್ಷ ಕೈಕೊಟ್ಟಿದೆ.
ಹೀಗಾಗಿ ಮನೆಗಳ ನಿತ್ಯ ಉಪಯೋಗಕ್ಕೆ, ಕುಡಿಯಲಿಕ್ಕೆ ಮತ್ತು ಇನ್ನಿತರ ಬೇರೆ ಬೇರೆ ಕಾರಣಗಳಿಗಾಗಿ ನೀರಿನ ಅವಶ್ಯಕತೆ ಹೆಚ್ಚುತ್ತಲೇ ಇದೆ.
ಮನುಷ್ಯರು ಮಾತ್ರವಲ್ಲದೆ, ಪ್ರಾಣಿ-ಪಕ್ಷಿಗಳು ಕೂಡ ಈ ಬಿಸಿಲಿನ ಧಗೆಗೆ ತತ್ತರಿಸಿ ಹೋಗುತ್ತಿವೆ. ಕಾಡಿನಲ್ಲಿರುವ ಜೀವಿಗಳು ಹೇಗೋ ಸುಧಾರಿಸಿಕೊಳ್ಳಬಹುದು. ಆದರೆ, ಜನವಸತಿಯೊಂದಿಗೆ ತಮ್ಮ ಜೀವಮಾನವನ್ನು ಕಳೆಯುವ ಅನೇಕ ಜೀವಿಗಳಿಗೆ ಇದು ದುಸ್ಸಹವಾಗುತ್ತದೆ.
ಮಿತ್ರರೆ, ನಮ್ಮೊಂದಿಗೇ ತಮ್ಮ ಇಡೀ ಸಂಸಾರವನ್ನು ಕಟ್ಟಿ ಬೆಳೆಸುವ ಗುಬ್ಬಚ್ಚಿ, ಪಿಕಳಾರ ಹಕ್ಕಿಗಳಲ್ಲದೆ ಸಿಂಪಿಗ, ಮಡಿವಾಳ, ಮೈನಾ, ಕಾಗೆ, ಬೆಳ್ಗಣ್ಣ, ಚಂದ್ರಮುಕುಟ, ಕೋಳಿ, ಜೌಗುಕೋಳಿ, ಬದನಿಕೆ, ಟಿಟ್ಟಿಭ, ಪಾರಿವಾಳ, ಗಿಳಿ, ಗೂಬೆ, ಮಿಂಚುಳ್ಳಿ, ನೀಲಕಂಠ, ಉಲಿಯಕ್ಕಿ, ಚೇಕಡಿ, ರಾಟವಾಳ, ಕಾಳುಗುಬ್ಬಿ, ಬಾಳೆಗುಬ್ಬಿ, ಸೂರಕ್ಕಿ, ಬಕ-ಬೆಳ್ಳಕ್ಕಿ, ಕೆಂಬರಲು, ಪತ್ರಂಗ, ನೆಲಗುಬ್ಬಿ, ಕಲಿಂಗ, ಕಾಜಾಣ, ನೊಣಹಿಡುಕ, ಗೀಜಗ ಮುಂತಾದ ಅನೇಕ ಹಕ್ಕಿUಳಿವೆ. ಈ ಪಕ್ಷಿಗಳು ಮಾನವನ ಸಹಚಾರದಲ್ಲಿಯೇ ಜೀವನ ಕಂಡುಕೊಳ್ಳುತ್ತವೆ.
ಹೆಚ್ಚು ಬಿಸಿಲು ಇರುವ ಸಂದರ್ಭದಲ್ಲಿ ಇವು ನೀರು ಮಾತ್ರವಲ್ಲದೆ ಆಹಾರವೂ ಸಿಗದೆ ಬಳಲುವುದಿದೆ! ಸೂರ್ಯನ ಶಾಖಕ್ಕೆ ಬಸವಳಿಯುವ ಪಕ್ಷಿಗಳಿಗೆ ಸರಿಯಾದ ಸಮಯಕ್ಕೆ ನೀರು-ಆಹಾರ ದೊರಕದಿದ್ದರೆ, ಅವು ನಿತ್ರಾಣಗೊಂಡು ಅಲ್ಲಲ್ಲಿಯೇ ಬಿದ್ದು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಿಗೆ ತುತ್ತಾಗುತ್ತವೆ.
ನಮ್ಮ ಸುತ್ತಮುತ್ತಲೂ ಸದಾಕಾಲ ಸಂಭ್ರಮದಿAದ ಹಾರಾಡಿಕೊಂಡು, ತಮ್ಮ ಚಿಲಿಪಿಲಿ ಶಬ್ದದಿಂದ ನಮ್ಮೆಲ್ಲರ ಮನಸ್ಸನ್ನು ಮುದಗೊಳಿಸುವ ಈ ಪಕ್ಷಿಸಂಕುಲ, ಬಿಸಿಲಿನ ಝಳಕ್ಕೆ ತುತ್ತಾಗದಂತೆ ನೋಡಿಕೊಳ್ಳುವ ಮಾನವೀಯತೆ, ಹೊಣೆಗಾರಿಕೆ ನಮ್ಮೆಲ್ಲರ ಮೇಲೂ ಇದೆ. ಈ ಕೈಂಕರ್ಯದಲ್ಲಿ ನಾವೆಲ್ಲ ಭಾಗವಹಿಸೋಣ.
ನಾವೇನು ಮಾಡಬಹುದು?
• ಚಿಕ್ಕ ಚಿಕ್ಕ, ಅಗಲವಾದ ಮಣ್ಣಿನ ಮಡಿಕೆ ಅಥವಾ ಬೋಗುಣಿಯಂತಹ ಪಾತ್ರೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಮನೆಯ ತಾರಸಿ, ಅಂಗಳ, ಅಥವಾ ಮರದ ಕೆಳಗಿನ ನೆರಳಿನಲ್ಲಿ ಇಡಿ. ಬಾಯಾರಿದ ಪಕ್ಷಿಗಳು ಅದನ್ನು ಕುಡಿದು ದಣಿವಾರಿಸಿಕೊಳ್ಳುತ್ತವೆ.
• ಸಾಧ್ಯವಾದರೆ, ಮನೆಯಂಗಳದಲ್ಲಿ ಅಗಲವಾದ ತೊಟ್ಟಿಗಳಲ್ಲಿ ನೀರನ್ನು ಶೇಖರಿಸಿ ಇಡಿ. ಬಿಸಿಲಿನ ಧಗೆಗೆ ದೇಹವನ್ನು ತಂಪಾಗಿರಿಸಲು ಅನೇಕ ಹಕ್ಕಿಗಳು ನೀರನ್ನು ಕಂಡೊಡನೆ ಅದರಲ್ಲಿ ಮುಳುಗಿ ಸ್ನಾನ ಮಾಡುತ್ತವೆ!
• ದೊಡ್ಡ ದೊಡ್ಡ ಬಕೆಟ್‌ಗಳಲ್ಲಿ ಡ್ರಮ್‌ಗಳಲ್ಲಿ ನೀರನ್ನು ಇಡಬೇಡಿ. ಅದರಲ್ಲಿ ಹಕ್ಕಿಗಳು ಮುಳುಗಿ ಸಾಯುವ ಸಾಧ್ಯತೆಯಿದೆ.
• ಬೇಸಿಗೆಯ ಈ ಸಮಯದಲ್ಲಿ ಪಕ್ಷಿಗಳಿಗೆ ನೀವು ನೀರನ್ನು ಮಾತ್ರ ಕೊಟ್ಟರೆ ಸಾಕು. ಅದರೊಂದಿಗೆ ಆಹಾರವನ್ನೂ ಇಟ್ಟರೆ, ಎರಡು ಮೂರು ತಿಂಗಳಗಳ ಕಾಲ ಸುಲಭವಾಗಿ ದೊರಕುವ ಆಹಾರವನ್ನು ತಿಂದು ಅವು ನೈಸರ್ಗಿಕವಾಗಿ ತಮ್ಮ ಆಹಾರವನ್ನು ಸಂಪಾದಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಅಪಾಯವಿದೆ!
• ಅಷ್ಟಿಟ್ಟು ಕಾಳುಗಳನ್ನಲ್ಲದೆ, ಇನ್ನಾವುದೇ ಆಹಾರ ಪದಾರ್ಥಗಳನ್ನು ಹಕ್ಕಿಗಳಿಗೆ ತಿನ್ನಲು ನೀಡಬೇಡಿ. ನೆನಪಿಡಿ: ಯಾರಿಗೇ ಆಗಲಿ, ಹೆಚ್ಚು ಸಮಯ ಬಿಟ್ಟಿ ಊಟ ಕೊಟ್ಟರೆ, ಅವರು ಭಿಕ್ಷÄಕರಾಗುತ್ತಾರೆ!
• ಹೆಚ್ಚು ಹೆಚ್ಚು ಮಕ್ಕಳನ್ನು ಈ ಪ್ರಕ್ರಿಯೆಯಲ್ಲಿ ಭಾಗಿಗಳಾಗುವಂತೆ ಮಾಡಿ. ಬೇಸಿಗೆಯ ರಜೆಯಲ್ಲಿ ಇಂತಹ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವುದರಿಂದ ಮಕ್ಕಳಲ್ಲಿ ಸಹಜವಾಗಿ ಪ್ರಕೃತಿಪ್ರೇಮ ಬೆಳೆಯುತ್ತದೆ.
• ನೀವು ಹಕ್ಕಿಗಳಿಗೆ ಇಡುವ ನೀರನ್ನು ಎರಡು ದಿನಕ್ಕೊಮ್ಮೆ ಬದಲಾಯಿಸಿ.
• ಮನೆಯ ಸುತ್ತು ಮುತ್ತಲೂ ಸಾಧ್ಯವಾದಷ್ಟು ಹೂವು-ಹಣ್ಣು ಮತ್ತು ನೆರಳು ಕೊಡುವ ಗಿಡಮರಗಳನ್ನು ನೆಟ್ಟು ಬೆಳೆಸಿ. ಉರಿ ಬಿಸಿಲುಗಾಲದಲ್ಲಿ ಪ್ರಾಣಿ-ಪಕ್ಷಿಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ನಿಮಗೆ ಸದಾ ಋಣಿಗಳಾಗುತ್ತವೆ!
• ಜೀವಜಲವನ್ನು ಸಂರಕ್ಷಿಸಿ; ಮಿತವಾಗಿ ಬಳಸಿ; ಮತ್ತು ಸಾಧ್ಯವಾದಷ್ಟೂ ಪುನರ್ಬಳಸಿ.
ಬಿಸಿಲಿನ ಝಳಕ್ಕೆ ಬಸವಳಿಯುತ್ತಿರುವ ಪ್ರಾಣಿ-ಪಕ್ಷಿಗಳ ಮೊರೆಯನ್ನು ಕೇಳಿ!
ಇವು ದಣಿವಾದಾಗ ಜೀವಜಲ ಸಿಗದೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತಿದೆ.
ಕಾಂಕ್ರೀಟ್ ಕಾಡಿನಲ್ಲಿರುವ ಸಣ್ಣ ಪುಟ್ಟ ಜೀವಿಗಳಿಗೆ ಮಾನವತೆಯ ಹೃದಯ ಮಿಡಿಯಬೇಕಾಗಿದೆ.
ಇದಕ್ಕಾಗಿ ನಿಮ್ಮ ನಿಮ್ಮ ಮನೆಯ ತಾರಸಿಯ ಮೇಲೆ ನೀರನ್ನಿಟ್ಟು ಜೀವವುಳಿಸಿ!
ನಮ್ಮ ಎಲ್ಲ ಬೇಕು-ಬೇಡಗಳನ್ನು ಪೂರೈಸುವ ಪ್ರಕೃತಿ ನಮ್ಮಿಂದ ಇದಕ್ಕಿಂತ ಹೆಚ್ಚೇನೂ ಬಯಸುವುದಿಲ್ಲ!
- ಡಾ| ಎಸ್. ವಿ. ನರಸಿಂಹನ್,

No comments:
Post a Comment